ಸೈದ್ಧಾಂತಿಕ ಭಿನ್ನಾಭಿಪ್ರಾಯ: ಹಿಟ್​ ಲಿಸ್ಟ್​ನಲ್ಲಿ ಟಾಪ್​ನಲ್ಲಿದೆ ಸಾಹಿತಿ ಗಿರೀಶ್​ ಕಾರ್ನಾಡರ ಹೆಸರು!

news18
Updated:July 26, 2018, 12:33 PM IST
ಸೈದ್ಧಾಂತಿಕ ಭಿನ್ನಾಭಿಪ್ರಾಯ: ಹಿಟ್​ ಲಿಸ್ಟ್​ನಲ್ಲಿ ಟಾಪ್​ನಲ್ಲಿದೆ ಸಾಹಿತಿ ಗಿರೀಶ್​ ಕಾರ್ನಾಡರ ಹೆಸರು!
news18
Updated: July 26, 2018, 12:33 PM IST
ನ್ಯೂಸ್​ 18 ಕನ್ನಡ 

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ (ಎಸ್​ಐಟಿ) ತಂಡಕ್ಕೆ  ಹಿಟ್​ ಲಿಸ್ಟ್​ ಇರುವ ಒಂದು ಡೈರಿ ಸಿಕ್ಕಿದೆ. ಈ ಡೈರಿಯಲ್ಲಿ ರಂಗಕರ್ಮಿ, ನಿರ್ದೇಶಕ ಹಾಗೂ ಸಾಹಿತಿ ಗಿರೀಶ್​ ಕಾರ್ನಾಡ್​ ಅವರ ಹೆಸರಿದೆ.

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಗೌರಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಂತರ ಗಿರೀಶ್​ ಕಾರ್ನಾಡ್​ ಸೇರಿದಂತೆ ಹಲವಾರು ಮಂದಿ ಪ್ರಗತಿಪರ ಚಿಂತಕರಿಗೆ ಪೊಲೀಸ್​ ಭದ್ರತೆ ನೀಡಲಾಗಿತ್ತು. ನಂತರ ಹತ್ಯೆ ಪ್ರಕರಣದ ಸಂಬಂಧ ಬಂಧಿಸಲಾಗಿರುವ ಆರೋಪಿ ಅಮೋಲ್​ ಕಾಳೆ ಅವರಿಂದ ಕಳೆದ ತಿಂಗಳು ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗೌರಿ ಅವರ ಹೆಸರು ಬೇರೆ ಸ್ಥಾನದಲ್ಲಿದ್ದು, ಅದಕ್ಕೂ ಮೊದಲು ಗಿರೀಶ್​ ಕಾರ್ನಾಡ್​ ಅವರ ಹೆಸರು ಬರೆಯಲಾಗಿದೆಯಂತೆ.

ಎಸ್​ಐಟಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಡೈರಿಯಲ್ಲಿ ಬರೆದಿರುವ ಹಿಟ್​ ಲಿಸ್ಟ್​ನಲ್ಲಿ ಗಿರೀಶ್​ ಕಾರ್ನಾಡರ ಹೆಸರು ಮೊದಲನೇ ಸ್ಥಾನದಲ್ಲಿದ್ದರೆ, ಗೌರಿ ಅವರ ಹೆಸರು ಎರಡನೇ ಸ್ಥಾನದಲ್ಲಿತ್ತು. ಇನ್ನೂ ಕೆಲವರ ಹೆಸರುಗಳು ಈ ಪಟ್ಟಿಯಲ್ಲಿದ್ದು, ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಈ ಲಿಸ್ಟ್​ ಅನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆಯಂತೆ.

ನಿಡುಮಾಮಿಡಿ ಮಠದ ವೀರಭದ್ರಚೆನ್ನಮಲ್ಲ ಸ್ವಾಮಿ, ಬಿ.ಟಿ. ಲಲಿತಾ ನಾಯಕ್​ ಹಾಗೂ ಸಿ.ಎಸ್​. ದ್ವಾರಕಾನಾಥ್​ ಅವರ ಹೆಸರುಗಳೂ ಈ ಡೈರಿಯಲ್ಲಿರುವ ಪಟ್ಟಿಯಲ್ಲಿದೆ.

ಹಿಟ್​ ಲಿಸ್ಟ್​ನಲ್ಲಿ ಮೊದಲ ಹೆಸರಿರುವ ಕುರಿತು ಗಿರೀಶ್​ ಕರ್ನಾಡ್​ ಪ್ರತಿಕ್ರಿಯಿಸಿದ ಅವರು, 'ನನಗೆ ವಿಷಯದಲ್ಲಿ ಯಾವುದೇ ರೀತಿಯ ಆಸಕ್ತಿ ಇಲ್ಲ, ಧನ್ಯವಾದ' ಎಂದಿದ್ದಾರೆ

ಕಳೆದ  9 ತಿಂಗಳಿನಿಂದ ಗೌರಿ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್​ ಡಿ. ಬಂಗೇರ (50) ಅವರನ್ನು ಬಂಧಿಸಿದ್ದಾರೆ. ಜುಲೈ 23ರಂದು ಮಡಿಕೇರಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.   ಮಂಗಳವಾರ ಬಂಗೇರನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ, ಆಗಸ್ಟ್​ 6ರವರೆಗೆ ಎಸ್​ಐಟಿ ವಶಕ್ಕೆ ನೀಡಲಾಗಿದೆ.
Loading...

ಈ ಹತ್ಯೆಯ ವಿಷಯದಲ್ಲಿ ಬಂಗೇರ ಅವರ ಪಾತ್ರದ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆರೋಪಿ ಕಾಳೆ ಹಾಗೂ ಅಮಿತ್​ ಜತೆ ಸಂಪರ್ಕದಲ್ಲಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ