ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ; ನಿಷೇಧಿತ ನೋಟುಗಳು ಪತ್ತೆ

ಹುಂಡಿ ಹಣ ಎಣಿಸುವ ವೇಳೆ ವಿದೇಶಿ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಯುರೋಪ್, ಮಲೇಷಿಯಾ, ಅಮೆರಿಕಾ, ದುಬೈ ದೇಶದ ಕರೆನ್ಸಿಗಳು ಸಿಕ್ಕಿವೆ.

Latha CG | news18-kannada
Updated:September 13, 2019, 6:04 PM IST
ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ; ನಿಷೇಧಿತ ನೋಟುಗಳು ಪತ್ತೆ
ಘಾಟಿ ಸುಬ್ರಹ್ಮಣ್ಯ ದೇವಾಲಯ
Latha CG | news18-kannada
Updated: September 13, 2019, 6:04 PM IST
ಚಿಕ್ಕಬಳ್ಳಾಪುರ(ಸೆ.13):  ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಹುಂಡಿ ಹಣ ಎಣಿಕೆ ಮಾಡಲಾಯಿತು. ದೇವರ ಹುಂಡಿಯಲ್ಲಿ ಒಟ್ಟು  37,18,504 ರೂ. ಹಣ ಸಂಗ್ರಹವಾಗಿದೆ.

ಹುಂಡಿ ಹಣ ಎಣಿಸುವ ವೇಳೆ ವಿದೇಶಿ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಯುರೋಪ್, ಮಲೇಷಿಯಾ, ಅಮೆರಿಕಾ, ದುಬೈ ದೇಶದ ಕರೆನ್ಸಿಗಳು ಸಿಕ್ಕಿವೆ. 14 ಡಾಲರ್​, ಓಮನ್, ಕೀನ್ಯಾ ದೇಶದ 37 ನೋಟುಗಳು ಪತ್ತೆಯಾಗಿವೆ. ಇಷ್ಟೇ ಅಲ್ಲದೇ ಹುಂಡಿಯಲ್ಲಿ ನಿಷೇಧಿತ 500, 1000 ಮುಖ ಬೆಲೆಯ ನೋಟುಗಳು ಕಾಣಿಸಿಕೊಂಡಿವೆ.

ಸರ್ಕಾರಿ ದೇವಾಲಯಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ; ಆಂಧ್ರಪ್ರದೇಶದ ಸಿಎಂ ಜಗನ್​​ ಮೋಹನ್​​ ರೆಡ್ಡಿ ಐತಿಹಾಸಿಕ ನಿರ್ಧಾರ

ಹುಂಡಿಗೆ ಭಕ್ತರು ಚಿನ್ನ-ಬೆಳ್ಳಿಯನ್ನು ಕಾಣಿಕೆಯನ್ನಾಗಿ ಹಾಕಿದ್ದಾರೆ. 3 ಗ್ರಾಂ ಚಿನ್ನ, 650 ಗ್ರಾಂ ಬೆಳ್ಳಿ ವಸ್ತುಗಳು, ಬೆಳ್ಳಿ ವಸ್ತುಗಳು ಸಂಗ್ರಹವಾಗಿದೆ. ಆದರೆ ಈ ಬಾರಿ ಹುಂಡಿ ಹಣದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ ಎನ್ನಲಾಗಿದೆ. ರಜೆ ಮುಗಿದ ಬೆನ್ನಲ್ಲೇ ಪ್ರವಾಸಿಗರು, ಭಕ್ತರ ಸಂಖ್ಯೆ ಕಡಿಮೆಯಾಗಿದೆ.

ವಿಶೇಷ ಎಂದರೆ, ದೇವಾಲಯದ ಆಡಳಿತ ಮಂಡಳಿ ಹುಂಡಿ ಹಣ ಎಣಿಸುವ ಕಾರ್ಯದಲ್ಲಿ ಭಕ್ತರಿಗೂ ಅವಕಾಶ ನೀಡಿದೆ. ಆಡಳಿತ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಕೆ ಕಾರ್ಯ ನಡೆದಿದೆ. ಹುಂಡಿ ಹಣ ಎಣಿಕೆ ಕಾರ್ಯ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...