VIDEO: ಗಣೇಶ ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರ ಭರ್ಜರಿ ಸ್ಟೆಪ್ಸ್​

news18
Updated:September 13, 2018, 3:35 PM IST
VIDEO: ಗಣೇಶ ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರ ಭರ್ಜರಿ ಸ್ಟೆಪ್ಸ್​
news18
Updated: September 13, 2018, 3:35 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಮುಳುಗಡೆ ನಗರಿ ಬಾಗಲಕೋಟೆ ಯಲ್ಲಿ ಗಣೇಶ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಗರದ ಬಸವೇಶ್ವರ ಸರ್ಕಲ್ ಬಳಿ ಗಣೇಶ್ ನ ಮೂರ್ತಿ ಮೆರವಣಿಗೆ ವೇಳೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಸಂಭ್ರಮಿಸಿದರು.

ಕಾಲೇಜಿನಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪಿಸಿರುವ ಹಿನ್ನೆಲೆ ಯಲ್ಲಿ ಡೋಲು ಕುಣಿತದೊಂದಿಗೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು  ಗಣೇಶ್ ಮೆರವಣಿಗೆ ನಡೆಸಿದರು. ಡೋಲು ಸದ್ದಿಗೆ ತಕ್ಕ ಹಾಗೆ ಸ್ಟೆಪ್ಸ್ ಹಾಕುವ ಮೂಲಕ ಕಾಲೇಜು ಹುಡುಗ-ಹುಡುಗಿಯರು ಎಲ್ಲರ ಗಮನವನ್ನು ಸೆಳೆದರು. ಅದರಲ್ಲೂ ವಿದ್ಯಾರ್ಥಿನಿಯರು ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಕುಣಿದು ಕುಪ್ಪಳಿಸಿದರು.


ಇನ್ನು ನಗರದ ಹಲವು ಭಾಗಗಳಲ್ಲಿ ಗಣೇಶ್ ಮೂರ್ತಿ, ಸಿಡಿಮದ್ದು ಮಾರಾಟ ಜೋರಾಗಿದೆ. ನಗರದ ಹಲವೆಡೆ ನಿನ್ನೆಯಿಂದಲೇ ಗಣೇಶನ ಮೂರ್ತಿಯ ಖರೀದಿಗೆ ಜನ ಸೇರಿರುವುದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
First published:September 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ