ಕೂದಲು ಉದುರಿದ್ದಕ್ಕೆ ಆತ್ಮಹತ್ಯೆ; ಬ್ಯೂಟಿ ಪಾರ್ಲರ್ ಎಡವಟ್ಟಿಗೆ ಯುವತಿ ಬಲಿ

news18
Updated:September 2, 2018, 7:58 PM IST
ಕೂದಲು ಉದುರಿದ್ದಕ್ಕೆ ಆತ್ಮಹತ್ಯೆ; ಬ್ಯೂಟಿ ಪಾರ್ಲರ್ ಎಡವಟ್ಟಿಗೆ ಯುವತಿ ಬಲಿ
news18
Updated: September 2, 2018, 7:58 PM IST
ಎಸ್​. ರವಿ, ನ್ಯೂಸ್​18 ಕನ್ನಡ

ಕೊಡಗು (ಸೆ. 2): ತಾನು ಇನ್ನಷ್ಟು ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಬ್ಯೂಟಿ ಪಾರ್ಲರ್​ನಲ್ಲಿ ತನ್ನ ತಲೆಕೂದಲನ್ನು ಸ್ಟ್ರೈಟ್ ಮಾಡಿಸಿಕೊಂಡ ಯುವತಿ ಆ ಪಾರ್ಲರ್​ನಲ್ಲಿ ಆದ ಎಡವಟ್ಟಿಗೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ವಿರಾಜಪೇಟೆ ತಾಲ್ಲೂಕಿನ ಕೊಟ್ಟಂಕೇರಿಯ ನಿವಾಸಿ ಪೆಮ್ಯಯ್ಯ ಮತ್ತು ಶೈಲಾ ದಂಪತಿಯ ಪುತ್ರಿ ನೇಹಾ ಗಂಗಮ್ಮ ಬ್ಯೂಟಿ ಪಾರ್ಲರ್ ನ ಎಡವಟ್ಟಿಗೆ ಬಲಿಯಾಗಿರುವ ಯುವತಿ.  ಮೈಸೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ನೇಹಾ ಗಂಗಮ್ಮ ಗುಂಗುರಾಗಿದ್ದ ತನ್ನ ತಲೆ ಕೂದಲನ್ನು ಒಂದು ತಿಂಗಳ ಹಿಂದೆ ಅಲ್ಲಿನ ರೋಹಿಣಿ ಬ್ಯೂಟಿ ಪಾರ್ಲರ್ ನಲ್ಲಿ ಹೇರ್ ಸ್ಟ್ರೈಟ್ ಮಾಡಿಸಿಕೊಂಡಿದ್ದರು. ಬಳಿಕ ನೇಹಾ ತಲೆಕೂದಲಿನ ಸೌಂದರ್ಯ ಹಾಳಾಗಿದ್ದಲ್ಲದೆ ಉದುರತೊಡಗಿತ್ತು. ಸುಂದರವಾಗಿದ್ದ ನೇಹಾ ಈ ಘಟನೆಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ಕಾಲೇಜಿಗೂ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದರು. ತಮ್ಮ ಮಗಳ ಮನವೊಲಿಸಲು ಪೋಷಕರು ಸಾಕಷ್ಟು ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸಂಬಂಧಿ ಚಂಗಪ್ಪ ಅವರ ಆರೋಪ.ತಲೆಗೂದಲು ಅತಿಯಾಗಿ ಉದುರತೊಡಗಿದ್ದರಿಂದ ಮನನೊಂದ ನೇಹಾ ಆಗಸ್ಟ್ 28 ರಂದು ಲಕ್ಷಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಸ್ಥಳೀಯರು ಮತ್ತು ಪೊಲೀಸರ ಹುಡುಕಾಟದಿಂದ ನೇಹಾ ಗಂಗಮ್ಮ ಅವರ ಶವ ದೊರೆತಿದೆ. ಹೇರ್ ಸ್ಟ್ರೈಟ್ ಮಾಡಿ ಎಡವಟ್ಟು ಮಾಡಿದ್ದ ಮೈಸೂರಿನ ರೋಹಿಣಿ ಬ್ಯೂಟಿ ಪಾರ್ಲರ್ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...