ಗೌರಿ ಲಂಕೇಶ್ ಹತ್ಯೆ ಪ್ರಕರಣ; ಬಂಧಿತ ಮತ್ತೋರ್ವ ಆರೋಪಿ 15 ದಿನಗಳ ಕಾಲ ಎಸ್​ಐಟಿ ವಶಕ್ಕೆ

ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್​ಗಳನ್ನು ನಾಶ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಎಸ್​​ಐಟಿ ತಂಡವು ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಿತ್ತು. ಈತ ಗೌರಿ ಲಂಕೇಶ್​​ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ.

HR Ramesh | news18-kannada
Updated:January 13, 2020, 3:01 PM IST
ಗೌರಿ ಲಂಕೇಶ್ ಹತ್ಯೆ ಪ್ರಕರಣ; ಬಂಧಿತ ಮತ್ತೋರ್ವ ಆರೋಪಿ 15 ದಿನಗಳ ಕಾಲ ಎಸ್​ಐಟಿ ವಶಕ್ಕೆ
ಗೌರಿ ಲಂಕೇಶ್​-ಆರೋಪಿ ರಿಷಿಕೇಶ್
  • Share this:
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಎಸ್ಐಟಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿ ರಿಷಿಕೇಶ್​ನನ್ನು 15 ದಿನಗಳ ಕಾಲ ಎಸ್​ಐಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಎರಡೂವರೆ ವರ್ಷದ ಬಳಿಕ ಮತ್ತೊಬ್ಬ ಆರೋಪಿ ರಿಷಿಕೇಶ್ ದೇವಾಡಿಕರ್​​ ಅಲಿಯಾಸ್​ ಮುರಳಿ ಎಂಬಾತನನ್ನು ಎಸ್​ಐಟಿ ಪೊಲೀಸರು ಮೂರು ದಿನಗಳ ಹಿಂದೆ ಜಾರ್ಖಂಡ್​ನಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್​ಗಳನ್ನು ನಾಶ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಎಸ್​​ಐಟಿ ತಂಡವು ಆರೋಪಿಯನ್ನು ಸೆರೆಹಿಡಿಯಲು ಬಲೆ ಬೀಸಿತ್ತು. ಈತ ಗೌರಿ ಲಂಕೇಶ್​​ ಹತ್ಯೆ ಪ್ರಕರಣದ 18ನೇ ಆರೋಪಿಯಾಗಿದ್ದಾನೆ.

ರಿಷಿಕೇಶ್​ನನ್ನು ಇಂದು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದ ಎಸ್​ಐಟಿ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ 30 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಎಸ್​ಐಟಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 15 ದಿನಗಳ ಕಾಲ ವಶಕ್ಕೆ ಒಪ್ಪಿಸಿತು.

ಇದನ್ನು ಓದಿ: ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣ; ಜಾರ್ಖಂಡ್​ನಲ್ಲಿ 18ನೇ ಆರೋಪಿಯನ್ನು ಬಂಧಿಸಿದ ಎಸ್​ಐಟಿ

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ