ಮಂಡ್ಯ: ಜೇಂಟ್ ವ್ಹೀಲ್ (Giant Wheel) ಬಾಲಕಿಯ ತಲೆಕೂದಲು ಸಿಲುಕಿಕೊಂಡು, ಚರ್ಮಸಹಿತ ಕಿತ್ತುಬಂದು ಗಂಭೀರ ಗಾಯಗೊಂಡಿದ್ದಾಳೆ. ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ (Sriranga ರಂಗನಾಥ ಮೈದಾನದಲ್ಲಿ ಶನಿವಾರ ರಾತ್ರಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನ ಜಾತ್ರೆಗೆಂದು ಆಗಮಸಿದ್ದ ಶ್ರೀವಿದ್ಯಾ(14) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ರಥಸಪ್ತಮಿ ಅಂಗವಾಗಿ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ಜಾತ್ರೆ ಆಯೋಜಿಸಲಾಗಿತ್ತು. ಗಂಭೀರ ಗಾಯಗೊಂಡ ಬಾಲಕಿ ಶ್ರೀವಿದ್ಯಾ ತನ್ನ ಪೋಷಕರ ಜೊತೆ ಜಾತ್ರೆಗೆ ಆಗಮಿಸಿದ್ದರು.
ದೇವರ ದರ್ಶನ ಮುಗಿಸಿಕೊಂಡು ಜಾಯಿಂಟ್ ಜೇಂಟ್ ವ್ಹೀಲ್‌ನಲ್ಲಿ ಆಡುವುದಕ್ಕೆ ತೆರಳಿದ್ದಾರೆ. ಈ ವೇಳೆ ಬಾಲಕಿಯ ಉದ್ದನೆಯ ತಲೆ ಕೂದಲು ಜೇಂಟ್ ವ್ಹೀಲ್ ಯಂತ್ರಕ್ಕೆ ಸಿಲುಕಿಕೊಂಡಿದೆ. ತಕ್ಷಣ ಪೋಷಕರು ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಜೇಂಟ್ ವ್ಹೀಲ್ ಯಂತ್ರ ತಿರುಗಿದ ಪರಿಣಾಮ ಕ್ಷಣ ಮಾತ್ರದಲ್ಲೇ ಸಂಪೂರ್ಣ ತಲೆ ಕೂದಲು ಚರ್ಮಸಹಿತ ಕಿತ್ತು ಬಂದಿದೆ ಎನ್ನಲಾಗಿದೆ.
ಬಾಲಕಿಗೆ ಗಂಭೀರ ಗಾಯ
ತಲೆಯ ಕೂದಲು ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದಿದ್ದು ಬಾಲಕಿ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಆಕೆಯನ್ನು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಜೇಂಟ್ ವ್ಹೀಲ್ ಕಾರ್ಮಿಕರಿಗೆ ಥಳಿತ
ಬಾಲಕಿ ಗಾಯಗೊಂಡ ಪರಿಣಾಮ ಭಯದಿಂದ ಜೇಂಟ್ ವ್ಹೀಲ್ ಆಟವನ್ನು ನಡೆಸುತ್ತಿದ್ದ ಕಾರ್ಮಿಕರ ಓಡಿ ಹೋಗುತ್ತಿದ್ದರು. ತಕ್ಷಣ ಅವರನ್ನು ಸಾರ್ವಜನಿಕರು ಅಟ್ಟಾಡಿಸಿ ಹಿಡಿದು ಥಳಿಸಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪಟ್ಟಣದ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣದಲ್ಲಿ ಪ್ರಕರಣ ದಾಖಲಾಗಿದ್ದು, ಜಾಯಿಂಟ್ ವೀಲ್ ನಡೆಸುತ್ತಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಿಳೆ ಮೇಲೆ ಕಾನ್ಸ್ಟೇಬಲ್ನಿಂದ ಲೈಂಗಿಕ ದೌರ್ಜನ್ಯ
ಪರಿಚಯಸ್ಥ ಮಹಿಳೆಯ ಮೆಲೆ ಕಾನ್ಸ್‌ಟೇಬಲ್ ಒಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಚಾಮರಾಜನಗರದಲ್ಲಿ ಕೇಳಿ ಬಂದಿದೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆ ನಾಲ್ಕು ದಿನಗಳ ಹಿಂದೆ ಸಂಬಂಧಿಕರನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದರು ಎನ್ನಲಾಗಿದ್ದು, ಈ ಮಹಿಳೆಯನ್ನು ಪುಸಲಾಯಿಸಿ ಪೊಲೀಸ್ ತನ್ನ ವಸತಿ ಗೃಹಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ, ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಪೊಲೀಸ್ ಕಾನ್ಸ್‌ಟೇಬಲ್ ತಾನೇ ಆಸ್ಪತ್ರೆಗೆ ತಂದು ಸೇರಿಸಿದ್ದಾನೆ ಎಂದು ತಿಳಿದುಬಂದಿದೆ.
ಕಾನ್ಸ್‌ಟೇಬಲ್ ಮುನಿಯಪ್ಪ ಅಮಾನತು
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಮುನಿಯಪ್ಪರನ್ನು ಅಮಾನತು ಮಾಡಲಾಗಿದೆ. ಘಟನೆ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದ ಹಿನ್ನಲೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇವೆಯಿಂದ ಅಮಾನತು ಮಾಡಲಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ವಿರುದ್ದ ಸದ್ಯ ಯಾವುದೇ ಎಫ್ಐಆರ್ ಆಗಿಲ್ಲ, ಮಹಿಳೆ ಕೂಡ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ದ ದೂರು ನೀಡಿಲ್ಲ, ಅಲ್ಲದೆ ಆ ಮಹಿಳೆ ಸಿರುಯಾದ ಹೇಳಿಕೆ ನೀಡುತ್ತಿಲ್ಲ. ವೈದ್ಯರು ನೀಡುವ ವರದಿಯ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಅಡಿಷನಲ್ ಎಸ್ಪಿ ಉದೇಶ್ ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ