ಮಂಗಳೂರು (ಜನವರಿ 31): ಪೋಸ್ಟ್ ಕಾರ್ಡ್ ಎಂಬ ಡಿಜಿಟಲ್ ಮಾಧ್ಯಮದ ಮೂಲಕ ದೇಶಪ್ರೇಮವನ್ನು ಹರಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಪೋಸ್ಟ್ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಂ ಹೆಗಡೆ, ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರ ಎದುರು ‘ವಂದೇ ಮಾತರಂ’ ಹೇಳದೆ ಮೌನಕ್ಕೆ ಶರಣಾಗಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಹಿಂದಿನ ಮೈತ್ರಿ ಸರ್ಕಾರ 2019 ಏಪ್ರಿಲ್ 24 ರಂದು ಮಹೇಶ್ ವಿಕ್ರಮ್ ಹೆಗಡೆ ಅವರನ್ನು ಬಂಧಿಸಿತ್ತು ಎಂಬುದು ಗಮನಾರ್ಹ. ಇಂತಿಪ್ಪ ಮಹೇಶ್ ವಿಕ್ರಮ್ ಇಂದು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಲು ವಿಮಾನ ನಿಲ್ದಾಣ ತಲುಪಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿನಿಯರು ಅವರನ್ನು ಸುತ್ತುವರೆದಿದ್ದಾರೆ.
ಅಲ್ಲದೆ, ಪೋಸ್ಟ್ ಕಾರ್ಡ್ ಮೂಲಕ ಎಲ್ಲರಿಗೂ ದೇಶಪ್ರೇಮದ ಪಾಠ ಮಾಡುವ ನೀವು ದಯವಿಟ್ಟು ನಮ್ಮ ಜೊತೆ “ವಂದೇ ಮಾತರಂ” ಎಂಬ ಘೋಷವಾಕ್ಯ ಮೊಳಗಿಸಿ ಎಂದು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಹೇಶ್ ವಿಕ್ರಂ ಕೊನೆಯವರೆಗೂ ಒಂದೇ ಮಾತರಂ ಹೇಳದೆ ಮೌನಕ್ಕೆ ಶರಣಾಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
The future is women!@KavithaReddy16 @amulyaleona and @najmanazeerRJ ask Mahesh Vikram Hegde, infamous for hate mongering, to sing Vande Mataram.
Is cornering the bigots, the way they do to others, the new form of satyagraha?pic.twitter.com/vwgrsu60Eq
— Zainab Sikander (@zainabsikander) January 31, 2020
Hindu Muslim Razi, toh Kya karega Nazi??? 🤭🤭🤭 https://t.co/fOV6B9i9OF
— Amulya Leona (@AmulyaLeona) January 31, 2020
ಇದನ್ನೂ ಓದಿ : ಸಿಎಎ ವಿರೋಧಿ ಹೋರಾಟ ದೇಶದ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುತ್ತಿದೆ; ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ