ಬಾಲಕಿ ಕಣ್ಣಲ್ಲಿ ಕಲ್ಲು ಚೂರು.. ವೈದ್ಯ ಲೋಕಕ್ಕೆ ಅಚ್ಚರಿ...!!

news18
Updated:July 7, 2018, 12:33 PM IST
ಬಾಲಕಿ ಕಣ್ಣಲ್ಲಿ ಕಲ್ಲು ಚೂರು.. ವೈದ್ಯ ಲೋಕಕ್ಕೆ ಅಚ್ಚರಿ...!!
news18
Updated: July 7, 2018, 12:33 PM IST
- ಚಂದ್ರಕಾಂತ್ ಸುಂಗಂಧಿ, ನ್ಯೂಸ್ 18 ಕನ್ನಡ 

ಬೆಳಗಾವಿ ( ಜುಲೈ 07) :  ಕಣ್ಣುಗಳು ಅತ್ಯಂತ ಸೂಕ್ಷ್ಮ. ಕಣ್ಣಲ್ಲಿ ಧೂಳು ಬಿದ್ರೆ ಅದನ್ನು ತೆಗೆಯಲು ನಾವು ಅದೇಷ್ಟೊ ಒದ್ದಾಡುತ್ತೇವೆ. ಆದರೇ ಬೆಳಗಾವಿಯ ಪುಟ್ಟ ಬಾಲಕಿ ಕಣ್ಣಲ್ಲಿ ಕಲ್ಲಿನ ಚುರುಗಳು ಬುರುತ್ತಿವೆ. ಅದು ಅಚ್ಚರಿಯಾದ್ರು ಸತ್ಯ. ಈ ಪ್ರಕರಣ ವೈದ್ಯ ಲೋಕಕ್ಕೆ ಸವಾಲ್ ಆಗಿದೆ. ಅಷ್ಟಕ್ಕೂ ಆ ದೃಶ್ಯ ಹೇಗಿದೆ ನೀವೆ ಒಮ್ಮೆ ನೋಡಿ ಬಿಡಿ...!

ಯೆಸ್ ಇದು ಅಚ್ಚರಿಯಾದ್ರು ನಂಬಲೇ ಬೇಕು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಶಬಾನಾ ಮುಜಾವರ ಎಂಬ ಬಾಲಕಿ ಕಣ್ಣಲ್ಲಿ ಹೀಗೆ ನಿರಂತರವಾಗಿ ಕಲ್ಲಿನ ಚುರು ಬರುತ್ತಿವೆ. ಶಬಾನಾ ಮೂಲತಃ ಗೋಕಾಕ ತಾಲೂಕಿನ ಹಳ್ಳೂರು ನಿವಾಸಿ. ಕಳೆದ 15 ದಿನಗಳಿಂದ ಕಣ್ಣಲ್ಲಿ ವಿಪರಿತ ಉರಿ ಕಾಣಿಸಿಕೊಂಡಿದ್ದು. ವೈದ್ಯರಿಗೆ ತೋರಿಸಲೆಂದು ಯರಗಟ್ಟಿಯ ಸಂಬಂಧಿಕರ ಮನೆಗೆ ಆಗಮಿಸಿದ್ದಾಳೆ. ಆದರೇ ಇಲ್ಲಿಗೆ ಬಂದ ಬಳಿಕ ಕಣ್ಣಲ್ಲಿ ಉರಿ ಅಷ್ಟೇ ಅಲ್ಲ ಚಿಕ್ಕ ಚಿಕ್ಕ ಕಲ್ಲಿನ ಚುರು ಕಣ್ಣಿನಿಂದ ಹೊರ ಬರುತ್ತಿವೆ. ಕಣ್ಣಿನ ವೈದ್ಯರನ್ನು ಸಂಪರ್ಕಿಸಿದ್ರು ಯಾವುದೇ ಪ್ರಯೋಜವಾಗಿಲ್ಲ.

ಕಣ್ಣಿನಿಂದ ಬಿಳುವ ಕಲ್ಲಿನ ಚುರು ಗಳು ಸಂಗ್ರಹಿಸಿ ವೈದರಿಗೆ ಪೋಷಕರು ತೋರಿಸುತ್ತಿದ್ದಾರೆ. ಇನ್ನೂ ಶಬಾನ ಪೋಷಕರಿಗೆ ವೈದ್ಯರಿಂದ ಯಾವುದೇ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಸಿಕ್ಕಿಲ್ಲ. ಹೀಗಾಗಿ ಶಬಾನ ಪೋಷಕರು ಇದೀಗ ದೈವರ ಮೊರೆ ಹೋಗಿದ್ದಾರೆ. ಹತ್ತು ಹಲವು ಕಡೆಗಳಲ್ಲಿ ಈ ಕಾಲಿಗೆ ಗುಣಪಡಿಸಲು ಓಡಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯು ಪೋಷಕರು ಮಗಳ ಗುಣಪಡಿಸಲು ಪ್ರಯತ್ನಿಸಿದ್ದು. ಯಾರಾದ್ರು ಸಹಾಯಕ್ಕೆ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಕಲ್ಲಿನಿಂದ ಕಲ್ಲಿನ ಚೂರು ಬೀಳುತ್ತಿದ್ದು ಶಬಾನ ತೀವ್ರ ನೋವು ಅನುಭವಿಸುತ್ತಿದ್ದಾರೆ. ಆದರೇ ಇದಕ್ಕೆ ಸೂಕ್ತ ಪರಿಹಾರ ಎನು ಎಂಬುದು ಮಾತ್ರ ಇನ್ನೂ ಯಾರು ಹೇಳಿಲ್ಲ. ಇದರಿಂದ ಶಬಾನಾ ಕುಟುಂಬ ತೀವ್ರ ಆತಂಕದಲ್ಲಿದೆ. ವೈದ್ಯ ಲೋಕಕ್ಕೆ ಅಚ್ಚರಿ ಆಗಿರೋ ಈ ಪ್ರಕರಣ ಇತ್ಯರ್ಥ ಪಡಿಸುವುದು ಹೇಗೆ ಎಂಬುದು ಪ್ರಶ್ನೆಯಾಗಿದೆ.
First published:July 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ