ಗೌರಿ ಹಂತಕರ ಬಂಧನವಾಗದೇ ಇದ್ದಿದ್ದರೆ ಮತ್ತೊಬ್ಬ ಪ್ರಮುಖರ ಕೊಲೆಯಾಗುತ್ತಿತ್ತು..!


Updated:June 13, 2018, 6:51 PM IST
ಗೌರಿ ಹಂತಕರ ಬಂಧನವಾಗದೇ ಇದ್ದಿದ್ದರೆ ಮತ್ತೊಬ್ಬ ಪ್ರಮುಖರ ಕೊಲೆಯಾಗುತ್ತಿತ್ತು..!

Updated: June 13, 2018, 6:51 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜೂ.13): ಗೌರಿ ಹಂತಕರ ಗ್ಯಾಂಗ್​ ಅನ್ನ ಬಂಧಿಸದೇ ಹೋಗಿದ್ದರೆ ಇಷ್ಟೊತ್ತಿಗೆ ಪ್ರೋ ಭಗವಾನ್  ಕಥೆಯೂ ಮುಗಿದು ಹೋಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಎಸ್​ಐಟಿ ತನಿಖೆ ವೇಳೆ ಬಯಲಾಗಿದೆ. ಅಷ್ಟೇ ಅಲ್ಲ, ಗೌರಿ ಹತ್ಯೆ ಕೇಸ್​ನಲ್ಲಿ ಬಂಧಿತನಾಗಿರುವ ಪರುಶುರಾಮ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕುತೂಹಲಕಾರಿ ರಹಸ್ಯಗಳನ್ನ​ ಬಾಯಿಬಿಟ್ಟಿದ್ದಾನೆ. ಇದರ ಮಧ್ಯೆ, ಆರೋಪಿ ಹೊಟ್ಟೆ ಮಂಜ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾನೆ.

ಭಗವಾನ್ ಹತ್ಯೆಗೆ ನಡೆದಿತ್ತು ಪಕ್ಕಾ ಸ್ಕೆಚ್​​..!: ಗೌರಿ ಲಂಕೇಶ್ ಹಂತಕರ ಗ್ಯಾಂಗನ್ನ ಬಂಧಿಸದೇ ಇದ್ದಿದ್ದರೆ ಸಾಹಿತಿ ಪ್ರೋ ಭಗವಾನ್ ಅವ​​ರನ್ನು ನವೀನ್ ಅಂಡ್ ಟೀಮ್ ಇಷ್ಟೊತ್ತಿಗೆ ಹತ್ಯೆ ಮಾಡುತ್ತಿತ್ತುಎಂಬ ಸ್ಪೋಟಕ ಮಾಹಿತಿ ಎಸ್​ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಕೆ ಎಸ್ ಭಗವಾನ್ ಚಲನವಲನಗಳ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದ ಆರೋಪಿಗಳು ಭಗವಾನ್ ನಂತರ ಹಲವು ಪ್ರಗತಿಪರರ ಕೊಲೆಗೆ ಸ್ಕೆಚ್​​ ರೆಡಿ ಮಾಡಿದ್ದರು.

ಇನ್ನೂ, ಗೌರಿ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನ ಎಸ್ ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಆದರೆ, ವಿಚಾರಣೆ ವೇಳೆ ಆತ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಗೌರಿಯನ್ನ ಶೂಟ್ ಮಾಡಿದ ಬಳಿಕ ಅಮೋಲ್ ಕಾಳೆಗೆ ರಿವಾಲ್ವರ್ ಕೊಟ್ಟಿರುವುದಾಗಿ ಪರಶುರಾಮು ಈ ಮೊದಲು ಹೇಳಿಕೆ ನೀಡಿದ್ದ. ಆದರೆ, ಈಗ ಆ ರಿವಾಲ್ಹರ್ ಯಾರಿಗೆ ಕೊಟ್ಟೆ ಅಂತ ನೆನಪಾಗುತ್ತಿಲ್ಲ ಅಂತಿದ್ದಾನೆ. ಸದ್ಯ ಪರಶುರಾಮ್ ಜೊತೆ ಅಮೋಲ್ ಕಾಳೆ ವಿಚಾರಣೆಯೂ ನಡೆಯುತ್ತಿದೆ.

'ಟೈಗರ್' ಸಂಘಟನೆಯಲ್ಲಿದ್ದ  ಪರುಶುರಾಮ್..!: ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ಬಂಧಿಸಲಾಗಿರುವ ಸಿಂಧಗಿಯ ಪರಶುರಾಮ ವಾಗ್ಮೋರೆ, ಟೈಗರ್‌ ಸಂಘಟನೆಯ ಸದಸ್ಯ ಎಂಬ ಆತಂಕಕಾರಿ ಸಂಗತಿ ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ. ಹಿಂದುತ್ವ ಸಿದ್ಧಾಂತವನ್ನು ಪ್ರಶ್ನಿಸಿದವರ ಮೇಲೆ ದಾಳಿ ಮಾಡಲೆಂದೇ ಉತ್ತರ ಕರ್ನಾಟಕ ಭಾಗದಲ್ಲಿ ನಾಗರಾಜ ಜಂಬಗಿ ಎಂಬಾತನ ಮುಂದಾಳತ್ವದಲ್ಲಿ ಟೈಗರ್‌ ಸಂಘಟನೆ ಹುಟ್ಟಿಕೊಂಡಿತ್ತು.

ಒಟ್ಟಿನಲ್ಲಿ, ಈಗ ಪರಶುರಾಮ್ ಯಾರ್ಯಾರ ಜೊತೆ ಒಡನಾಟ ಇಟ್ಟುಕೊಂಡಿದ್ದಾನೋ ಅದನ್ನೆಲ್ಲ ಕೆದಕಿ ಎಸ್​ಐಟಿ ಮಾಹಿತಿ ಕಲೆ ಹಾಕುತ್ತಿದೆ.

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...