Ghar Wapsi: ಇಸ್ಲಾಂಗೆ ಮತಾಂತರಗೊಳ್ಳೋಕೆ ಸಜ್ಜಾಗಿದ್ದ ಅರ್ಚಕ, ಈಗ ಹಿಂದೂ ಧರ್ಮಕ್ಕೆ ಮರಳಿದ್ದೇಕೆ?

ಕಾರ್ಯಕ್ರಮ ನಿಮಿತ್ತ ಮಸೀದಿಗೆ ಹೋದಾಗ ಅವರು ಸನ್ಮಾನ ಮಾಡಿದ್ರು. ಒಂದು ಶಾಲ್ ಹಾಕಿ ಮುಸ್ಲಿಮರು  ಧರಿಸುವ ಟೋಪಿ ಹಾಕಿದ್ದರು. ಅದು ಮತಾಂತರ ಅಲ್ಲ ಎಂದು ವೈರಲ್ ಆಗಿರುವ ಫೋಟೋಗೆ ಸ್ಪಷ್ಟನೆ ನೀಡಿದರು

ಅರ್ಚಕ ಎಚ್.ಆರ್.ಚಂದ್ರಶೇಖರಯ್ಯ

ಅರ್ಚಕ ಎಚ್.ಆರ್.ಚಂದ್ರಶೇಖರಯ್ಯ

  • Share this:
ಇಸ್ಲಾಂಗೆ (Islam) ಮತಾಂತರಗೊಂಡಿದ್ದ ಹಿಂದೂ ಅರ್ಚಕ (Hindu Priest) ಮತ್ತೆ ತಮ್ಮ ಮೂಲ ಧರ್ಮಕ್ಕೆ (Ghar Vapsi) ಹಿಂದಿರುಗಿದ್ದಾರೆ. ತುಮಕೂರು ಗ್ರಾಮಾಂತರದ ಹೀರೇಹಳ್ಳಿ (Hirehalli, Tumakuru) ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕ ಎಚ್.ಆರ್.ಚಂದ್ರಶೇಖರಯ್ಯ ಇಸ್ಲಾಂಗೆ ಮತಾಂತರಗೊಳ್ಳಲು (Hindu To Muslim conversion) ಮುಂದಾಗಿದ್ದರು. ಈ ಬಗ್ಗೆ ಪತ್ರಿಕೆಯಲ್ಲೂ ಮತಾಂತರದ ಪ್ರಕಟನೆ (Press Note) ನೀಡಿದ್ದರು. ಮತಾಂತರದ ಬಳಿಕ ಮುಬಾರಕ್ ಪಾಷಾ ಎಂದು ಹೆಸರು ‌ಬದಲಾವಣೆ ಮಾಡಿಕೊಂಡಿದ್ದರು. ಆದ್ರೆ ಮುಂಜಿಗೆ ಹೆದರಿಕೊಂಡು ಹಿಂದೂ ಧರ್ಮಕ್ಕೆ ಹಿಂದಿರುಗಿದ್ದಾರೆ. ಸಕ್ಕರೆ ಕಾಯಿಲೆ (Diabetes) ಇರೋದ್ರಿಂದ ಮುಂಜಿ ಮಾಡಲು ಆಗಿಲ್ಲ. ಮುಂಜಿ ಮಾಡಿದ್ರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡೋದು ಎಂದು ಚಂದ್ರಶೇಖರಯ್ಯ ಹೇಳುತ್ತಾರೆ.

ಚಂದ್ರಶೇಖರಯ್ಯ ಅವರು ಹೀರೇಹಳ್ಳಿಯಲ್ಲಿ ಮುಸ್ಲಿಂ ಜನರು ವಾಸಿಸುವ ಪ್ರದೇಶದಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದರು. ಜೆಡಿಎಸ್ ಮುಖಂಡ ತನ್ವಿರ್ ಜೊತೆ ಚಂದ್ರಶೇಖರಯ್ಯ ಒಡನಾಟದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸೊಗಡು ಶಿವಣ್ಣ ಅವರಿಂದ ಮನವೊಲಿಕೆ

ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದಲ್ಲಿರುವ ಮಸೀದಿ ಹೋಗಿ ಅಲ್ಲಿಯ ಧರ್ಮಗುರುಗಳ ಸಮ್ಮುಖದಲ್ಲಿ ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಆಗಿ ಬದಲಾಗಿದ್ದರು. ಮತಾಂತರದ ಸುದ್ದಿ ಕೇಳುತ್ತಿದ್ದಂತೆ ಚಂದ್ರಶೇಖರಯ್ಯ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ಸೊಗಡು ಶಿವಣ್ಣ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರ್ಚಕ ಎಚ್.ಆರ್.ಚಂದ್ರಶೇಖರಯ್ಯ


ಇದನ್ನೂ ಓದಿ:  Kodagu: ಗಣವೇಷಧಾರಿಯಾಗಿ ರಂಜನ್ ಜೊತೆಗೆ ತರಬೇತಿ ಪಡೆದಿರುವ ಸಂಪತ್ ಯಾವ ಪಕ್ಷ?

ಚಂದ್ರಶೇಖರಯ್ಯ ಅಣ್ಣ ತಮ್ಮಂದಿರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದರು. ಯಾರೂ‌ ನನ್ನ ಸಹಾಯಕ್ಕೆ ಬರುವುದಿಲ್ಲ ಎಂದು ಮನನೊಂದು ಮತಾಂತರ ಆಗಲು ಮುಂದಾಗಿದ್ದರು. ಇದೀಗ ಸೊಗಡು ಶಿವಣ್ಣರ ಮನವೊಲಿಕೆ ಹಾಗೂ ಮುಂಜಿಗೆ ಅಂಜಿ ತಾನು ವಾಪಸ್ ಬಂದಿದ್ದೇನೆ ಎಂದ ಚಂದ್ರಶೇಖರ್ ಹೇಳಿದ್ದಾರೆ.

ಮತಾಂತರ ಆಗಲು ಮುಂದಾಗಿದ್ದೇಕೆ?

ಅಣ್ಣ ತಮ್ಮಂದಿರ ಜಗಳದಿಂದ ಬೇಸತ್ತಿದ್ದೆ. ಸತ್ತರೆ ಶವ ಹೂಳುತ್ತಾರೆ ಎಂದು ನಿರ್ಧರಿಸಿ ಮತಾಂತರ ಆಗಲು ನಿರ್ಧರಿಸಿದೆ. ಆದ್ರೆ ಈಗ ವಾಪಸ್ ಬಂದಿದ್ದೇನೆ. ಮತಾಂತರ ಆಗಬೇಕಾದ್ರೆ ಮುಂಜಿ ಆಗಬೇಕು. ನನಗೆ ಸಕ್ಕರೆ ಕಾಯಿಲೆ ಇರೋ ಕಾರಣ ಸಾಧ್ಯವಿಲ್ಲ. ನಾನು ಮಾತಾಂತರ ಆಗುವ ಕುರಿತು ಹೇಳಿಕೆ ನೀಡಿದ್ದೆ ಅಷ್ಟೇ ಎಂದು ಚಂದ್ರಶೇಖರಯ್ಯ ಹೇಳುತ್ತಾರೆ.

ವೈರಲ್ ಫೋಟೋಗೆ ಸ್ಪಷ್ಟನೆ

ಕಾರ್ಯಕ್ರಮ ನಿಮಿತ್ತ ಮಸೀದಿಗೆ ಹೋದಾಗ ಅವರು ಸನ್ಮಾನ ಮಾಡಿದ್ರು. ಒಂದು ಶಾಲ್ ಹಾಕಿ ಮುಸ್ಲಿಮರು  ಧರಿಸುವ ಟೋಪಿ ಹಾಕಿದ್ದರು. ಅದು ಮತಾಂತರ ಅಲ್ಲ ಎಂದು ವೈರಲ್ ಆಗಿರುವ ಫೋಟೋಗೆ ಸ್ಪಷ್ಟನೆ ನೀಡಿದರು. ನನಗೆ ಎಲ್ಲಾ ಮತದವವರು ಒಳ್ಳೆಯ ಸ್ನೇಹಿತರು. ಅವರ ಜೊತೆಯಲ್ಲಿಯೇ ಒಡನಾಟ ಹೊಂದಿದ್ದೇನೆ. ಈ ಹಿಂದೆಯೂ ಹಲವು ಬಾರಿ ಮುಸ್ಲಿಮರ ಧರಿಸುವ ಟೋಪಿ ಹಾಕಿಕೊಂಡಿದ್ದೇನೆ.

ಘರ್ ವಾಪ್ಸಿ


ಚಂದ್ರಶೇಖರಯ್ಯ ಪತ್ನಿ ಲೀಲಾವತಿ ಹೇಳಿಕೆ

ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಶೇಖರಯ್ಯ ಅವರ ಪತ್ನಿ, ಎರಡು ತಿಂಗಳಿನಿಂದ ಬೇರೆ ಜಾತಿಗೆ ಹೋಗ್ತೀನಿ ಅಂತ ಹೇಳುತ್ತಿದ್ದರು. ಆರಂಭದಲ್ಲಿ ತಮಾಷೆ ಮಾಡುತ್ತಿರಬಹುದು ಎಂದು ತಿಳಿದಿದ್ದೆ. ಹಬ್ಬದ ಸಂದರ್ಭದಲ್ಲಿ ಟೋಪಿ ಸಹ ಹಾಕುತ್ತಿದ್ದರು ನಾವು ಮುಸ್ಲಿಮರ ಜೊತೆಯಲ್ಲಿ ಚೆನ್ನಾಗಿಯೇ ಇದ್ದೇವೆ. ನಮ್ಮ ಹಬ್ಬಗಳಿದ್ದಾಗ ಊಟಕ್ಕೆ ಕರೆಯುತ್ತೇವೆ. ಅವರ ಹಬ್ಬ ಇದ್ರೆ ನಮಗೆ ರೇಷನ್ ಕೊಡ್ತಾರೆ ಎಂದರು.

ಇದನ್ನೂ ಓದಿ:  Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವಿನ ಆಸ್ತಿ ಜಗಳದಿಂದ ಪತಿಯ ಮನಸ್ಥಿತಿ ಬದಲಾಗಿತ್ತು. ಈ ಕಾರಣಗಳಿಂದ ಮತಾಂತರಕ್ಕೆ ಮುಂದಾಗಿದ್ದರು. ಅವರೇ ತಮ್ಮ ಸ್ವಂತ ನಿರ್ಧಾರದಿಂದ ಮತಾಂತರಗೊಳ್ಳಲು ಮುಂದಾಗಿದ್ದರೇ  ವಿನಃ ಯಾರೂ ಅವರನ್ನ ಆಹ್ವಾನ ಮಾಡಿರಲಿಲ್ಲ. ಪತಿಗೆ ಯಾರೂ ಬಲವಂತ ಸಹ ಮಾಡಿರಲಿಲ್ಲ ಎಂದು ಹೇಳಿದರು.
Published by:Mahmadrafik K
First published: