ಚಿಂತಕರ ಹತ್ಯೆಗೆ ಶಸ್ತ್ರಾಸ್ತ್ರ ತರಬೇತಿ; ಗೌರಿ ಹತ್ಯೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

news18
Updated:September 5, 2018, 11:20 AM IST
ಚಿಂತಕರ ಹತ್ಯೆಗೆ ಶಸ್ತ್ರಾಸ್ತ್ರ ತರಬೇತಿ; ಗೌರಿ ಹತ್ಯೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಸಾಂದರ್ಭಿಕ ಚಿತ್ರ
news18
Updated: September 5, 2018, 11:20 AM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 5): ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಸೇರಿದಂತೆ ಚಿಂತಕರನ್ನು ಕೊಲ್ಲಲು 45 ಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿತ್ತು ಎಂಬ ಮಾಹಿತಿ ಎಸ್​ಐಟಿ ತನಿಖೆ ವೇಳೆ ಬಹಿರಂಗಗೊಂಡಿದೆ. ನಡೆಸಲು ಬೆಳಗಾವಿ ಜಿಲ್ಲೆ ಖಾನಾಪುರದ ಬಳಿಯ ಕಾಡಂಚಿನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಸಜ್ಜಾಗಿದ್ದರು.

ಪ್ರತ್ಯೇಕ ಹತ್ಯೆಗಳಲ್ಲಿ ಪ್ರತ್ಯೇಕ ಶೂಟರ್​ಗಳನ್ನು ಬಳಸಿಕೊಳ್ಳಲು ಸಂಚು ರೂಪಿಸಲಾಗಿದ್ದು, ಸದ್ಯ 45 ಶೂಟರ್​ಗಳನ್ನು ವಿಚಾರಣೆ ನಡೆಸಲಾಗಿದೆ. 2010ರಿಂದಲೇ ಶೂಟರ್​ಗಳಿಗೆ ಪರಿಣತರಿಂದ ತರಬೇತಿ ನೀಡಲಾಗಿತ್ತು ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಮೋಲ್​ ಕಾಳೆ ಅವರ ಡೈರಿಯಲ್ಲಿ ಗೌರಿ ಲಂಕೇಶ್​ ಅಲ್ಲದೆ ಇನ್ನೂ ನಾಲ್ವರು ವಿಚಾರವಾದಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಬಗ್ಗೆ ಸಾಕ್ಷಿಗಳು ಸಿಕ್ಕಿದ್ದವು.

3 ತಿಂಗಳಿಗೊಮ್ಮೆ 4ರಿಂದ 5 ಜನರ ತಂಡ ತರಬೇತಿ ಪಡೆದಿದ್ದರು. ತರಬೇತಿ ಪಡೆದ ಶೂಟರ್​ಗಳನ್ನು ಕಾನೂನಿನಡಿ ಬಂಧಿಸಲು ಸಾಧ್ಯವಿಲ್ಲ. ಸದ್ಯ 45 ಶೂಟರ್​ಗಳನ್ನು ಎಸ್​ಐಟಿ ಪ್ರತ್ಯೇಕವಾಗಿ ವಶಕ್ಕೆ ಪಡೆದಿದೆ. ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡುತ್ತಿದೆ. ಸಂಪೂರ್ಣ ವಿಚಾರಣೆ ನಡೆಸಿ ಶೂಟರ್​ಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ಎಸ್ಐಟಿ ಶೂಟರ್​ಗಳ ಡಾಟಾವನ್ನು ಸಿಬಿಐ ಸೇರಿ ಉನ್ನತ ತನಿಖಾ ತಂಡಗಳಿಗೆ ರವಾನೆ ಮಾಡಿದೆ.

ಗೌರಿ ಲಂಕೇಶ್​ ಹತ್ಯೆ ವಿಚಾರಣೆಯನ್ನು ಎಸ್​ಐಟಿ ಬಹುತೇಕ ಮುಗಿಸಿದ್ದು, ಅಂತಿಮಘಟ್ಟ ತಲುಪಿದೆ. 13 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪನ್ಸಾರೆ, ದಾಭೋಲ್ಕರ್, ಎಂ.ಎಂ. ಕಲ್ಬುರ್ಗಿ ಹತ್ಯೆಗೆ ಹೋಲಿಸಿದರೆ ಗೌರಿ ಕೇಸ್ ಎಸ್​ಐಟಿಯ ಸಾಧನೆ ಎಂದೇ ಹೇಳಬಹುದು.

ಹಣಕಾಸು ಬೆಂಬಲ ನೀಡಿದವರ ಪತ್ತೆಗೆ ಪ್ರಯತ್ನ

 
Loading...

ಗೌರಿ ಲಂಕೇಶ್​ ಹತ್ಯೆಗೆ ಆರ್ಥಿಕ ಸಹಾಯ ಮಾಡಿದ್ದವರ ಪತ್ತೆಗೆ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಗೋವಾ ಮೂಲದ ಸಂಘಟನೆಯೊಂದು ಹಣ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಮನೋಹರ ಯವಡೆ, ಪ್ರವೀಣ್  ಸೇರಿ ಎಲ್ಲ ಆರೋಪಿಗಳ ಬ್ಯಾಂಕ್ ಅಕೌಂಟ್​ಗಳನ್ನು ಎಸ್​ಐಟಿ ಪರಿಶೀಲನೆ ನಡೆಸುತ್ತಿದೆ.

ಕೇಂದ್ರ ಗುಪ್ತಚರ ಇಲಾಖೆ ಮೂಲಕ ಬಂಧಿತ ಆರೋಪಿಗಳ ಮಾಹಿತಿ ಸಂಗ್ರಹಿಸಿರುವ ಎಸ್​ಐಟಿ ಬಂಧಿತ ಆರೋಪಿಗಳ ಜಾಲ ಕಂಡು ಬೆಚ್ಚಿಬಿದ್ದಿದೆ. ಹಿಂದೂ ರಾಷ್ಟ ನಿರ್ಮಾಣದ ಹೆಸರಲ್ಲಿ ಸಂಘಟನೆ ಮಾಡಿದ್ದ ಆರೋಪಿಗಳು ನೂರಾರು ಯುವಕರಿಗೆ ಬಂದೂಕು ಬಳಕೆಯ ತರಬೇತಿ ನೀಡಿದ್ದರು. ಮಡಿಕೇರಿ ಮೂಲದ ಆರೋಪಿ ರಾಜೇಶ್ ಬಂಗೇರ ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ಗೋವಿಂದ ಪನ್ಸಾರೆ ನರೇಂದ್ರ ದಾಬೋಲ್ಕರ್ ಹಂತಕರಿಗೂ ತರಬೇತಿ ನೀಡಿದ್ದ ಎಂಬ ಸತ್ಯ ಬಯಲಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ