Love Jihad Case: ನಮ್ದು ಲವ್ ಜಿಹಾದ್ ಅಲ್ಲ; ನಾನೇ ಮೆಚ್ಚಿ ಮದುವೆಯಾಗಿದ್ದು ಎಂದ ಚೈತ್ರಾ!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಲವ್ ಜಿಹಾದ್ ಕೇಸ್​ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾನೇ ಮುಸ್ಲಿಂ ಯುವಕನನ್ನ ಮೆಚ್ಚಿ ಮದುವೆಯಾಗಿದ್ದು, ಆ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ. ಅದು ನನ್ನ ಹಕ್ಕು-ಸ್ವಾತಂತ್ರ್ಯ. ಅದನ್ನ ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲ ಎಂದು ಯುವತಿ ಹೇಳಿದ್ದಾರೆ.

ಚೈತ್ರಾ, ಜಾಫರ್

ಚೈತ್ರಾ, ಜಾಫರ್

  • Share this:
ಚಿಕ್ಕಮಗಳೂರು (ಸೆ. 16): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಲವ್ ಜಿಹಾದ್ ಕೇಸ್‍ಗೆ (Love Jihad Case) ಮತ್ತೊಂದು ಬಿಗ್ ಟ್ವಿಸ್ಟ್ (Big Twist) ಸಿಕ್ಕಿದೆ. ನಾನೇ ಮುಸ್ಲಿಂ ಯುವಕನನ್ನ ಮೆಚ್ಚಿ ಮದುವೆಯಾಗಿದ್ದು, ಆ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ. ಅದು ನನ್ನ ಹಕ್ಕು-ಸ್ವಾತಂತ್ರ್ಯ. ಅದನ್ನ ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲ ಎಂದು ಮದುವೆಗೆ ಅಡ್ಡಿಪಡಿಸಿದವರಿಗೆ ಹುಡುಗಿ ಟಾಂಗ್ ಕೊಟ್ಟಿದ್ದಾಳೆ. ನಾವು ಪ್ರೀತಿಸಿದ್ದೇವೆ, ಮದುವೆಯಾಗಿ (Marriage) ಚೆನ್ನಾಗಿರುತ್ತೇವೆ ಬೇಡ ಅನ್ನೋಕು ನೀವ್ಯಾರು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರಿಗೆ (Pro-Hindu Organization Activists) ಪಂಚ್ ನೀಡಿದ್ದಾರೆ. ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದ್ದಾರೆ.

ಹಿಂದೂ ಕಾರ್ಯಕರ್ತರ ಮೇಲೆ ಕೇಸ್​​

ಮೊನ್ನೆ ಸೆಪ್ಟೆಂಬರ್ 14ರ ಸಂಜೆ ಚಿಕ್ಕಮಗಳೂರು ನಗರದಲ್ಲಿ ಸೂರ್ಯ ಮುಳುಗುತ್ತಿದ್ದರೂ ಲವ್‍ ಜಿಹಾದ್ ಆರೋಪದ ಬಿಸಿಯ ತಾಪ ಏರಿತ್ತು. ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಮದುವೆಯಾಗುವ ವಿಷಯ ತಿಳಿದು ಹಿಂದೂಪರ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರೂ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು. ನೈತಿಕ ಪೊಲೀಸ್ ಗಿರಿಯ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು. ಹುಡುಗ-ಹುಡುಗಿ ಇಬ್ಬರೂ ಮೇಜರ್ ಆದ ಕಾರಣ ಪ್ರಕರಣವನ್ನ ತಿಳಿಗೊಳಿಸಿದ್ದರು.

ನಾವು 3 ವರ್ಷದಿಂದ ಪ್ರೀತಿಸುತ್ತಿದ್ದೇವೆ

ಸ್ಥಳಕ್ಕೆ ಬಂದ ಹುಡುಗಿ ತಾಯಿ ಕೂಡ ಅವನೇ ನನ್ನ ಅಳಿಯ ಎಂದಿದ್ರು. ಆದರೆ, ಇಂದು ಮಾಧ್ಯಮಗಳ ಮುಂದೆ ಬಂದ ನವಜೋಡಿ ಮದುವೆ ನಮ್ಮ ಇಷ್ಟ. ಪ್ರಶ್ನಿಸೋಕೆ ಅವರ್ಯಾರು ಎಂದು ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ನಮ್ಮ ಬದುಕು. ನಾವು ಮದುವೆಯಾಗುತ್ತೇವೆ. ಚೆನ್ನಾಗಿರುತ್ತೇವೆ. ನಾನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ. ನನ್ನ ಗಂಡ ಯಾವ ಹೆಸರಿಡುತ್ತಾನೋ ಅದೇ ಹೆಸರಿನಲ್ಲಿ ಇರುತ್ತೇನೆ. ಅದು ನನ್ನ ಹಕ್ಕು-ಸ್ವಾತಂತ್ರ್ಯ. ಅದನ್ನ ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲ ಎಂದು ನೇರವಾಗಿ ಕಡ್ಡಿಮುರಿದಂತೆ ಹೇಳಿದ್ದಾರೆ.ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ-ಚೈತ್ರಾ

ನಾವು ಒಬ್ಬರನೊಬ್ಬರು ಮೆಚ್ಚಿ ಮದುವೆಯಾಗುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಹಿಂದೂಪರ ಸಂಘಟನೆ ಕಾರ್ಯಕರ್ತರು ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆಯೋಕೆ ಅವರ್ಯಾರು. ಆ ಅಧಿಕಾರ ಕೊಟ್ಟವರ್ಯಾರು ಎಂದು ಚೈತ್ರಾ ಪ್ರಶ್ನಿಸಿದ್ದಾರೆ. ಕಚೇರಿಯಲ್ಲೇ ನನ್ನ ಗಂಡನಿಗೆ ಕೈನಲ್ಲಿ ಹೊಡೆದರು. ಕೆಳಗೆ ಕರೆತಂದು ಲೈಟ್ ಕಂಬಕ್ಕೆ ಗುದ್ದಿದ್ದಾರೆ. ನನ್ನನ್ನ ಎಳೆದಾಡಿದ್ದಾರೆ. ನನ್ನ ಗಂಡನಿಗೆ ಹಿಂದೂ ಹುಡುಗಿ ಬೇಕಾ, ಎಸ್ಸಿ ಹುಡುಗಿ ಬೇಕಾ ಎಂದು ಹಲ್ಲೆ ಮಾಡಿದ್ದಾರೆ. ಎಸ್ಸಿ ಹುಡುಗಿಯನ್ನ ಮದುವೆಯಾಗಬಾರದಾ ಎಂದು ಚೈತ್ರಾ ಪ್ರಶ್ನಿಸಿದ್ದಾಳೆ.

ಇದನ್ನೂ ಓದಿ: Residential School: ವಿದ್ಯಾರ್ಥಿನಿಯರು ಮಲಗಿದ್ದ ವೇಳೆ ಇಣುಕಿ ನೋಡ್ತಿದ್ದ ಶಿಕ್ಷಕ; ಕಿರುಕುಳ ಕೊಟ್ಟ ಟೀಚರ್ಸ್​ಗೆ ಬಿತ್ತು ಗೂಸಾ!

ನಮಗೆ ಜೀವ ಬೆದರಿಕೆ ಇದೆ ನಮಗೆ ರಕ್ಷಣೆ ಬೇಕು

ನಮಗೆ ಜೀವ ಬೆದರಿಕೆ ಇದೆ ನಮಗೆ ರಕ್ಷಣೆ ಬೇಕು ಎಂದು ರಕ್ಷಣೆ ಕೋರಿದ್ದಾಳೆ. ನಮ್ಮ ಮೇಲೆ ಹಲ್ಲೆ ಮಾಡಿದರೂ ಪೊಲೀಸರು ಅವರಿಗೆ ಸ್ಟೇಷನ್ ಬೇಲ್ ಕೊಟ್ಟು ಕಳಿಸಿದ್ದಾರೆ. ನನ್ನನ್ನ ಅಂದು ಮನೆಗೆ ಕಳಿಸಲಿಲ್ಲ. ಬಜರಂಗದಳದವರು ಏನಾದ್ರು ಮಾಡುತ್ತಾರೆ ಎಂದು ನನ್ನನ್ನ ಮಹಿಳಾ ಸಂತ್ವಾನ ಕೇಂದ್ರಕ್ಕೆ ಕಳಿಸಿದ್ದಾರೆ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧವೂ ಈ ಜೋಡಿ ಅಸಮಾಧಾನ ಹೊರಹಾಕಿದೆ. ಇನ್ನು ಇಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಗೆ ಅರ್ಜಿ ಸಲ್ಲಿಸಿ ಯುವಕ ಯುವತಿ ಹೂವಿನ ಹಾರ ಬದಲಾಯಿಸಿಕೊಂಡರು.

ನನ್ನ ಜೀವನ. ನನ್ನ ಹಕ್ಕು

ಸದ್ಯ ಈ ಜೋಡಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರೋ ಹಿನ್ನೆಲೆಯಲ್ಲಿ ಲವ್ ಜಿಹಾದ್ ಅಂತಾ ಆರೋಪಿಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಾಯಿಗೆ ಬೀಗ ಹಾಕಿಕೊಳ್ಳುವಂತಾಗಿದೆ. ಒಟ್ಟಾರೆ, ಮದುವೆ ಪ್ರತಿಯೊಬ್ಬರ ಸ್ವ ಇಚ್ಛೆ. ಯಾರೂ ಯಾರನ್ನಾದರೂ  ಮದುವೆಯಾಗಬಹುದು. ಅದು ಬಲವಂತದ ಮದುವೆಯಾಗಬಾರದು ಅಷ್ಟೆ. ಬಲವಂತದ ಮದುವೆಗೆ ಕಾನೂನಿನಲ್ಲೂ ಅವಕಾಶವಿಲ್ಲ. 19 ವರ್ಷದ ಚೈತ್ರಾ ನಾನೇ ಮದುವೆಯಾಗಲು ಬಂದೆ. ಇಬ್ಬರ ಮನೆಯವರ ಒಪ್ಪಿಗೆಯೂ ಇದೆ. ನನ್ನ ಜೀವನ. ನನ್ನ ಹಕ್ಕು ಎನ್ನುತ್ತಿದ್ದಾರೆ.

ಇದನ್ನೂ ಓದಿ: Love Tragedy: ಇತ್ತ ಕೈಕೊಟ್ಟವಳ ಕೊಂದ ಪ್ರಿಯಕರ, ಅತ್ತ ಪ್ರೇಯಸಿ ಮನೆಯವರ ಕಿರುಕುಳಕ್ಕೆ ಯುವಕ ಸೂಸೈಡ್!

ಈ ರೀತಿ ಅನ್ಯ ಧರ್ಮಧ ಮದುವೆಯಾದವರು ಚೆನ್ನಾಗೂ ಇದ್ದಾರೆ. ಸಮಸ್ಯೆ ಮಾಡಿಕೊಂಡು ಬದುಕನ್ನೇ ಕಳೆದುಕೊಂಡವರು ಇದ್ದಾರೆ. ಅದೇನೆ ಇರಲಿ, ಏನೇ ಅಡ್ಡಿ ಆತಂಕ ಎದುರಾದ್ರೂ ಎದೆಗುಂದದೇ ಎಲ್ಲವನ್ನೂ ಎದುರಿಸುತ್ತಿರೋ ಈ ಜೋಡಿಗೆ ಶುಭವಾಗಲಿ, ಸುಂದರ ಜೀವನ ಇವರದ್ದಾಗಲಿ ಅನ್ನೋದು ಎಲ್ಲರ ಆಶಯ.
Published by:ಪಾವನ ಎಚ್ ಎಸ್
First published: