7ನೇ ಬಾರಿಯೂ ನಡೆಯದ ಮಂಡ್ಯ ಜಿ.ಪಂ.ನ ಸಾಮಾನ್ಯ ಸಭೆ; ಅಧ್ಯಕ್ಷೆ-ಸದಸ್ಯರ ರಾಜಕೀಯ ಜಿದ್ದಿಗೆ ಸಾಮಾನ್ಯ ಸಭೆ ಬಲಿ

ಪ್ರತಿಬಾರಿ ಸಾಮಾನ್ಯ ಸಭೆ ಆಯೋಜಿಸಿದಾಗಲೆಲ್ಲ‌ ಜೆಡಿಎಸ್ ಸದಸ್ಯರು ಜಿ.ಪಂ.ಕಚೇರಿಗೆ ಬಂದ್ರು ಸಾಮಾನ್ಯ ಸಭೆಗೆ ಮಾತ್ರ ಬರದೆ ಗೈರಾಗುತ್ತಿದ್ದಾರೆ. ಇದ್ರಿಂದಾಗಿ ಈ ಬಾರಿಯ ಬಜೆಟ್ ಕೂಡ ಮಂಡನೆಯಾಗಿಲ್ಲ.

ಮಂಡ್ಯ ಜಿಲ್ಲಾ ಪಂಚಾಯತ್

ಮಂಡ್ಯ ಜಿಲ್ಲಾ ಪಂಚಾಯತ್

  • Share this:
ಮಂಡ್ಯ(ಅ.13): ರಾಜಕೀಯ ಜಿದ್ದಾಜಿದ್ದಿಗಾಗಿ ಮಂಡ್ಯ ಜಿ.ಪಂ ನ 7 ಸಾಮಾನ್ಯ ಸಭೆಗಳು ಬಲಿಯಾಗಿವೆ. 6 ಸಾಮಾನ್ಯ ಸಭೆಗಳು ಕೋರಂ ಕೊರತೆಯಿಂದ ಮುಂದೂಡಲಾಗಿದ್ದರೆ, ಒಂದು ಸಾಮಾನ್ಯ ಸಭೆ ಕೊವಿಡ್ ನಿಷೇಧಾಜ್ಞೆಯ  ಕಾರಣದಿಂದ ಮುಂದೂಡುವ ಮೂಲಕ  ಮಂಡ್ಯ ಜಿ.ಪಂ.ಇತಿಹಾಸದಲ್ಲಿ ಏಳು ಸಾಮಾನ್ಯ ಸಭೆಗಳು ಮುಂದೂಡಿಕೆಯಾದಂತಾಗಿ ಇತಿಹಾಸ ಸೃಷ್ಟಿಯಾಗಿದೆ. ಹೌದು! ಮಂಡ್ಯ ಜಿ.ಪಂ. ನಲ್ಲಿ ಕಳೆದ ಒಂದು ವರ್ಷ ದಿಂದ ಯಾವುದೇ ಸಾಮಾನ್ಯ ಸಭೆಗಳು ನಡೀತಾ ಇಲ್ಲ‌. ಜೆಡಿಎಸ್ ಪಕ್ಷದವರ ರಾಜಕೀಯ ಒಳ ಬೇಗುದಿಯಿಂದಅಧ್ಯಕ್ಷೆ ಮತ್ತು ಸದಸ್ಯರ ನಡುವಿನ‌ ಭಿನ್ನಾಭಿಪ್ರಾಯದಿಂದಾಗಿ ಜಿ.ಪಂನ  ಸಾಮಾನ್ಯ ಸಭೆಗಳು ನಡೆಯದೆ ಸಾಯುವಂತಾಗಿದೆ. ಕಳೆದ ವರ್ಷ ಜಿ.ಪಂ.ನ ಅಧ್ಯಕ್ಷೆ  JDS  ಪಕ್ಷದ ನಾಗರತ್ನ ಸ್ವಾಮಿಯ ಪತಿ ಎಸ್ಪಿ ಸ್ವಾಮಿ ಅನ್ಯ ಕಾರಣದಿಂದ ಬಿಜೆಪಿಗೆ ಸೇರಿದ್ದರು. ಇದರಿಂದ ಕೆರಳಿದ ದಳಪತಿಗಳು ಸ್ವಾಮಿಯ ಪತ್ನಿಯಾಗಿದ್ದ ಜಿ.ಪಂ. ಅಧ್ಯಕ್ಷೆ ನಾಗರತ್ನ ಸ್ವಾಮಿಯನ್ನು ಕೆಳಗಿಳಿಸುವ ಹಠಕ್ಕೆ ಬಿದ್ದು,  ಕಳೆದ ವರ್ಷದಿಂದ ಇಲ್ಲಿಯವರೆಗೂ ಅಧ್ಯಕ್ಷೆ ನಾಗರತ್ನ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು. ಆದರೂ ಅಧ್ಯಕ್ಷೆ  ನಾಗರತ್ನ ರಾಜೀನಾಮೆ‌ ನೀಡಿರಲಿಲ್ಲ‌.‌ ಇದರಿಂದ ಕೆರಳಿದ ಜಿ.ಪಂ.ಜೆಡಿಎಸ್ ಸದಸ್ಯರು ಸ್ವಪಕ್ಷೀಯ ಅಧ್ಯಕ್ಷೆ ವಿರುದ್ದ ಕಿಡಿ ಕಾರಿದ್ದು, ಇದುವರೆಗೂ ಜಿ.ಪಂ.ನ ಯಾವುದೇ ಸಾಮಾನ್ಯ ಸಭೆಗೂ ಬರದೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು  ತಮ್ಮ ಪಕ್ಷದವರ ಈ ವರ್ತನೆ ವಿರುದ್ದ ಜಿ.ಪಂ.ಅಧ್ಯಕ್ಷೆ ಕಿಡಿಕಾರಿದರೆ, ತಮ್ಮ ಪಕ್ಷದ ಸದಸ್ಯರ ರಾಜಕೀಯ ದ್ವೇಷಕ್ಕೆ  ಜಿ.ಪಂ. ಅಧ್ಯಕ್ಷೆ ನಾಗರತ್ನ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಜಿ.ಪಂ.ನ ಜೆಡಿಎಸ್ ಸದಸ್ಯರ ಅಸಮಧಾನ ದಿಂದ ಕಳೆದ ವರ್ಷದ ಆಗಸ್ಟ್​​ ತಿಂಗಳಿನಿಂದ ಇದುವರೆ ಗೂ ಯಾವುದೇ ಸಾಮಾನ್ಯ ಸಭೆ ನಡೆದಿಲ್ಲ‌‌. ಪ್ರತಿಬಾರಿ ಸಾಮಾನ್ಯ ಸಭೆ ಆಯೋಜಿಸಿದಾಗಲೆಲ್ಲ ಜೆಡಿಎಸ್ ಸದಸ್ಯರ ಗೈರಾಗುತ್ತಿರೋದ್ರಿಂದ ಪ್ರತಿ ಬಾರಿಯೂ‌ ಕೋರಂ ಕೊರತೆಯ ಕಾರಣದಿಂದ ಸಾಮಾನ್ಯ ಸಭೆ ಮುಂದೂಡಲಾಗ್ತಿದೆ. ಇದುವರೆಗೂ ಈ ರೀತಿಯಾಗಿ 6 ಸಾಮಾನ್ಯ ಸಭೆಗಳು ಮುಂದೂಡಿಕೆಯಾದ್ರೆ, 1 ಸಭೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದೆ.

ವಿಜಯಪುರ ಸೇರಿ ಉ.ಕ.ದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆ; 2 ದಿನ ರೆಡ್ ಅಲರ್ಟ್ ಘೋಷಣೆ

ಪ್ರತಿಬಾರಿ ಸಾಮಾನ್ಯ ಸಭೆ ಆಯೋಜಿಸಿದಾಗಲೆಲ್ಲ‌ ಜೆಡಿಎಸ್ ಸದಸ್ಯರು ಜಿ.ಪಂ.ಕಚೇರಿಗೆ ಬಂದ್ರು ಸಾಮಾನ್ಯ ಸಭೆಗೆ ಮಾತ್ರ ಬರದೆ ಗೈರಾಗುತ್ತಿದ್ದಾರೆ. ಇದ್ರಿಂದಾಗಿ ಈ ಬಾರಿಯ ಬಜೆಟ್ ಕೂಡ ಮಂಡನೆಯಾಗಿಲ್ಲ. ಇದು ಜೆಡಿಎಸ್ ಪಕ್ಷವರು ತಮ್ಮ ರಾಜೀನಾಮೆಗಾಗಿ ನೀಡ್ತಿರೋ ಕಿರುಕುಳ ಅವ್ರಿಗೆ ಅಭಿವೃದ್ದಿ ಬೇಡ ಅಧಿಕಾರ  ಬೇಕಾಗಿದೆ ಎಂದು ಅಧ್ಯಕ್ಷೆ ದೂರಿದ್ರೆ, ಸರ್ವಾಧಿಕಾರಿ ಧೋರಣೆ ಮೂಲಕ ಸದಸ್ಯರ ಮೇಲೆ ದೌರ್ಜನ್ಯ ನಡೆಸ್ತಿದ್ದಾರೆ ಸದಸ್ಯರು ಆರೋಪಿಸಿದ್ದು ಅಧ್ಯಕ್ಷೆಗೆ ಅಧಿಕಾರ ಬೇಕಾಗಿದೆ ಜಿಲ್ಲೆಯ ಅಭಿವೃದ್ದಿಯಲ್ಲವೆಂದು ಜಿ.ಪಂ.ಜೆಡಿಎಸ್ ಸದಸ್ಯರು ಆರೋಪಿಸಿದ್ದಾರೆ.

ಒಟ್ಟಾರೆ ಮಂಡ್ಯ ಜಿ.ಪಂ. ನ ರಾಜಕೀಯ ಜಿದ್ದಾಜಿದ್ದಿ ಇದೀಗ ಮಂಡ್ಯ ಜಿಲ್ಲೆಯ ಅಭಿವೃದ್ದಿ ಕೆಲಸಗಳ ಮೇಲೆ ಪರಿಣಾಮ ಬೀರ್ತಿದೆ. ಕಳೆದ 14 ತಿಂಗಳಿನಿಂದ ಮಂಡ್ಯ ಜಿ.ಪಂ.ನಲ್ಲಿ ಯಾವುದೇ ಅಭಿವೃದ್ದ ಇದೀಗ ಸೊರಗಿ ಹೋಗಿದೆ. 20-21 ಸಾಲಿಗೆ ಮಂಡನೆಯಾಗಬೇಕಾದ ಬಜೆಟ್ ಕೂಡ ಮಂಡನೆಯಾಗದೆ ಜಿ.ಪಂ. ಆರ್ಥಿಕತೆಯ ಮೇಲೂ ಪರಿಣಾಮ ಬೀರ್ತಿದೆ.

ಇಷ್ಟಾದರೂ ಸದಸ್ಯರು ಮತ್ತು ಅಧ್ಯಕ್ಷೆ ಅಧಿಕಾರ ಕಿತ್ತಾಟ ಮಾಡ್ತಿದ್ದಾರೆ. ಜಿ.ಪಂ.ನ ಅಧಿಕಾರಿಗಳು ಇವರ ಕಿತ್ತಾಟಕ್ಕೆ ಮೂಕಪ್ರೇಕ್ಷಕರರಾಗಿ ನಿಂತಿದ್ರೆ, ಸೂಕ್ತ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರೋದು ದುರಂತವೇ ಸರಿ.
Published by:Latha CG
First published: