ಕೊಪ್ಪಳ (ಜೂ. 24): ಕಳೆದೊಂದು ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪರಿಯಚವಾಗಿದ್ದ ಜೋಡಿಗಳಿಬ್ಬರು ಪರಸ್ಪರ ಪ್ರೀತಿ ಹಂಚಿಕೊಂಡಿದ್ದಾರೆ. ಕಡೆಗೆ ಮನೆಯವರನ್ನು ಓಲೈಸಿ ಮದುವೆಯಾಗಿದ್ದಾರೆ. ಪ್ರೀತಿ ಪ್ರೇಮದ ಗುಂಗಿನಲ್ಲಿದ್ದ ಜೋಡಿ ಮನೆಯವರನ್ನು ಜಯಿಸಿ ಮದುವೆಯಾಗಿ ಸುಖ ಸಂಸಾರ ಆರಂಭಿಸಿದ್ದಾರೆ. ಆರು ತಿಂಗಳ ಸಂಸಾರ ಕೊನೆಗೆ ಯುವತಿಯ ಸಾವಿನೊಂದಿಗೆ ಅಂತ್ಯವಾಗಿದೆ. ಪ್ರೀತಿಗಿಂತ ಹೆಚ್ಚಾಗಿ ದುಡ್ಡಿನ ಹಪಾಹಪಿಗೆ ತನ್ನ ಪ್ರೀತಿಯ ಕನಸನ್ನು ಕೊಂದು ಯುವತಿ ಹೆಣವಾಗಿದ್ದಾಳೆ. ಈ ಕುರಿತು ಯುವತಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣ ಎಂದು ಆರೋಪಿಸಿದ್ದಾರೆ.
ಏನಿದು ಘಟನೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೊಬಳಿಯ ಹೊಸಕೊಪ್ಪದ ಶಿಲ್ಪಾ (19) ಸಾಣಾಪುರದ ವಿಕ್ರಮ ಇಬ್ಬರು ಫೇಸ್ಬುಕ್ ಮೂಲಕ ಸ್ನೇಹ ಸಂಪಾದಿಸಿದ್ದಾರೆ. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಕಡೆಗೆ ಕಳೆದ ಡಿಸೆಂಬರ್ ಅಂದರೆ, 2020ರ ಡಿಸೆಂಬರ್ನಲ್ಲಿ 20ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮೂಲತಃ ಆಟೋ ಡ್ರೈವರ್ ಆಗಿದ್ದ ವಿಕ್ರಮನ ಮದುವೆಯಾದ ಹೊಸದರಲ್ಲಿ ಆಕೆಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾನೆ.
ಆದರೆ, ವಿಕ್ರಮನ ತಂದೆ ತಾಯಿಗಳು ಮಾತ್ರ ಶಿಲ್ಪಾಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಯುವತಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ವಿಕ್ರಮ ತಂದೆ ದುರ್ಗಪ್ಪ ಹಾಗು ಆತನ ಅಜ್ಜಿ ಹುಲಿಗೆಮ್ಮ ಆಗಾಗ ಶಿಲ್ಪಾಳೊಂದಿಗೆ ಸದಾ ಜಗಳವಾಡುತ್ತಿದ್ದರು. ನಾವು ನಮ್ಮ ಮಗನಿಗೆ ನಮ್ಮ ಸಂಬಂಧದಲ್ಲಿ ಮದುವೆ ಮಾಡಿದ್ದರೆ 2 ಲಕ್ಷ ರೂಪಾಯಿ ವರದಕ್ಷಿಣೆ ಕೊಡುತ್ತಿದ್ದರು. ಅಷ್ಟು ವರದಕ್ಷಣೆಯನ್ನು ತೆಗೆದುಕೊಂಡು ಬಾ ಎಂದು ಗಲಾಟೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಬದ್ಧ; ಪ್ರಧಾನಿ ಮೋದಿ ಭರವಸೆ
ಅಷ್ಟೆ ಅಲ್ಲದೇ, ವರದಕ್ಷಿಣೆ ದುಡ್ಡನ್ನು ತೆಗೆದುಕೊಂಡು ಬಂದರೆ ಮಾತ್ರ ಮಗನೊಂದಿಗೆ ಸಂಸಾರ ನಡೆಸಲು ಸಾಧ್ಯ ಇಲ್ಲ ತವರಿನಲ್ಲಿಯೇ ಉಳಿ ಎಂದು ಆಕೆಯನ್ನು ತವರು ಮನೆ ಹೊಸಕೊಪ್ಪಕ್ಕೆ ಕಳುಹಿಸಿದ್ದರು. 2021ರ ಜನವರಿಯಲ್ಲಿ ತವರು ಸೇರಿದ ಶಿಲ್ಪಾ ಕಡೆಗೆ ಮನೆಯವರಿಗೆ ವಿಷಯ ತಳಿಸಿದ್ದಾಳೆ. ಬಳಿಕ ಎರಡು ಕುಟುಂಬವೂ ಸಂಧಾನ ನಡೆಸಿದ್ದಾರೆ. ಲಾಕ್ಡೌನ್ಗೂ ಮುನ್ನ ಆಕೆಯನ್ನು ಸಾಣಾಪುರದಲ್ಲಿ ಗಂಡನ ಮನೆ ಸೇರಿದ್ದಳು.
ಇದನ್ನು ಓದಿ: ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿದ್ದ 86ರ ವೃದ್ಧ ಸೋಂಕಿತ ಗುಣಮುಖ
ಸಂಧಾನವಾದರೂ ವಿಕ್ರಮನ ಪೋಷಕರು ಮಾತ್ರ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ. ಪದೇ ಪದೇ ಆಕೆಗೆ ವರದಕ್ಷಿಣೆಗೆ ಪೀಡಿಸುತ್ತಿದ್ದರು. ಈ ಕುರಿತು ಆಕೆ ಫೋನ್ ಮೂಲಕ ನಮಗೆ ವಿಷಯ ತಿಳಿಸುತ್ತಿದ್ದಳು. ಈಗ ನೋಡಿದರೆ, ಮಗಳು ಹೆಣವಾಗಿದ್ದಾಳೆ. ಆಕೆಯನ್ನು ಕೊಲೆ ಮಾಡಿರುವ ಶಂಕೆ ನಮಗೆ ಇದೆ. ಇದಕ್ಕೆ ಆಕೆಯ ಗಂಡ, ಅತ್ತೆ ಮಾವ ಅವರೇ ಕಾರಣ ಎಂದು ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ