ಬೆಂಗಳೂರು: ವಿಧಾನಸಭಾ ಚುನಾವಣೆಯ (Assembly Elections) ಹಿನ್ನೆಲೆಯಲ್ಲಿ ಪೊಲೀಸ್ (Police) ಭದ್ರತೆಯನ್ನು ಬೀಗಿಗೊಳಿಸಿ ಚುನಾವಣಾ ಅಕ್ರಮಗಳಿಗೆ ಬ್ರೇಕ್ ಹಾಕಲು ರಾಜ್ಯ ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ಗಳನ್ನು (Checkpost) ನಿರ್ಮಿಸಿ ಪ್ರತಿ ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ವೇಳೆ ದಾಖಲೆ ಇಲ್ಲದ 20 ಲಕ್ಷ ರೂಪಾಯಿ ಹಣವನ್ನು ನೆಲಮಂಗಲ ಟೌನ್ ಪೊಲೀಸರು (Nelamangala Town Police) ಜಪ್ತಿ ಮಾಡಿದ್ದಾರೆ. ಬೆಂಗಳೂರಿನಿಂದ (Bengaluru) ಅಜ್ಜಂಪುರಕ್ಕೆ ತೆರಳುತ್ತಿದ್ದ ಕಾರಿನಲ್ಲಿ 17 ಲಕ್ಷ ರೂಪಾಯಿ ಹಾಗೂ ತಮಿಳುನಾಡಿನ (Tamil Nadu) ಚೆನ್ನೈನಿಂದ ನೆಲಮಂಗಲದ ಡಾಬಸ್‌ಪೇಟೆಗೆ ತೆರಳುತ್ತಿದ್ದ ಕಾರಿನಲ್ಲಿ 3 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂದಾಜು 20 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಜಪ್ತಿ
ಇದರೊಂದಿಗೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ನೆಲಮಂಗಲ ಪೊಲೀಸರು ಮತದಾರರಿಗೆ ಹಂಚಲು ಸರಬರಾಜು ಆಗುತ್ತಿದ್ದ ಭಾರೀ ಪ್ರಮಾಣದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Crime News: ಸ್ನೇಹಿತರ ನಡುವೆ ಕಿರಿಕ್; ಎಣ್ಣೆ ಮತ್ತಲ್ಲಿ ಕಲ್ಲಿನಿಂದ ಜಜ್ಜಿ ಗೆಳೆಯನನ್ನೇ ಕೊಂದ ಪಾಪಿ!
ತುಮಕೂರು ರಸ್ತೆಯ ಜಾಸ್ ಟೋಲ್ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 48 ಕೆಜಿ 156 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಜಪ್ತಿ ಮಾಡಿರುವ ಬೆಳ್ಳಿ ವಸ್ತುಗಳ ಬೆಲೆ ಅಂದಾಜು 20 ಲಕ್ಷದ 22 ಸಾವಿರ ಮೌಲ್ಯದ ಹೊಂದಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲಕ್ಷಾಂತರ ಮೌಲ್ಯದ ಬಟ್ಟೆ ಜಪ್ತಿ
ಹಾಸನ ರಸ್ತೆಯ ಲ್ಯಾಂಕೊಟೋಲ್ ಬಳಿ ಅಪಾರ ಪ್ರಮಾಣದ ಬಟ್ಟೆ ವಶಕ್ಕೆ ಪಡೆಯಲಾಗಿದೆ. ಸೀರೆ, ಪ್ಯಾಂಟ್, ಶರ್ಟ್ ಹೊಂದಿದ್ದ 18 ಬ್ಯಾಗ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಟ್ಟೆ ಜ್ತಪಿ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಇನ್ಸ್ಪೆಕ್ಟರ್ ಎ.ರಾಜೀವ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಒಂದು ರೆನಾಲ್ಟ್ ಕಾರು ಸಹಿತ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ