Vietjet: ಬೆಂಗಳೂರಿಗರೇ ಇನ್ಮುಂದೆ ನೀವು ಡೈರೆಕ್ಟ್ ಆಗಿ ವಿಯಟ್ನಾಮ್ ದೇಶಕ್ಕೆ ಹೋಗ್ಬಹುದು! ಹೇಗೆ ಅಂತೀರಾ ಇಲ್ಲಿದೆ ನೋಡಿ

ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ವಿಯಟ್ನಾಂ ದೇಶದ ಪ್ರಮುಖ ನಗರಗಳಾದ ಹನೋಯಿ, ಹೊ ಚಿ ಮಿನ್ ಇತ್ಯಾದಿಗಳ ಮಧ್ಯೆ ವಿಯಟ್ ಜೆಟ್ ವಿಮಾನ ಸೇವೆ ಬರುವ ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಆಗ್ನೇಯ ಏಷಿಯಾದ ಈ ಪುಟ್ಟ ರಾಷ್ಟ್ರವು ತನ್ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅದರಲ್ಲಿ ಭಾರತೀಯರಿಗೆ ಅನುಕೂಲವಾಗುವಂತೆ ಇ-ವಿಸಾಗಳನ್ನು ಪರಿಚಯಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರಿಗರೆ, ನಿಮ್ಮ ಕೆಲಸವೇನಾದರೂ ವಿಯಟ್ನಾಮ್ (Vietnam) ದೇಶದಲ್ಲಿದೆಯಾ...ನಿಮಗೆ ಆ ದೇಶಕ್ಕೆ ಪ್ರವಾಸ (Tour) ಹೋಗಬೇಕಾ? ಇಲ್ಲವೇ ನಿಮ್ಮ ಸಂಬಂಧಿಕರನ್ನು ಭೇಟಿ ಮಾಡಲು ನೀವು ವಿಯಟ್ನಾಮ್ ದೇಶಕ್ಕೆ ತೆರಳಲು ಬಯಸುತ್ತಿರುವಿರಾ? ಈ ಎಲ್ಲ ಪ್ರಶ್ನೆಗಳಿಗೂ ಹೌದೆಂದಾದಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ..ಬರುವ ನವೆಂಬರ್ ತಿಂಗಳಿನವರೆಗೆ ಕಾಯುವುದು. ಏಕೆಂದರೆ, ಕರ್ನಾಟಕದ ರಾಜಧಾನಿ ಬೆಂಗಳೂರು (Bengaluru) ಹಾಗೂ ವಿಯಟ್ನಾಂ ದೇಶದ ಪ್ರಮುಖ ನಗರಗಳಾದ ಹನೋಯಿ, ಹೊ ಚಿ ಮಿನ್ ಇತ್ಯಾದಿಗಳ ಮಧ್ಯೆ ವಿಯಟ್ ಜೆಟ್ (VietJet) ವಿಮಾನ ಸೇವೆ ಬರುವ ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಆಗ್ನೇಯ ಏಷಿಯಾದ ಈ ಪುಟ್ಟ ರಾಷ್ಟ್ರವು ತನ್ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅದರಲ್ಲಿ ಭಾರತೀಯರಿಗೆ (Indians) ಅನುಕೂಲವಾಗುವಂತೆ ಇ-ವಿಸಾಗಳನ್ನು ಪರಿಚಯಿಸಿದೆ.

ಬೆಂಗಳೂರು ನಗರದಿಂದ ಉದ್ಯಮಿಗಳು ತನ್ನತ್ತ ಮುಖ ಮಾಡುವ ನಿಟ್ಟಿನಲ್ಲಿ ವಿಮಾನ ಸೇವೆ ಆರಂಭಿಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಹಾಗೂ ವಿಯಟ್ನಾಮ್ ಮಧ್ಯೆ ಮೊದಲ ನೇರ ಫ್ಲೈಟ್
ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿಯಟ್ ಜೆಟ್ ವಿಮಾನ ಸಂಸ್ಥೆಯ ವಾಣಿಜ್ಯ ನಿರ್ದೇಶಕರಾದ ಜಯ್ ಎಲ್ ಲಿಂಗೇಸ್ವರ ಅವರು ಮಾತನಾಡುತ್ತ ಬೆಂಗಳೂರು ಹಾಗೂ ವಿಯಟ್ನಾಮ್ ಮಧ್ಯೆ ಮೊದಲ ನೇರ ಫ್ಲೈಟ್ ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಿಂದ ಹೊರಡಲಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು, "ವಿಯಟ್ ಜೆಟ್ ಸಂಸ್ಥೆಯ ವಿಮಾನವು ನವೆಂಬರ್ ಮೊದಲ ವಾರದಲ್ಲಿ ಇಲ್ಲಿಂದ ವಿಯೆಟ್ನಾಮ್ ದೇಶಕ್ಕೆ ಮೊದಲ ಬಾರಿಗೆ ಹಾರಿದಾಗ ಇದು ನಗರವನ್ನು ವಿಯೆಟ್ನಾಮ್ ದೇಶಕ್ಕೆ ನೇರವಾಗಿ ಸಂಪರ್ಕಿಸುವ ಮೊದಲ ಫ್ಲೈಟ್ ಆಗಲಿದೆ. ತದನಂತರ ನಾವು ವಾರದಲ್ಲಿ ಮೂರು ಇಲ್ಲವೆ ನಾಲ್ಕು ವಿಮಾನ ಸೇವೆಗಳನ್ನು ಬೆಂಗಳೂರಿನಿಂದ ಹನೋಯಿ, ಹೊ ಚಿ ಮಿನ್ ಹಾಗೂ ಡಾ ನಾಂಗ್ ನಗರಗಳಿಗೆ ಪರಿಚಯಿಸಲು ಯೋಜಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ವಿಳಂಬತೆಯನ್ನು ತೊರೆದು ನೇರವಾಗಿ ವಿಯಟ್ನಾಮ್ ದೇಶಕ್ಕೆ ತೆರಳಲು ಅವಕಾಶ 
ಅಷ್ಟಕ್ಕೂ, ಈ ಮುಂಚೆ ಬೆಂಗಳೂರಿನಿಂದ ನೇರವಾಗಿ ವಿಯಟ್ನಾಮ್ ದೇಶಕ್ಕೆ ತೆರಳಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಟ್ರಾನ್ಸಿಟ್ ಮಾರ್ಗ ಅಂದರೆ ಸಿಂಗಪೂರ್, ಮಲೇಷಿಯಾ ಇಲ್ಲವೆ ಥೈಲ್ಯಾಂಡ್ ದೇಶಕ್ಕೆ ತೆರಳಿ ಅಲ್ಲಿಂದ ವಿಯಟ್ನಾಮ್ ದೇಶದ ಹನೋಯಿ ಅಥವಾ ಹೊ ಚಿ ಮಿನ್ ನಿಲ್ದಾಣಕ್ಕೆ ತಲುಪಬೇಕಾಗಿತ್ತು. ಆದರೆ, ಬರುವ ನವೆಂಬರ್ ನಿಂದ ಬೆಂಗಳೂರಿಗರು ಈ ರೀತಿಯ ಕಷ್ಟಕರ ಹಾಗೂ ವಿಳಂಬತೆಯನ್ನು ತೊರೆದು ನೇರವಾಗಿ ವಿಯಟ್ನಾಮ್ ದೇಶಕ್ಕೆ ತೆರಳಬಹುದಾಗಿದೆ.

ಇದನ್ನೂ ಓದಿ:  Deoghar Airport: 400 ಕೋಟಿ ವೆಚ್ಚದ ದಿಯೋಘರ್ ವಿಮಾನ ನಿಲ್ದಾಣ ಹೇಗಿದೆ? ಇಲ್ಲಿವೆ ಫೋಟೋಸ್

ಹಾಗೆ ನೋಡಿದರೆ, ವಿಯಟ್ನಾಮ್ ಮೊದಲ ಬಾರಿಗೆ ಭಾರತಕ್ಕೆ ತನ್ನ ವಿಮಾನ ಸೇವೆಯನ್ನು 2019 ರಲ್ಲಿ ಪರಿಚಯಿಸಿತ್ತು. ಆ ಸಂದರ್ಭದಲ್ಲಿ ಹನೋಯಿಯಿಂದ ನವದೆಹಲಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, 2020ರಲ್ಲಿ ಬಂದೊದಗಿದ ಭೀಕಕ ಕೊರೋನಾ ಹಾವಳಿಯಿಂದಾಗಿ ಫ್ಲೈಟ್ ಅನ್ನು ರದ್ದುಗೊಳಿಸಲಾಯಿತು. ತದನಂತರ ಭಾರತ ತನ್ನ ಅಂತಾರಾಷ್ಟ್ರೀಯ ವಿಮಾನ ಸೇವೆ ಮೇಲೆ ವಿಧಿಸಿದ್ದ ನಿರ್ಬಂಧ ತೆಗೆದು ಹಾಕಿದ ಮೇಲೆ ಮತ್ತೆ ವಿಯಟ್ನಾಮ್ ತನ್ನ ಸೇವೆ ಆರಂಭಿಸಿತು ಹಾಗೂ ಮುಂಬೈಗೂ ಸಹ ಸಂಪರ್ಕವನ್ನು ಹೆಚ್ಚುವರಿಯಾಗಿ ಸೇರಿಸಿತು.

ಈ ಬಗ್ಗೆ ವಿವರಿಸಿದ ಲಿಂಗೇಸ್ವರ ಅವರು, "ನಾವು ಭಾರತದಲ್ಲಿ ಇನ್ನು ಹೆಚ್ಚು ಹೆಚ್ಚು ಪ್ರದೇಶಗಳನ್ನು ಆವರಿಸುತ್ತಿದ್ದು ನವೆಂಬರ್ ನಲ್ಲಿಯೇ ಬೆಂಗಳೂರು ಹೊರತುಪಡಿಸಿದರೆ ಹೈದರಾಬಾದ್ ಹಾಗೂ ಅಹ್ಮದಾಬಾದ್ ನಗರಗಳಿಗೂ ನಮ್ಮ ಸಂಪರ್ಕ ಸೇವೆಯನ್ನು ವಿಸ್ತರಿಸಲು ಮುಂದಾಗುತ್ತಿದ್ದೇವೆ" ಎಂದು ಹೇಳಿದ್ದಾರೆ.

ಆರಂಭಿಕ ಕೊಡುಗೆ
ವಿಯಟ್ ಜೆಟ್ ಏರ್ "Rs 26 only" ಎಂಬ ತನ್ನ ಸೀಮಿತ ಕೊಡುಗೆಯನ್ನು ಬೆಂಗಳೂರಿನ ಫ್ಲೈಟ್ ಮೇಲೆ ನೀಡಲು ಯೋಜಿಸುತ್ತಿರುವುದಾಗಿ ತಿಳಿದುಬಂದಿದೆ. ಈ ಮೂಲಕ ವಿಯಟ್ನಾಮ್, ಪ್ರವಾಸಿಗರು ಹಾಗೂ ಉದ್ಯಮಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು ವಿಯಟ್ನಾಮ್ ಅನ್ನು ಸಿಂಗಾಪೂರ್, ಮಲೇಷಿಯಾ ರೀತಿ ಒಂದು ಟ್ರಾನ್ಸಿಟ್ ಹಬ್ ಅನ್ನಾಗಿ ಪರಿವರ್ತಿಸಿ ತದನಂತರ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಯುರೋಪ್ ದೇಶಗಳಿಗೆ ಸಂಪರ್ಕಿಸುವಂತಹ ಮಹದೋದ್ದೇಶವನ್ನು ಹೊಂದಿದೆ ಎನ್ನಲಾಗಿದೆ. ಈ ಪ್ರಕಾರ, 2023 ಮೊದಲಾರ್ಧದಲ್ಲಿ ಬೆಂಗಳೂರಿಗರು ವಿಯಟ್ನಾಮ್ ದೇಶಕ್ಕೆ ತೆರಳಿ ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಗೆ ತೆರಳುವಂತಾಗಬೇಕೆಂಬ ನಿಲುವು ವಿಯಟ್ನಾಮ್ ದೇಶದ್ದಾಗಿದೆ.

ಇದನ್ನೂ ಓದಿ: Forced Abortion: 14 ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿದ ಲವರ್​​, ಡೆತ್ ನೋಟ್​​ನಲ್ಲಿತ್ತು ರಹಸ್ಯ!

ಪ್ರಸ್ತುತ, ವಿಯಟ್ನಾಮ್ ತನ್ನ ಎಲ್ಲ ಆಗಮನ ಸಂಬಂಧಿ ಕೋವಿಡ್ ನಿಯಮಾವಳಿಗಳನ್ನು ಹಿಂಪಡೆದಿದ್ದು ಸಂಪೂರ್ಣ ಡೋಸ್ ಕೋವಿಡ್ ಲಸಿಕೆ ಪಡದವರು ನಿಸ್ಸಂಕೋಚವಾಗಿ ವಿಯಟ್ನಾಮ್ ದೇಶಕ್ಕೆ ತೆರಳಬಹುದು ಎನ್ನಲಾಗಿದೆ.
Published by:Ashwini Prabhu
First published: