ನೆರೆಗೆ ಸೂಕ್ತ ಪರಿಹಾರ ಸಿಗದೆ ನೊಂದು ಆತ್ಮಹತ್ಯೆಗೆ ಶರಣಾದ ವಿಶೇಷ ಚೇತನ ಯುವತಿ

ನಿರಂತರ ಸುರಿದ ಮಳೆಗೆ ಇದ್ದ ಒಂದು ಮನೆ ಕೂಡ ಬಿದ್ದು ಹೋಗಿತ್ತು. ಹಲವು ಬಾರಿ ಜಿಲ್ಲಾಡಳಿತಕ್ಕೆ‌ ಪರಿಹಾರಕ್ಕಾಗಿ ಮಂಜುಳಾ ಅವರು ಮನವಿ ಮಾಡಿಕೊಂಡಿದ್ದರು. ಕೇವಲ 50 ಸಾವಿರ ರೂಪಾಯಿ ಮಾತ್ರ ಪರಿಹಾರ ಬಂದಿತ್ತು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಧಾರವಾಡ  (ಫೆ.21) : ನೆರೆಯಿಂದ ಮನೆ ಕಳೆದುಕೊಂಡ ವಿಶೇಷ ಚೇತನ ಯುವತಿಯೊಬ್ಬಳು  ಸೂಕ್ತ ಪರಿಹಾರ ಸಿಗದ ಕಾರಣಕ್ಕೆ ಮನನೊಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಕಿತ್ತೂರು ಚನ್ನಮ್ಮ ಉದ್ಯಾನದಲ್ಲಿ ನಡೆದಿದೆ.

  ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ಮಂಜುಳಾ ಕಲ್ಲೂರ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ  ಉದ್ಯಾನವನದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತದೇಹದ ಸ್ಥಳದಲ್ಲಿ ವಿಷದ ಬಾಟಲಿ ಕೂಡ ಪತ್ತೆಯಾಗಿದೆ.

  ನಿರಂತರ ಸುರಿದ ಮಳೆಗೆ ಇದ್ದ ಒಂದು ಮನೆ ಕೂಡ ಬಿದ್ದು ಹೋಗಿತ್ತು. ಹಲವು ಬಾರಿ ಜಿಲ್ಲಾಡಳಿತಕ್ಕೆ‌ ಪರಿಹಾರಕ್ಕಾಗಿ ಮಂಜುಳಾ ಅವರು ಮನವಿ ಮಾಡಿಕೊಂಡಿದ್ದರು. ಕೇವಲ 50 ಸಾವಿರ ರೂಪಾಯಿ ಮಾತ್ರ ಪರಿಹಾರ ಬಂದಿತ್ತು, ಹೆಚ್ಚಿನ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಜಿಲ್ಲಾಡಳಿತದಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

  ಇದನ್ನೂ ಓದಿ ; ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಶೀತಲ ಸಮರ; ಇದು ಅಂತ್ಯವಲ್ಲ ಆರಂಭ ಎಂದ ಡಿಸಿಎಂ ಬೆಂಬಲಿಗರು

  ಸ್ಥಳಕ್ಕೆ ಧಾರವಾಡ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.‌

   
  First published: