ಟಿಕ್ ಟಾಕ್ ವಿಡಿಯೋ ಚಿತ್ರೀಕರಿಸಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು

ಕೋಲಾರದ ವಡಗೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಗ್ರಾಮಕ್ಕೆ ಪೊಲೀಸರು ಭೇಟಿ. ನೆನ್ನೆಯೇ ಮೃತಳ ಶವ ಸಂಸ್ಕಾರ ಮಾಡಿರೋ ಪೋಷಕರು…

news18
Updated:July 13, 2019, 3:14 PM IST
ಟಿಕ್ ಟಾಕ್ ವಿಡಿಯೋ ಚಿತ್ರೀಕರಿಸಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು
ಟಿಕ್ ಟಿಕ್ ವಿಡಿಯೋ ಮಾಡಲು ಹೋಗಿ ಸಾವನ್ನಪ್ಪಿದ ಮಾಲಾ ಗೌಡ
  • News18
  • Last Updated: July 13, 2019, 3:14 PM IST
  • Share this:
ಕೋಲಾರ(ಜುಲೈ 13): ರಾಜ್ಯದಲ್ಲಿ ಟಿಕ್ ಟಾಕ್ ಹುಚ್ಚಿಗೆ ಮತ್ತೊಂದು ಬಲಿಯಾಗಿದೆ. ಕೋಲಾರದ ವಡಗೇರಿ ಗ್ರಾಮದ ಯುವತಿ ಮಾಲಾಗೌಡ ಎಂಬಾಕೆ ತಮ್ಮ ತೋಟದ ಪಕ್ಕದ ಕೃಷಿ ಹೊಂಡದ ಬಳಿ ಟಿಕ್ ಟಾಕ್ ವಿಡಿಯೋ ಚಿತ್ರೀಕರಣ ಮಾಡಲು ಹೋಗಿ ಕೃಷಿಹೊಂಡಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ನಿನ್ನೆ ಮಧ್ಯಾಹ್ನವೇ ಈ ದುರ್ಘಟನೆ ನಡೆದಿದೆ. ಆದರೆ, ಸ್ಥಳದಲ್ಲಿ ಯಾವೊಬ್ಬರೂ ಇಲ್ಲದೆ ಇದ್ದದ್ದರಿಂದ ಸಂಜೆ ಸಾವನ್ನಪ್ಪಿದ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ: ಕೃಷ್ಣಾ ನದಿಯ ಒಳ ಹರಿವಿನಲ್ಲಿ ಭಾರೀ ಹೆಚ್ಚಳ; 6 ಸೇತುವೆ ಮುಳುಗಡೆ, ಪ್ರವಾಹ ಭೀತಿಯಲ್ಲಿ ಜನರು

ಮೃತ ಮಾಲಾಗೌಡ ಕೋಲಾರದ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಬಿಎ ಪದವಿ ಪೂರ್ತಿ ಮಾಡಿದ್ದರು. ಸ್ನಾತಕೋತ್ತರ ಪದವಿಗೆ ದಾಖಲಾಗಿ ಓದುವ ಉತ್ಸಾಹದಲ್ಲೂ ಇದ್ದದ್ರು. ಆದ್ರೆ ಟಿಕ್​ಟಾಕ್​ನ ಹುಚ್ಚು ಹಿಡಿಸಿಕೊಂಡಿದ್ದ ಈಕೆ ಅದೇ ಆಟಕ್ಕೆ ಪ್ರಾಣವನ್ನೇ ತೆತ್ತಿದ್ದಾಳೆ.  ಕೃಷಿ ಹೊಂಡದ ಬಳಿ ಹಾಡೊಂದನ್ನ ಹಾಡಿ ವಿಡಿಯೋ ಚಿತ್ರೀಕರಣ ಮಾಡಲು ಹೊಗಿ ಹೊಂಡಕ್ಕೆ ಬಿದ್ದು ಮಾಲಾಗೌಡ ದುರಂತ ಸಾವಿಗೀಡಾಗಿದ್ದಾಳೆ.

ಇದನ್ನೂ ಓದಿ: ಚಿತ್ರದುರ್ಗ: ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

ನಿನ್ನೆಯೇ ಮೃತಳ ಅಂತ್ಯ ಸಂಸ್ಕಾರ ನೆರವೇರಿಸಿರುವ ಮನೆಯವರು, ಯಾವುದೇ ದೂರನ್ನ ಸಹ ದಾಖಲು ಮಾಡಿಲ್ಲ. ಸದ್ಯ ವಿಚಾರ ತಿಳಿದು ಕೋಲಾರ ಗ್ರಾಮಾಂತರ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಪೋಷಕರ ಬಳಿ ಮಾಹಿತಿ ಪಡೆದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತಳ ಶವಪರೀಕ್ಷೆಗೆ ಅನುಮತಿ ಕೋರಿದರು. ಆದ್ರೆ ಪೋಷಕರು ಒಪ್ಪದಿರುವ ಕಾರಣ ಪೊಲೀಸರು ಸುಮ್ಮನೆ ವಾಪಸ್ ಬಂದರೆನ್ನಲಾಗಿದೆ.

ಇದನ್ನೂ ಓದಿ: ಸ್ಮಶಾನ ಇಲ್ಲದ ಕಾರಣಕ್ಕೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!ಸದ್ಯ ವಿದ್ಯಾರ್ಥಿನಿ ಸಾವಿಗೆ ಮಹಿಳಾ ಕಾಲೇಜಿನ ಸಹ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದು, ಟಿಕ್​ಟಾಕ್ ಆ್ಯಪ್ ವಿರುದ್ದ ಕಿಡಿಕಾರಿದ್ದಾರೆ.

(ವರದಿ: ರಘುರಾಜ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ