ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ; ಬಂಧಿತರು ಅಮಾಯಕರು ಎಂದ ಪೋಷಕರು..!

news18
Updated:August 30, 2018, 5:52 PM IST
ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ; ಬಂಧಿತರು ಅಮಾಯಕರು ಎಂದ ಪೋಷಕರು..!
ಗೌರಿ ಲಂಕೇಶ್ ಪ್ರಾತಿನಿಧಿಕ ಚಿತ್ರ
news18
Updated: August 30, 2018, 5:52 PM IST
-ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ,(ಆ.30): ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ ನಡೆದು ಒಂದು ವರ್ಷ ಪೂರೈಸಲು ಕೆಲವೇ ದಿನ ಬಾಕಿ ಉಳಿದಿದೆ. ಈ ನಡುವೆ ಹತ್ಯೆ ಪ್ರಕರಣದ ಬೆನ್ನತ್ತಿದ್ದ ಎಸ್ ಐಟಿ ಪೊಲೀಸರಿಗೆ ಅನೇಕ ಮಹತ್ವ ಸುಳಿವುಗಳು ಸಿಕ್ಕಿವೆ. ಈಗಾಗಲೇ ಪ್ರಕರಣ ಸಂಬಂಧ ಅನೇಕರನ್ನು ಬಂಧಿಸಿದ್ದಾರೆ. ಗೌರಿ ಹತ್ಯೆ ಪ್ರಕರಣ ಸಂಬಂಧ ಬೆಳಗಾವಿಯ ಇಬ್ಬರು ಆರೋಪಿಗಳಿಗೆ ಎಸ್ ಐಟಿ ಬಲೆ ಬೀಸಿತ್ತು.  ಆದರೆ ಬಂಧಿತರನ್ನು ಅವರ ಕುಟುಂಬಸ್ಥರು ಅಮಾಯಕರು ಎನ್ನುತ್ತಿದ್ದಾರೆ.

ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ಈಗಾಗಲೇ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಪರುಶುರಾಮ್ ವಾಗ್ಮೋರೆಗೆ ಆಶ್ರಯ ನೀಡಿದ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿಗೂ ನಂಟಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಪೊಲೀಸರು ಕೆಲ ದಿನಗಳ ಹಿಂದೆ ಭರತ್ ಕುರ್ಣೆ ಎಂಬಾತನನ್ನು ಬಂಧಿಸಿದ್ದರು. ಖಾನಾಪುರ ತಾಲೂಕಿನ ಚಿಕಲೆ ಗ್ರಾಮದ ಬಳಿ ಭರತ್ ಕುರ್ಣೆಗೆ ಸೇರಿದ ರೆಸಾರ್ಟ್ ಇದೆ. ಈ ರೆಸಾರ್ಟ್ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶದಲ್ಲಿ ಆರೋಪಿ ಪರಶುರಾಮ್ ವಾಗ್ಮೋರೆಗೆ ಬಂದೂಕು ತರಬೇತಿ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭರತ್ ಕುರ್ಣೆ ಎಂಬಾತನ್ನು ಎಸ್ ಐಟಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಇಂದು ಬಂಧಿತ ಭರತ್ ಕುರ್ಣೆ ತಾಯಿ, ಪತ್ನಿ ಸುದ್ದಿಗೋಷ್ಠಿ ನಡೆಸಿದರು.  ಭರತ್​ಗೂ ಗೌರಿ ಹತ್ಯೆಗೆ ಯಾವುದೇ ಸಂಬಂಧವಿಲ್ಲ. ಆತ ಮುಗ್ಧನಾಗಿದ್ದು, ವಿನಾಕಾರಣ ಬಂಧಿಸಲಾಗಿದೆ ಎಂದು ಆರೋಪಿಸಿದರು.

ಇನ್ನೂ ಭರತ ಕುರ್ಣೆ ಬಂಧನದ ನಂತರ ಎಸ್ ಐಟಿ ಪೊಲೀಸರು ಮತ್ತೆ ನಿನ್ನೆ ಬೆಳಗಾವಿಗೆ ಭೇಟಿ ನೀಡಿದ್ದರು. ಭರತ್ ಕುರ್ಣೆ ಸ್ನೇಹಿತ ಸಾಗರ ಲಾಖೆ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಭರತ್ ನಿರ್ಮಿಸಿದ ರೇಸಾರ್ಟ್ ನಲ್ಲಿ ಸಾಗರ್ ಗಾರ್ಡನಿಂಗ್ ಕೆಲಸ ಮಾಡಿದ್ದನು. ಇನ್ನೂ ಭರತ ಜತೆಗೆ ಫೋನ್ ನಲ್ಲಿ ನಿರಂತರ ಸಂಪರ್ಕ ಹಿನ್ನೆಲೆಯಲ್ಲಿ ಎಸ್ ಐಟಿ ಸಾಗರ್ ನನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ. ಇನ್ನೂ ಭರತ ಕುರ್ಣೆ ಪರ ವಕೀಲ ಚೇತನ ಮನ್ನೇರಿಕರ್ ಮಾತನಾಡಿ, ಎಸ್ ಟಿ ಐ ಅಧಿಕಾರಿಗಳು ಭರತ್ ಕುರ್ಣೆ ಮಾತುಕತೆ ನಡೆಸಲು ಅವಕಾಶ ನೀಡುತ್ತಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘಟನೆಯಾಗಿದೆ. ಕಕ್ಷಿಧಾರ ಭರತ್ ಎಸ್ ಐ ಟಿ ಪೊಲೀಸರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ನಡೆದ ಗೌರಿ ಹತ್ಯೆ ಪ್ರಕರಣದಲ್ಲಿ ಬೆಳಗಾವಿಗೂ ನಂಟಿರುವುದು ಸಾಬೀತಾಗಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಬಂದೂಕು ತರಬೇತಿ ನೀಡಿರುವ ಬಗ್ಗೆ ಎಸ್ ಐಟಿ ಮಹತ್ವದ ದಾಖಲೆ ಸಂಗ್ರಹಿಸಿದೆ. ಇನ್ನೂ ಚಾರ್ಟ್ ಶೀಟ್ ನಂತರವೇ ಭರತ್ ಕುರ್ಣೆ, ಸಾಗರ ಲಾಖೆ ಪಾತ್ರ ಏನೆಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...