ಮೈಸೂರು ದಸರಾ 2019: ಖಾಸಗಿ ದರ್ಬಾರ್​​ಗೆ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಶುರು

ಇಂದಿನ ಶುಭ ಲಗ್ನದಲ್ಲಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಸಿಂಹಾಸನ ಜೋಡಣೆಯ ವೇಳೆ ಐತಿಹಾಸಿಕ ಹಿನ್ನೆಲೆಯ ಅರಮನೆಯಲ್ಲಿ ನವಗ್ರಹ, ಗಣ ಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. 

Latha CG | news18-kannada
Updated:September 24, 2019, 9:18 AM IST
ಮೈಸೂರು ದಸರಾ 2019: ಖಾಸಗಿ ದರ್ಬಾರ್​​ಗೆ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಶುರು
ಸಿಂಹಾಸನ ಜೋಡಣೆ ಕಾರ್ಯ
  • Share this:
ಮೈಸೂರು(ಸೆ.24): ವಿಶ್ವವಿಖ್ಯಾತ  ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ಸೆ.29 ರಿಂದ ಅ.8ರವರೆಗೆ ನಡೆಯುವ ಮೈಸೂರು ದಸರೆಗೆ ಅರಮನೆ ಮತ್ತು ನಗರ ಸಕಲ ರೀತಿಯಲ್ಲೂ ಸಿದ್ದಗೊಳ್ಳುತ್ತಿದೆ. ಈ ನಡುವೆಯೇ ಇಂದು ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಆರಂಭವಾಗಿದೆ. ಸೆಪ್ಟೆಂಬರ್ 29ರಿಂದ ರಾಜಮನೆತನದ ದಸರಾ ಖಾಸಗಿ ದರ್ಬಾರ್ ಶುರುವಾಗಲಿದೆ.

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ಗೆ ಸಿದ್ದತೆ ನಡೆಸಲಾಗುತ್ತಿದೆ. ಹೀಗಾಗಿ ಅರಮನೆಯ ದರ್ಬಾರ್​ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಭರದಿಂದ ಸಾಗಿದೆ. ಅರಮನೆ ಸಂಪ್ರದಾಯದಂತೆ ಸಿಂಹಾಸನ ಜೋಡಣಾ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಹೀಗಾಗಿ ಅರಮನೆ ಒಳ‌ ಮತ್ತು ಹೊರ ಆವರಣಕ್ಕೆ ಪ್ರವೇಶವಿರುವುದಿಲ್ಲ.

Bangalore Rain: ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತೆ ಮಳೆಯ ಆರ್ಭಟ; ಸಿಲಿಕಾನ್​ ಸಿಟಿಯಲ್ಲಿ ಹಳದಿ ಅಲರ್ಟ್​ ಘೋಷಣೆ


 

ಇಂದಿನ ಶುಭ ಲಗ್ನದಲ್ಲಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಸಿಂಹಾಸನ ಜೋಡಣೆಯ ವೇಳೆ ಐತಿಹಾಸಿಕ ಹಿನ್ನೆಲೆಯ ಅರಮನೆಯಲ್ಲಿ ನವಗ್ರಹ, ಗಣ ಹೋಮ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.  ಸೆಪ್ಟೆಂಬರ್ 29ರಿಂದ ಆರಂಭವಾಗಲಿರುವ ರಾಜಮನೆತನದ ದಸರಾ ಖಾಸಗಿ ದರ್ಬಾರ್ ಆರಂಭವಾಗಲಿದೆ.


 


ದಸರಾ ದಿನಗಳಲ್ಲಿ ಯದುವೀರ್ ಒಡೆಯರ್ ಈ ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್​ ನಡೆಸುತ್ತಾರೆ. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ಸಿಂಹಾಸನದಲ್ಲಿ ಸಿಂಹದ ಮುಖ ಇರುವ ಭಾಗವನ್ನು ದರ್ಬಾರ್ ದಿನ ಜೋಡಿಸಲಾಗುತ್ತೆ.ಇನ್ನು ವರ್ಷಪೂರ್ತಿ ಸಿಂಹಾಸನ ಬಿಡಿಭಾಗಗಳನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗುತ್ತದೆ.

(ವರದಿ: ಪುಟ್ಟಪ್ಪ)

First published: September 24, 2019, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading