Mandya: ಸಕ್ಕರೆನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಗಿಫ್ಟ್! 4 ವರ್ಷದ ನಂತರ ಮೈಶುಗರ್ ಆರಂಭ

ಸಕ್ಕರೆ ನಾಡು ಮಂಡ್ಯ ಜನರಿಗೆ ಇದು ಗುಡ್​ನ್ಯೂಸ್​​. ಯಾಕಂದ್ರೆ ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಸಕ್ಕರೆ ಕಾರ್ಖಾನೆ ಎನ್ನುವ ಹೆಸರು ತಂದು ಕೊಟ್ಟ ಮಂಡ್ಯದ ಮೈಶುಗರ್ ನಾಲ್ಕು ವರ್ಷದ ನಂತರ ಪುನಾರಂಭವಾಗ್ತಿದೆ. ಇನ್ನು 10 ದಿನದಲ್ಲಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದಲೇ ಮೈಶುಗರ್​ಗೆ ಚಾಲನೆ ದೊರೆಯಲಿದೆ.

ಮಂಡ್ಯದಲ್ಲಿ ಮೈಶುಗರ್ ಮತ್ತೆ ಆರಂಭ

ಮಂಡ್ಯದಲ್ಲಿ ಮೈಶುಗರ್ ಮತ್ತೆ ಆರಂಭ

  • Share this:
ಸಕ್ಕರೆ ನಾಡು ಮಂಡ್ಯ (Mandya) ಜನರಿಗೆ ಇದು ಗುಡ್​ನ್ಯೂಸ್​​. ಯಾಕಂದ್ರೆ ಏಷ್ಯಾದಲ್ಲೇ ಎರಡನೇ ಅತೀದೊಡ್ಡ ಸಕ್ಕರೆ ಕಾರ್ಖಾನೆ (Sugar Factory) ಎನ್ನುವ ಹೆಸರು ತಂದು ಕೊಟ್ಟ ಮಂಡ್ಯದ ಮೈಶುಗರ್ (Mysugar) ನಾಲ್ಕು ವರ್ಷದ ನಂತರ ಪುನಾರಂಭವಾಗ್ತಿದೆ (Reopen) . ಇನ್ನು 10 ದಿನದಲ್ಲಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಂದಲೇ ಮೈಶುಗರ್​ಗೆ ಚಾಲನೆ ದೊರೆಯಲಿದೆ. ಬೊಮ್ಮಾಯಿಯವರೇ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಿದ್ದಾರೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಘೋಷಿಸಿದ್ದಾರೆ. ಇದರೊಂದಿಗೆ ಮಂಡ್ಯ ರೈತರಿಗೆ ಸರ್ಕಾರ ಗೌರಿ- ಗಣೇಶ (Ganesha Festival Gift) ಹಬ್ಬಕ್ಕೆ ಬೆಲ್ಲದಂತಹ ಸಿಹಿ ಸುದ್ದಿಯೊಂದನ್ನು ನೀಡಿದಂತಾಗಿದೆ. ಇದರ ವಿವರ ಇಲ್ಲಿದೆ

ಮಂಡ್ಯದ ಪ್ರತಿಷ್ಠಿತ ಮೈಶುಗರ್ ಕಾರ್ಖಾನೆ ಆರ್ಥಿಕ ಸಮಸ್ಯೆಯಿಂದ ಮುಗ್ಗರಿಸಿತ್ತು. ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಗೆ ಬಂದಾಗಿನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಖಾನೆ ರೋಗಗ್ರಸ್ಥ ಹಣೆಪಟ್ಟಿಯೊಂದಿಗೆ ಇನ್ನೇನು ಮುಗಿದೇ ಹೋಯಿತು ಎನ್ನುವ ಅಂಚಿಗೆ ತಲುಪಿತ್ತು. ಕಾರ್ಖಾನೆ ಬಂದ್ ಮಾಡಿದ ಸರ್ಕಾರ ಖಾಸಗಿಯವರಿಗೆ ಗುತ್ತಿಗೆ ವಹಿಸಲು ಮುಂದಾಗಿತ್ತು.

ಮಂಡ್ಯ ಜನರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಮೈಶುಗರ್​ನ್ನು ಖಾಸಗಿಯವರಿಗೆ ಕೊಡಬೇಕು ಎನ್ನುವಷ್ಟರಲ್ಲಿ ಮಂಡ್ಯದಲ್ಲಿ ರೈತ ಚಳವಳಿ ಭುಗಿಲೆದ್ದಿತು. ಹೋರಾಟಕ್ಕೆ ಮಣಿದ ಸರ್ಕಾರ ಅಗತ್ಯ ಸಂಪನ್ಮೂಲ ಒದಗಿಸಿ, ಕಾರ್ಖಾನೆಯನ್ನು ಎರಡು ವರ್ಷದ ಮಟ್ಟಿಗೆ ಪ್ರಾಯೋಗಿಕವಾಗಿ ತನ್ನದೇ ಸ್ವಾಮ್ಯದಲ್ಲಿ ಮುನ್ನಡೆಸುವ ನಿರ್ಧಾರ ಮಾಡಿದೆ. ಕೊಟ್ಟ ಮಾತಿನಂತೆ ಈಗಾಗಲೇ ಬಾಯ್ಲರ್ ಗೆ ಅಗ್ನಿಸ್ಪರ್ಶ ಮಾಡಿ, ಕಬ್ಬು ಅರೆಯುವಿಕೆಯನ್ನು ಖಾತ್ರಿಪಡಿಸಿದೆ.

Gauri Ganesha festival gift to Mandya people After 4 years mysugar started
ಮಂಡ್ಯದ ಮೈಶುಗರ್ ಫ್ಯಾಕ್ಟರಿ


ಹಿಂದೆ ಪ್ರಕಟಿಸಿದ್ದಂತೆಯೇ ಎಲ್ಲವೂ ಆಗಿದ್ದರೆ ಇದೇ ಭಾನುವಾರ(ಆ.28)ರಂದು ಕಬ್ಬು ನುರಿಯುವಿಕೆ ಪುನಾರಂಭವಾಗಬೇಕಿತ್ತು. ದುರಸ್ತಿ ಕಾಮಗಾರಿ ಅಂತಿಮಗೊಳ್ಳದ ಹಾಗೂ ಮುಖ್ಯಮಂತ್ರಿಗಳ ಬಿಡುವಿರದ ಕಾರ್ಯಕ್ರಮದ ಪರಿಣಾಮ ಹತ್ತು ದಿನ ವಿಳಂಬವಾಗುತ್ತಿದೆ.

ಇದನ್ನೂ ಓದಿ: ನಿಷೇಧಾಜ್ಞೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಕೋಟ್ಯಂತರ ನಷ್ಟ; 4 ದಿನದಲ್ಲಿ ಸುಮಾರು 4 ಕೋಟಿ

ಸೆಪ್ಟೆಂಬರ್ 10ರೊಳಗೆ ಮೈಶುಗರ್ ಆರಂಭ
ಹೀಗಾಗಿ ಇಂದು ಕಾರ್ಖಾನೆ ದುರಸ್ತಿ ಕಾರ್ಯ ಮತ್ತು ಕಬ್ಬು ಅರೆಯುವಿಕೆ ಸಿದ್ಧತೆಗಳನ್ನು ಪರಿಶೀಲಿಸಿದ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನಿರ್ದಿಷ್ಟ ದಿನಾಂಕ ಪ್ರಕಟಿಸಿಲ್ಲವಾದರೂ ಕಾರ್ಖಾನೆ ಕಬ್ಬು ಅರೆಯುವಿಕೆಗೆ ಸಿಎಂ ಬರುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಮುಗ್ಗಟ್ಟಿನಿಂದ ಬಂದ್​ ಆಗಿದ್ದ ಮೈಶುಗರ್
ಕಳೆದ ಎರಡು ದಶಕದ ಹಿಂದೆವರೆಗೂ ಮೈಶುಗರ್ ಸಾಕಷ್ಟು ಲಾಭದಾಯಕವಾಗಿಯೇ ಮುನ್ನಡೆಯುತ್ತಾ ಬಂದಿತ್ತು. ಸಕ್ಕರೆ ಉದ್ಯಮದಲ್ಲಿ ಪೈಪೋಟಿ, ಸಾರಾಯಿ ನಿಷೇಧದಿಂದ ಸ್ಪಿರಿಟ್ ಉತ್ಪಾದನಾ ಘಟಕ ಸ್ಥಗಿತ, ಸೇನೆಗೆ ಮದ್ಯ ಸರಬರಾಜು ಗುತ್ತಿಗೆ ರದ್ದು, ಹೇಳಿ ಕೇಳಿ ಸಕ್ಕರೆ ಕಾರ್ಖಾನೆ ಆಗಿರುವುದರಿಂದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ದುರಾಡಳಿತದಿಂದ ಮೈಷುಗರ್ ಆರ್ಥಿಕವಾಗಿ ಮುಗ್ಗರಿಸಿತು.

500 ಕೋಟಿಯಷ್ಟು ಹಣ ಬಂದರೂ ಸುಧಾರಿಸಲಿಲ್ಲ
ಸಾಲದ ಮೇಲೆ ಬಡ್ಡಿ ಬೆಳೆಯುತ್ತಾ ಹೋದಂತೆಲ್ಲಾ ಅದರಿಂದ ಹೊರಬರಲಾಗದೆ ಪರಿಸ್ಥಿತಿ ಬಿಗಡಾಯಿಸಿತು. ಕಳೆದ 15 ವರ್ಷದಲ್ಲಿ ಸರ್ಕಾರದಿಂದ ನೆರವು, ಮೃದು ಸಾಲ ಸೇರಿದಂತೆ 500 ಕೋಟಿ ರೂಪಾಯಿಯಷ್ಟು ಹಣ ಹರಿದು ಬಂದರೂ ಪರಿಸ್ಥಿತಿ ಸುಧಾರಿಸಲೇ ಇಲ್ಲ.

100 ಕೋಟಿ ಬಂಡವಾಳ ಹಾಕಿ ತಯಾರಿ
ಇದೀಗ ಕಾರ್ಖಾನೆಯನ್ನು ಕಬ್ಬು ಅರೆಯುವಿಕೆಗೆ ಸಜ್ಜುಗೊಳಿಸಲಾಗಿದೆ. 100 ಕೋಟಿ ರೂಪಾಯಿಯಷ್ಟು ಬಂಡವಾಳ ಹೂಡಿ, 21 ವರ್ಷದ ಹಿಂದೆ ಸ್ಥಾಪಿಸಿರುವ ಸಹ ವಿದ್ಯುತ್ ಘಟಕವನ್ನು ಪುನಾರಂಭಿಸಲಾಗ್ತಿದೆ. ಎಥೆನಾಲ್ ಉತ್ಪಾದನೆ ಘಟಕ ಪ್ರಾರಂಭವೂ ಸೇರಿದಂತೆ ಉಪ ಉತ್ಪನ್ನಗಳ ಕಡೆಗೆ ಸರ್ಕಾರ ಗಮನ ನೀಡಿದೆ.

ಇದನ್ನೂ ಓದಿ: ಬ್ರಿಟಿಷರು ಕುದುರೆಗಳಿಗೆ ನೀರು ಕುಡಿಸುತ್ತಿದ್ದ ಜಾಗ ಇದು! ಐತಿಹಾಸಿಕ ಕೆರೆಗೆ ಈಗ ಧಕ್ಕೆ

4 ವರ್ಷಗಳ ನಂತರ ಮೈಶುಗರ್ ಶುರು
4 ವರ್ಷಗಳ ಬಳಿಕ ಮೈಶುಗರ್ ಪ್ರಾರಂಭವಾಗ್ತಿರೋದು ಮಂಡ್ಯ ರೈತನಿಗೆ ಸಂತಸ ತಂದಿದ್ದು, ಸರ್ಕಾರ ಜಿಲ್ಲೆಯ ಜನರಿಗೆ ಗೌರಿ ಗಣೇಶ ಹಬ್ಬದ ಉಡುಗೊರೆ ನೀಡಿದೆ. ಸದ್ಯ ಪ್ರಾಯೋಗಿಕವಾಗಿ 2 ವರ್ಷಗಳ ಮಟ್ಟಿಗೆ ಪ್ರಾರಂಭವಾಗಿರೋ ಕಾರ್ಖಾನೆಯನ್ನ ಸರಿಯಾದ ರೀತಿ ಅಧಿಕಾರಿಗಳು ನಿರ್ವಹಣೆ ಮಾಡೋದ್ರ ಮೂಲಕ ಮುಚ್ಚದಂತೆ ಕಾಪಾಡಿಕೊಳ್ಳಬೇಕಿದೆ.
Published by:Thara Kemmara
First published: