Chikkamagaluru: ಕಸದ ಸಮಸ್ಯೆ ನಿಯಂತ್ರಿಸಲು ಚಿಕ್ಕಮಗಳೂರು ನಗರಸಭೆ ಮಾಸ್ಟರ್ ಪ್ಲಾನ್!

ನಗರದಲ್ಲಿ 25 ಆಟೋ (Garbage Auto) ದಿನಕ್ಕೆ 12 ಗಂಟೆಗಳ ಕಾಲ ಓಡಾಡಿ ಮನೆಬಾಗಿಲಲ್ಲಿ ಕಸ ಸಂಗ್ರಹಿಸುತ್ತೆ. ಆದರೆ, ಬೆಳಗ್ಗೆಯೇ ಎದ್ದು ಕಸದ ಗಾಡಿಗೆ ಕಸ ಹಾಕದ ಸೋಂಬೇರಿಗಳು ಬೇಕಾದಾಗ ಎಲ್ಲೆಂದರಲ್ಲಿ ಕಸ ಸುರಿದು ಹೋಗುತ್ತಿದ್ದಾರೆ.

ಕಸ ಹಾಕುತ್ತಿರುವ ಸ್ಥಳದಲ್ಲಿಯ ಬೋರ್ಡ್

ಕಸ ಹಾಕುತ್ತಿರುವ ಸ್ಥಳದಲ್ಲಿಯ ಬೋರ್ಡ್

  • Share this:
 ಚಿಕ್ಕಮಗಳೂರು : ಇಲ್ಲಿ ಕಸ (Garbage) ಹಾಕಿದ್ರೆ ಶನಿ ದೇವರು ನಿಮ್ಮ ಹೆಗಲೇರುತ್ತಾನೆ. ಇಲ್ಲಿ ಕಸ ಹಾಕಿದ್ರೆ ನೀವು ಕೈ-ಕಾಲು ಕಳೆದುಕೊಂಡು ಭಿಕ್ಷುಕರಾಗುತ್ತೀರಾ. ಇಲ್ಲಿ ಕಸ ಹಾಕಿದರೆ ದೆವ್ವ ಕನಸಲ್ಲಿ ಬಂದು ನಿಮ್ಮನ್ನ ಕಾಡುತ್ತೆ. ಇಲ್ಲಿ ಕಸ ಹಾಕಿದರೆ ನಿಮ್ಮ ಕೆಟ್ಟ ಘಳಿಗೆ ಶುರುವಾಗುತ್ತೆ ಅಂತಾ ಚಿಕ್ಕಮಗಳೂರು ನಗರಸಭೆ (Chickmagalur City Municipal Council)  ಅಧಿಕಾರಿಗಳು ನಗರ ನಿವಾಸಿಗಳಿಗೆ ಭಯದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ಚಿಕ್ಕಮಗಳೂರು ನಗರಸಭೆ ಆಯುಕ್ತ ಬಸವರಾಜ್. ಇಲ್ಲಿ ಕಸ ಹಾಕಿದ್ರೆ ಶನಿ ಕಾಟ ಆರಂಭವಾಗುತ್ತೆ, ಭಿಕ್ಷುಕರಾಗತ್ತೀರಾ, ದೆವ್ವ ಬರುತ್ತೆ ಎಂಬ ಬೋರ್ಡ್‍ಗಳನ್ನ ಇಟ್ಕೊಂಡು ಬೀದಿ-ಬೀದಿ ಅಲೆಯುತ್ತಿದ್ದಾರೆ.

ನಗರದಲ್ಲಿ 25 ಆಟೋ (Garbage Auto) ದಿನಕ್ಕೆ 12 ಗಂಟೆಗಳ ಕಾಲ ಓಡಾಡಿ ಮನೆಬಾಗಿಲಲ್ಲಿ ಕಸ ಸಂಗ್ರಹಿಸುತ್ತೆ. ಆದರೆ, ಬೆಳಗ್ಗೆಯೇ ಎದ್ದು ಕಸದ ಗಾಡಿಗೆ ಕಸ ಹಾಕದ ಸೋಂಬೇರಿಗಳು ಬೇಕಾದಾಗ ಎಲ್ಲೆಂದರಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಇದನ್ನ ನಿಯಂತ್ರಿಸಲು ನಗರಸಭೆ ಈ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಎಲ್ಲೆಂದರಲ್ಲಿ ಕಸ ಹಾಕಿದ್ರೆ ನಗರದ ಸೌಂದರ್ಯ ಹಾಳಾಗುತ್ತೆ

ಜನರೇ ಮಾಡಿಕೊಂಡಿರೋ 150 ಕಸದ ಪಾಯಿಂಟ್‍ಗಳ (Garbage Points) ಜೊತೆಗೆ ನಗರದ 35 ವಾರ್ಡ್‍ಗಳಲ್ಲೂ ಎಲ್ಲೆಂದರಲ್ಲಿ ಕಸ ಹಾಕುವ ಜಾಗದಲ್ಲಿ ಈ ರೀತಿ ಬೋರ್ಡ್‍ಗಳನ್ನ ಹಾಕಿದ್ದಾರೆ. ಹೀಗಾದ್ರು ಜನ ಬುದ್ಧಿ ಕಲಿತು ನಗರವನ್ನ ಶುಚಿಯಾಗಿ ಇಟ್ಟುಕೊಳ್ತಾರಾ ಎಂದು ನಗರದಾದ್ಯಂತ ಬೋರ್ಡ್‍ಗಳನ್ನ ಹಾಕಿರೋ ನಗರಸಭೆ ಆಯುಕ್ತರು ದಯವಿಟ್ಟು ಎಲ್ಲೆಂದರಲ್ಲಿ ಕಸ ಹಾಕಬೇಡಿ. ನಿಮ್ಮಗಳ ಆರೋಗ್ಯವೇ (Health) ಹಾಳಾಗೋದು. ಜೊತೆಗೆ, ನಗರದ ಸೌಂದರ್ಯ ಕೂಡ ಹಾಳಾಗುತ್ತೆ. ಹಾಗಾಗಿ, ಕಸವನ್ನ ಕಸವನ್ನ ಕಸದ ಗಾಡಿಯಲ್ಲೇ ಹಾಕಿ. ಶಾಪದಿಂದ ಮುಕ್ತರಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Healthy Diet: ಮತ್ತೆ ಕೊರೊನಾ ಹೆಚ್ಚಾಗುತ್ತಿದೆ.. ಉಪ್ಪು-ಸಕ್ಕರೆ-ಎಣ್ಣೆ ಬಗ್ಗೆ WHO ಸಲಹೆ ಹೀಗಿದೆ..

ಕಸ ಎಸೆಯದಂತೆ ಎಚ್ಚರಿಕೆ

ಅಧಿಕಾರಿಗಳು ಮನೆ-ಮನೆಗೆ ಹೋಗಿ ಕಸವನ್ನ ಕಸದ ಗಾಡಿಯಲ್ಲೇ ಹಾಕಿ ಎಂದು ಮನವಿ ಮಾಡಿದ್ದೂ ಆಯ್ತು. ಕರಪತ್ರಗಳನ್ನ ಹಂಚಿ ಆ ಮೂಲಕ ತಿಳಿ ಹೇಳಿದ್ದೂ ಆಯ್ತು. ಆಟೋಗಳಲ್ಲಿ ಅನೌನ್ಸ್ ಮಾಡಿಸಿದ್ದೂ ಆಯ್ತು. ಆದ್ರೆ, ಜನ ಮಾತ್ರ ಬುದ್ಧಿ ಕಲಿಯಲಿಲ್ಲ. ಬೈಕ್-ಆಟೋ-ಕಾರುಗಳಲ್ಲಿ ಹೋಗ್ತಾ-ಬರ್ತಾ ಎಲ್ಲೆಂದರಲ್ಲಿ ಕಸದ ಕವರ್ ಎಸೆದು ಹೋಗುತ್ತಿದ್ದರು. ಹಾಗಾಗಿ, ನಗರಸಭೆ ಕೊನೆ ಪ್ರಯತ್ನ ಎಂದು ದೇವರು-ದೆವ್ವದ ಮೂಲಕ ಜನರಲ್ಲಿ ಭಯ ತುಂಬಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಎಚ್ಚರಿಕೆ ನೀಡಿದ್ದಾರೆ.

ದೇವರ ಫೋಟೋಗಳ ಬಳಿ ರಂಗೋಲಿಯನ್ನ ಹಾಕಿಸಿ ಕಸ ಹಾಕದಂತೆ ಮನವಿ ಮಾಡಿಕೊಂಡಿದ್ದಾರೆ. ಇದು ಕೊನೆ ಪ್ರಯತ್ನ. ಜನ ಇನ್ನೂ ಎಲ್ಲೆಂದರಲ್ಲಿ ಕಸ ಹಾಕಿದರೆ. ನಗರಸಭೆ ತಂಡಗಳನ್ನ ಮಾಡಿದೆ. ಯಾರಾದರೂ ಎಲ್ಲೆಂದರಲ್ಲಿ ಕಸ ಹಾಕುವುದು ಕಣ್ಣಿಗೆ ಬಿದ್ದರೆ, ಮುಲಾಜಿಲ್ಲದೆ ಅವರ ಮನೆಗೆ ನೀಡುರುವ ಮೂಲಭೂತ ಸೌಲಭ್ಯಗಳನ್ನ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:  Lockdown ಭಯಕ್ಕೆ ಊರು ಬಿಡುತ್ತಿರುವ ಕಾರ್ಮಿಕರು; ಸಂಕಷ್ಟದಲ್ಲಿ ಮೀನುಗಾರರು

ನಗರಸಭೆಯ ಈ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಜನ ಎಲ್ಲೆಂದರಲ್ಲಿ ಕಸ ಹಾಕಬಾರದೆಂದು ಮನವಿ ಮಾಡಿದ್ದಾರೆ.

ನಗರ ಸ್ವಚ್ಛತೆಗಾಗಿ ಅಧಿಕಾರಿಗಳ ಪ್ರಯತ್ನ

ಒಟ್ಟಾರೆ, ನಗರಸಭೆಯ ಈ ಪ್ರಯತ್ನದಿಂದ ಜನ ಬುದ್ಧಿ ಕಲಿಯುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ, ಎಲ್ಲೆಂದರಲ್ಲಿ ಕಸ ಹಾಕೋದು ಮಾತ್ರ ತಪ್ಪು. ನಿತ್ಯ 25 ಗಾಡಿಗಳು ನಗರದಲ್ಲಿ ಓಡಾಡುತ್ತೆ. ರಸ್ತೆ ಬದಿ ಎಸೆಯೋ ಕಸದ ಕವರ್‍ನ ಕಸದ ಗಾಡಿಗೆ ಎಸೆದರೆ ಮುಗೀತು. ಕಸವನ್ನ ಕಸದ ಗಾಡಿಗೆ ಹಾಕಿದರೆ ಡಂಪಿಂಗ್ ಯಾರ್ಡ್‍ನಲ್ಲಿ ಆ ಕಸಕ್ಕೊಂದು ಮುಕ್ತಿ ಸಿಗಲಿದೆ. ಆದರೆ, ಜನ ಆ ಕೆಲಸ ಮಾಡುತ್ತಿಲ್ಲ. ನಗರಸಭೆಯಂತೂ ಎಲ್ಲಾ ಪ್ರಯತ್ನ ಮಾಡಿದೆ. ಇನ್ನು ಅಂತವರ ಮನೆಯ ಸೌಲಭ್ಯಗಳನ್ನ ಬಂದ್ ಮಾಡುವುದಷ್ಟೆ ಉಳಿದಿರೋದು.
Published by:Mahmadrafik K
First published: