ಗೌರಿ ಲಂಕೇಶ್​ ಹತ್ಯೆಗೆ ಒಂದು ವರ್ಷ; ಸನಾತನ ಸಂಸ್ಥೆ, ಹಿಂದು ಜನಜಾಗೃತಿ ಸಮಿತಿಗೆ ನಿಷೇಧ ಹೇರಲು ಆಗ್ರಹ

news18
Updated:September 5, 2018, 12:45 PM IST
ಗೌರಿ ಲಂಕೇಶ್​ ಹತ್ಯೆಗೆ ಒಂದು ವರ್ಷ; ಸನಾತನ ಸಂಸ್ಥೆ, ಹಿಂದು ಜನಜಾಗೃತಿ ಸಮಿತಿಗೆ ನಿಷೇಧ ಹೇರಲು ಆಗ್ರಹ
news18
Updated: September 5, 2018, 12:45 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 5: ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣ ಹಿನ್ನೆಲೆಯಲ್ಲಿ ಇಂದು ಗೌರಿ ಬಳಗ, ಗೌರಿ ಮೆಮೋರಿಯಲ್ ಟ್ರಸ್ಟ್​ನಿಂದ ‘ಗೌರಿ ಅಮರ್ ರಹೇ’ ಶೀರ್ಷಿಕೆಯಡಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಆಚರಿಸಲಾಗುತ್ತಿದೆ.

ನಟ ಪ್ರಕಾಶ್ ರೈ, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸ್ವಾಮಿ ಅಗ್ನಿವೇಶ್, ಕವಿತಾ ಲಂಕೇಶ್, ಟ್ರಸ್ಟ್​ ಸದಸ್ಯರು ಗೌರಿ ಲಂಕೇಶ್ ಗೌರಿ ಸಮಾಧಿಗೆ ಹೂವಿಟ್ಟು ‘ಪ್ರೀತಿಯ ಗಂಗೆ ಹರಿಯುತಿರಲಿ’ ಹಾಡಿನ ಮೂಲಕ ಗೀತ ನಮನ ಸಲ್ಲಿಸಿದರು.

 

ಬಳಿಕ, ಮೌರ್ಯ ಸರ್ಕಲ್​ನಿಂದ ರಾಜಭವನದವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಚಿಂತಕರ ಹಂತಕರ ಜೊತೆ ಹುನ್ನಾರ ನಡೆಸಿದವರನ್ನೂ ಬಂಧಿಸಬೇಕು, ಕೊಲೆಗಡುಕ ಸಂಘಟನೆಗಳನ್ನು ನಿರ್ಬಂಧಿಸಲು ಆಗ್ರಹ ಪಡಿಸಲಾಯಿತು. ಕೊಲೆಗಡುಕ ಸನಾತನ‌ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿಯನ್ನು ಭಯೋತ್ಪಾದಕ ಸಂಸ್ಥೆ ಎಂದು  ಘೋಷಿಸಬೇಕು, ಸನಾತನ ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ರಾಜ್ಯಪಾಲರಿಗೆ ಗೌರಿ ಟ್ರಸ್ಟ್​ನಿಂದ ಮನವಿ ಸಲ್ಲಿಸಲಾಯಿತು.

ಹಿಂದು ಜನಜಾಗೃತಿ ಸಮಿತಿ ಪ್ರತಿಭಟನೆ:
Loading...

ಹಿಂದು ಜನಜಾಗೃತಿ ಸಮಿತಿ  ಮತ್ತು ಸನಾತನ ಸಂಸ್ಥೆಗಳನ್ನು ನಿಷೇಧಿಸಲು ಅವಕಾಶ ಕೊಡುವುದಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಕಾರ್ಪೋರೇಷನ್ ವೃತ್ತದ ಬನ್ನಪ್ಪ ಪಾರ್ಕ್​ನಿಂದ ಪ್ರೀಡಂ ಪಾರ್ಕ್​ವರೆಗೆ ಹಿಂದುತ್ವವಾದಿಗಳ ಮೇಲಿನ ಅನ್ಯಾಯದ ಕ್ರಮ ಹಾಗೂ ಸನಾತನ ಸಂಸ್ಥೆಯ ಸಂಭಾವ್ಯ ನಿಷೇಧದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ಸನಾತನ ಸಂಸ್ಥೆಯ ನಿಷೇಧಕ್ಕೆ ಅಗ್ರಹಿಸಿ ಹೋರಾಡುತ್ತಿದ್ದಾರೆ. ಸನಾತನ ಸಂಸ್ಥೆ ಅಧ್ಯಾತ್ಮ ಹಾಗೂ ಧರ್ಮ ರಕ್ಷಣೆಗಾಗಿ ಇರುವ ಸಂಸ್ಥೆ. ಯಾವುದೇ ಕಾರಣಕ್ಕೂ ಅದನ್ನು ನಿಷೇಧ ಮಾಡಲು ಅವಕಾಶ ಕೊಡುವುದಿಲ್ಲ. ಗೌರಿ ಹಂತಕರು ಎಂದು ಹೇಳಿ ಅಮಾಯಕರ ಬಂಧನ ‌ಮಾಡಲಾಗಿದೆ. ಚಾರ್ಜ್ ಶೀಟ್ ಹಾಕಲು ಧೈರ್ಯವಿಲ್ಲದೆ ಕೋಕಾ ಕಾಯ್ದೆ ಹಾಕಿದ್ದಾರೆ. ಮೈಸೂರಿನಲ್ಲಿ 8 ಹಿಂದು  ಕಾರ್ಯಕರ್ತರ ಹತ್ಯೆ ಮಾಡಿದ್ದ ಹಬೀಬ್ ಪಾಷಾ ಮೇಲೆ ಯಾಕೆ ಇವರು ಕೋಕಾ ಹಾಕಿಲ್ಲ? ಈ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಎನ್ಐಐ ತನಿಖೆ ಮಾಡಿ ಪಿಎಫ್ಐ ಕೈವಾಡ ಇದೆ ಎಂದಿತ್ತು. ಆದರೆ, ಆ ಸಂಸ್ಥೆಯನ್ನು ಯಾಕೆ ಬ್ಯಾನ್ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...