ಫೆಬ್ರವರಿ 16, 2015 ರಂದು ಕೊಲ್ಲಾಪುರದಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಹತ್ಯೆಗೆ ಸಂಬಂಧಿಸಿದ ಸಿಸಿಟಿವಿ (CCTV) ದೃಶ್ಯಾವಳಿಗಳಿಗಾಗಿ ಮಹಾರಾಷ್ಟ್ರ (Maharashtra) ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿಚಾರಣೆಯನ್ನು ನಡೆಸುವ ನ್ಯಾಯಾಲಯವನ್ನು(Court) ಸಂಪರ್ಕಿಸಿದ್ದು ದೃಶ್ಯಾವಳಿಗಾಗಿ ಮೇಲ್ಮನವಿ ಸಲ್ಲಿಸಿದೆ. ಎಡಪಂಥೀಯ ಮತ್ತು ಬಲವಾದ ಹಿಂದೂ (Hindhu) ವಿರೋಧಿ ಹೇಳಿಕೆಗಳಿಗೆ ಹೆಸರಾದ 55 ವರ್ಷದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯ ಮುಂದೆ ಸೆಪ್ಟಂಬರ್ 5, 2017 ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.
ಗೌರಿ ಲಂಕೇಶ್ ಹತ್ಯೆಯ ಸಾಮ್ಯತೆಗಳ ಹೊರತಾಗಿಯೂ ಎಸ್‌ಐಟಿ ತನಿಖೆಯು ಫಲಿತಾಂಶವನ್ನು ನೀಡಲು ವಿಫಲವಾದ ನಂತರ ಪನ್ಸಾರೆ ಕುಟುಂಬದ ಅರ್ಜಿಯ ಮೇರೆಗೆ ಬಾಂಬೆ ಹೈಕೋರ್ಟ್ ಈ ವರ್ಷದ ಆಗಸ್ಟ್‌ನಲ್ಲಿ ಕೊಲೆ ತನಿಖೆಯನ್ನು ಎಟಿಎಸ್‌ಗೆ ಹಸ್ತಾಂತರಿಸಿತ್ತು.
ಗೌರಿ ಲಂಕೇಶ್ ಪ್ರಕರಣದ ಆರೋಪಿಗಳ ಹೇಳಿಕೆ
ಕರ್ನಾಟಕದಲ್ಲಿ ಗೌರಿ ಲಂಕೇಶ್ ಮತ್ತು ಎಂಎಂ ಕಲಬುರ್ಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡವು ನಡೆಸಿದ ತನಿಖೆಯ ಪ್ರಕಾರ, ಉಗ್ರ ಬಲಪಂಥೀಯ ಹಿಂದುತ್ವ ಗುಂಪು, ಸನಾತನ ಸಂಸ್ಥೆಯಿಂದ ಪ್ರೇರಿತವಾದ ಸಂಘಟನೆಗಳು ಕರ್ನಾಟಕದಲ್ಲಿ ಹತ್ಯೆಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Moral Policing: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪ್ರಯಾಣ; ಬಸ್ ತಡೆದು ನೈತಿಕ ಪೊಲೀಸ್ಗಿರಿ
ಪನ್ಸಾರೆ ಹತ್ಯೆಯ ಹೊಸ ತನಿಖೆಯ ಭಾಗವಾಗಿ, ಮಹಾರಾಷ್ಟ್ರ ಎಟಿಎಸ್, ಗೌರಿ ಲಂಕೇಶ್ ಪ್ರಕರಣದಲ್ಲಿ ಆರೋಪಿಗಳಾಗಿರುವ 17 ಜನರಲ್ಲಿ ಮೂವರಾದ ಸುಜಿತ್ ಕುಮಾರ್, ರಾಜೇಶ್ ಬಂಗೇರಾ ಮತ್ತು ರಿಷಿಕೇಶ್ ದೇವಡೇಕರ್ ಹೇಳಿಕೆಯನ್ನು ದಾಖಲಿಸಲು ಪ್ರಯತ್ನಿಸಿದ್ದು ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಆಕೆಯ ಕುಟುಂಬ ಸ್ನೇಹಿತರು, ಕುಟುಂಬಸ್ಥರು, ಸಹೋದ್ಯೋಗಿಗಳನ್ನು ತನಿಖಾ ತಂಡ ವಿಚಾರಣೆ ನಡೆಸಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಲು ಸೂಚನೆಗಳು
ಮಹಾರಾಷ್ಟ್ರ ಎಟಿಎಸ್ ವಿನಂತಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿದೆ. ಗೌರಿ ಲಂಕೇಶ್ ಅವರ ಮನೆಯ ಹೊರಗೆ ಹೆಲ್ಮೆಟ್ ಧರಿಸಿದ್ದ ಶಂಕಿತ ವ್ಯಕ್ತಿಯೊಬ್ಬ ಆಕೆಯ ಹತ್ಯೆ ಮಾಡಿರುವ ದೃಶ್ಯ ಆಕೆಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಪಾದಿತ ಶೂಟರ್‌ನ ಗುರುತನ್ನು ಖಚಿತಪಡಿಸಲು ಕರ್ನಾಟಕ ಎಸ್‌ಐಟಿ ವಿಶೇಷ ತನಿಖಾ ತಂತ್ರಗಳನ್ನು ಬಳಸಿದೆ.
ಒಂದೇ ರೀತಿಯ ಆಯುಧವನ್ನು ಕೊಲೆಗಳನ್ನು ನಡೆಸಲು ಬಳಸಲಾಗಿದೆ
ಗೌರಿ ಲಂಕೇಶ್ ಹತ್ಯೆಯ ತನಿಖೆಯ ಪ್ರಾರಂಭದಲ್ಲಿ ಗೌರಿಯನ್ನು ಹತ್ಯೆಗೈಯ್ಯಲು ಬಳಸಿದ್ದ .65 ಎಂಎಂ ಕಂಟ್ರಿಮೇಡ್ ಪಿಸ್ತೂಲ್ ಅನ್ನೇ ಆಗಸ್ಟ್ 20, 2015 ರಂದು ಕನ್ನಡ ವಿದ್ವಾಂಸ ಎಂಎಂ ಕಲಬುರ್ಗಿ ಅವರನ್ನು ಧಾರವಾಡದ ಅವರ ಮನೆಯಲ್ಲಿ ಹತ್ಯೆಮಾಡಲು ಬಳಸಲಾಗಿದೆ ಎಂದು ಎಸ್‌ಐಟಿ ಪತ್ತೆಮಾಡಿತ್ತು.
ಪನ್ಸಾರೆಯನ್ನು ಶೂಟ್ ಮಾಡಲು ಬಳಸಿದ ಬಂದೂಕಿಗೆ ಹೊಂದಿಕೆಯಾಗಿರುವುದು
ಅದೇ ಗನ್ ಅನ್ನು ಪನ್ಸಾರೆಯನ್ನು ಗುಂಡಿಕ್ಕಿ ಕೊಲ್ಲಲು ಬಳಸಿರುವುದು ಕಂಡುಬಂದಿದೆ, ಆದರೆ ಪನ್ಸಾರೆ ಹತ್ಯೆಗೆ ಬಳಸಿದ ಎರಡನೇ ಗನ್ ಆಗಸ್ಟ್ 20, 2013 ರಂದು ಪುಣೆಯಲ್ಲಿ ದಾಭೋಲ್ಕರ್ ಅವರನ್ನು ಶೂಟ್ ಮಾಡಲು ಬಳಸಿದ ಬಂದೂಕಿಗೆ ಹೊಂದಿಕೆಯಾಗಿರುವುದು ಕಂಡುಬಂದಿದೆ.
9,000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಲಂಕೇಶ್ ಹತ್ಯೆಗೆ ಬಳಸಿದ ಪಿಸ್ತೂಲ್ ಕರ್ನಾಟಕದ ಧಾರವಾಡದಲ್ಲಿ ಪ್ರೊ.ಎಂ.ಎಂ.ಕಲಬುರ್ಗಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಗೋವಿಂದ್ ಪನ್ಸಾರೆ ಹತ್ಯೆಗೆ ಬಳಸಿದ ಪಿಸ್ತೂಲ್ ಎಂದು ಫೊರೆನ್ಸಿಕ್ ಬ್ಯಾಲಿಸ್ಟಿಕ್ ವಿಶ್ಲೇಷಣೆಯು ನವೆಂಬರ್ 2018 ರಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 9,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದಾಗ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ