• Home
  • »
  • News
  • »
  • state
  • »
  • Gavisiddeshwara Matha: ಕೊಪ್ಪಳ ಗವಿಮಠದ ಜಾತ್ರೆ: ಫಳಾರದಲ್ಲಿ ಗಮನ ಸೆಳೆಯುತ್ತಿರುವ ಸ್ಲೋಗನ್​ಗಳು

Gavisiddeshwara Matha: ಕೊಪ್ಪಳ ಗವಿಮಠದ ಜಾತ್ರೆ: ಫಳಾರದಲ್ಲಿ ಗಮನ ಸೆಳೆಯುತ್ತಿರುವ ಸ್ಲೋಗನ್​ಗಳು

ಕೊಪ್ಪಳ ಜಾತ್ರೆಗೆ ಸೇರಿದ ಜನ

ಕೊಪ್ಪಳ ಜಾತ್ರೆಗೆ ಸೇರಿದ ಜನ

ಸುಮಾರು 50 ಕ್ಕೂ ಅಧಿಕ ಮಿಠಾಯಿ ಅಂಗಡಿಗಳನ್ನು ಹಾಕಲಾಗಿದೆ. ಜಾತ್ರೆಗೆ ಬಂದವರು ಮಿಠಾಯಿ ಅಂಗಡಿಯಲ್ಲಿ ಬೆಂಡು ಬೆತ್ತಾಸು. ಫಳಾರ ಹಾಕಿಸಿಕೊಂಡು ಹೋಗುವುದು ವಾಡಿಕೆ, ಇದು ಹಿಂದಿನಿಂದಲೂ ಬಂದಿರುವ ಸಂಪ್ರಾದಾಯ ಈ ಸಂಪ್ರಾದಾಯವು ಈಗಲೂ ಮುಂದುವರಿದಿದೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ಸ್ಲೋಗನ್​ಗಳು ವಿಶೇಷವಾಗಿವೆ.

ಮುಂದೆ ಓದಿ ...
  • Share this:

ಕೊಪ್ಪಳ(ಜ.13): ಕೊಪ್ಪಳ ಜಾತ್ರೆಯ (Gavisiddeshwara Matha) ಮಿಠಾಯಿ ಅಂಗಡಿಗಳಲ್ಲಿ (Sweets Shops) ಪ್ರದರ್ಶಿಸುವ ಸಂದೇಶಗಳು, ಜಾಗೃತಿಯ ಸ್ಲೋಗನ್ ಗಳು ಪ್ರತಿ ವರ್ಷ ಕುತೂಹಲಕರ ಮತ್ತು ಗಮನಸೆಳೆಯುತ್ತವೆ. ಜಾತ್ರೆಯಲ್ಲಿಯ ಮಿಠಾಯಿ ಅಂಗಡಿಗಳಲ್ಲಿ ಸ್ಲೋಗನ್​ಗಳು (Slogans) ಗಮನ ಸೆಳೆಯುತ್ತಿವೆ. ಸುಮಾರು 50 ಕ್ಕೂ ಅಧಿಕ ಮಿಠಾಯಿ ಅಂಗಡಿಗಳನ್ನು ಹಾಕಲಾಗಿದೆ. ಜಾತ್ರೆಗೆ ಬಂದವರು ಮಿಠಾಯಿ ಅಂಗಡಿಯಲ್ಲಿ ಬೆಂಡು ಬೆತ್ತಾಸು. ಫಳಾರ ಹಾಕಿಸಿಕೊಂಡು ಹೋಗುವುದು ವಾಡಿಕೆ, ಇದು ಹಿಂದಿನಿಂದಲೂ ಬಂದಿರುವ ಸಂಪ್ರಾದಾಯ ಈ ಸಂಪ್ರದಾಯವು ಈಗಲೂ ಮುಂದುವರಿದಿದೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ಸ್ಲೋಗನ್​ಗಳು ವಿಶೇಷವಾಗಿವೆ.


ಅದರಲ್ಲಿ ಸುಮಾರು 35 ವರ್ಷದಿಂದ ಜಾತ್ರೆಯಲ್ಲಿ ಮಿಠಾಯಿ ಹಾಕುವ ಅಬ್ದುಲ್ ರಷೀದ್ ಮಿಠಾಯಿ ಕುಟುಂಬದ ಮಿಠಾಯಿ ಅಂಗಡಿಯಲ್ಲಿ ಕೊರೊನಾ ನೀ ಮರಳಿ ಬರಬೇಡಾ ಎಂಬ ಸಂದೇಶ ಗಮನಸೆಳೆದಿದೆ. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಸರಳ ರಥೋತ್ಸವ ಮಾತ್ರ ಜರುಗಿತ್ತು. ಜಾತ್ರೆಯ ವ್ಯಾಪಾರ ಎರಡು ವರ್ಷ ಇರಲಿಲ್ಲ. ಕೊರೊನಾ ಅಂದ್ರೆ ಲಾಕ್​ಡೌನ್ , ವೀಕ್ ಎಂಡ್ ಕರ್ಫ್ಯೂ , ಮಾಸ್ಕ್, ಸ್ಯಾನಿಟೈಸರ್, ದುಡಿಮೆ ಇಲ್ಲದ ದಿನಗಳು, ಮನುಷ್ಯ ಮನುಷ್ಯರ ಹತ್ತಿರ ಬರಲು ಹೆದರುವ ದಿನಗಳು, ಶಾಲಾ ಮಕ್ಕಳ ಆನ್ ಲೈನ್ ಕ್ಲಾಸುಗಳು, ಪರಿಚಿತರ ಅಗಲುವಿಕೆ. ಹೀಗೆಈ ಬದುಕು ಹೀಗೇ ಮುಗಿದು ಹೋಗುತ್ತಾ ಎಂಬ ಆತಂಕ, ಭಯ, ಚಡಪಡಿಕೆ ಎಲ್ಲಾ ನೆನಪಾಗುತ್ತೆ.
ಇದನ್ನೂ ಓದಿ: Haveri Viral Video: ಚೌಡೇಶ್ವರಿ ಜಾತ್ರೆಗೆ ಬನ್ನಿ, ಇದು ಸನ್ನಿ ಲಿಯೋನ್ ಫ್ಯಾನ್ಸ್ ಸ್ವಾಗತ!


ಈಗ ಆ ದಿನಗಳು ಮತ್ತೆ ಬರದಿರಲಿ ಅಂತ ಮನಸ್ಸುಗಳು ಬಯಸುತ್ತವೆ.'ಈಗಲೂ ಮತ್ತೆ ಕೊರೊನಾ ಭಯ ಇದೆ. ಆದರೆ ಅದು ಬರುವುದು ಬೇಡ. ಎರಡು ವರ್ಷ ಜಾತ್ರೆ ನಡೆದಿರಲಿಲ್ಲ. ಅಜ್ಜನ ಕೃಪೆಯಿಂದ ಈ ವರ್ಷ ಜಾತ್ರೆಯಲ್ಲಿ ವ್ಯಾಪಾರ ಚೆನ್ನಾಗಿದೆ. ಎಲ್ಲರೂ ನೆಮ್ಮದಿಯಿಂದ ಇರಬೇಕಾದರೆ ಕೊರೊನಾ ಬರಬಾರದು ಅದಕ್ಕೆ ನಮ್ಮ ಅಂಗಡಿಯಲ್ಲಿ ಕೊರೊನಾ ನೀ ಮರಳಿ ಬರಬೇಡಾ ಎಂಬ ಸಂದೇಶ ಹಾಕಿದ್ದೇವೆ ಎನ್ನುತ್ತಾರೆ ಖಲಂದರ್ ಮಿಠಾಯಿ.
ಇನ್ನೊಂದು ಕಡೆ ರಾಜ್ಯ ಸರಕಾರವು ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿದೆ. 2006 ರಿಂದ ಸರಕಾರಿ ನೌಕರರಿಗೆ ಪಿಂಚಣಿ ಸಿಗುತ್ತಿಲ್ಲ. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ ಎಂದು ಇತ್ತೀಚಿಗೆ ಬೆಂಗಳೂರಿನಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ನೌಕರರ ಧ್ವನಿಯಾಗಿ ಕುದರಿಮೋತಿಯ ಖಾಜಾವಲಿ ಎಂಬುವವರ ಮಿಠಾಯಿ ಅಂಗಡಿಯಲ್ಲಿ ಎನ್‌ಪಿಎಸ್ ರದ್ದಾಗಲಿ. ಒಪಿಎಸ್ ಜಾರಿಯಾಗಲಿ ಎಂಬ ಸ್ಲೋಗನ್ ಹಾಕಿದ್ದಾರೆ.
ಇದನ್ನೂ ಓದಿ: Kannada Sahitya Sammelana: ನುಡಿ ಜಾತ್ರೆಗೆ ಸಂಭ್ರಮದ ತೆರೆ; ಸಮಾರೋಪದಲ್ಲಿ ರಾಜಕೀಯದ ಮಾತುಗಳು; ವೇದಿಕೆಯಲ್ಲಿ ಏಟು-ತಿರುಗೇಟು


ಇನ್ನೊಂದು ಕಡೆ ದೇಶ ಸರ್ವ ಜನಾಂಗ ಶಾಂತಿದೋಟ. ಇನ್ನೊಂದು ಕಡೆ ಗವಿಮಠದ ಈ ವರ್ಷದ ಜಾತ್ರೆಯ ಸಮಾಜಿಕ ಘೋಷಣೆಯಾಗಿರುವ ಅಂಗಾAಗ ದಾನದ ಮಹತ್ವ ಕುರಿತ  ಘೋಷಣೆ  ಮಿಠಾಯಿ ಅಂಗಡಿಯ ಮುಂದೆ ಇತ್ತೀಚಿಗೆ ಪುನೀತ್ ರಾಜಕುಮಾರ್ ಹಾಗೂ ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಸ್ವಾಮೀಜಿಗಳು ಫೋಟೊಗಳೂ ರಾರಾಜಿಸುತ್ತಿವೆ.
ಒಟ್ಟಾರೆಯಾಗಿ ಕೊಪ್ಪಳದ ಗವಿಮಠದ ಜಾತ್ರೆಯ ಮಿಠಾಯಿ ಅಂಗಡಿಗಳಿಗೆ ಬರುವ ಜನ ಇಲ್ಲಿಯ ಸ್ಲೋಗನ್​ಗಳನ್ನು ಓದಿ ಅರ್ಥೈಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

Published by:Precilla Olivia Dias
First published: