Garbage Problem: ಬಯಲು ಶೌಚ ಮುಕ್ತ ದಕ್ಷಿಣಕನ್ನಡ ಜಿಲ್ಲೆ ಬಯಲು ಕಸಾಲಯವಾಗಿ ಮಾರ್ಪಾಡು

ರಾಜ್ಯದಲ್ಲಿ ಬುದ್ಧಿವಂತರ ಜಿಲ್ಲೆ ಹಾಗೂ ಅತ್ಯಂತ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂದು ಹೆಸರು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯನ್ನು ಇತ್ತೀಚೆಗಷ್ಟೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಬುದ್ಧಿವಂತರ ಜಿಲ್ಲೆ ಹಾಗೂ ಅತ್ಯಂತ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂದು ಹೆಸರು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯನ್ನು ಇತ್ತೀಚೆಗಷ್ಟೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಬುದ್ಧಿವಂತರ ಜಿಲ್ಲೆ ಹಾಗೂ ಅತ್ಯಂತ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂದು ಹೆಸರು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯನ್ನು ಇತ್ತೀಚೆಗಷ್ಟೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ.

  • Share this:
ಪುತ್ತೂರು (ಮಾ. 21):  ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿರುವ ದಕ್ಷಿಣಕನ್ನಡ  ಜಿಲ್ಲೆ (Dakshina Kannada) ಇತ್ತೀಚಿನ ದಿನಗಳಲ್ಲಿ ಬಯಲು ಕಸಾಲಯವಾಗಿ(Garbage) ಬದಲಾಗುತ್ತಿದೆ. ಪ್ರತೀ ಗ್ರಾಮಪಂಚಾಯತಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಕೇಂದ್ರ ಸ್ವಚ್ಛ ಭಾರತ್ ಮಿಷನ್ (Swaccha Bharath Mission) ಯೋಜನೆಯಡಿ ಅನುದಾನಗಳನ್ನೂ ನೀಡಲಾಗುತ್ತಿದೆ. ಆದರೆ ಸುಶಿಕ್ಷಿತರೇ ಇರುವ ದಕ್ಷಿಣಕನ್ನಡ ಜಿಲ್ಲೆ ಮಾತ್ರ ಕೇಂದ್ರ ಸರಕಾರದ ಸ್ವಚ್ಛ ಭಾರತ್ ಪರಿಕಲ್ಪನೆಗೆ ಅಸ್ವಚ್ಛತೆಯ ಮೂಲಕ ಸಡ್ಡು ಹೊಡೆಯಲು ತೀರ್ಮಾನಿಸಿದೆ.

ತಲೆ ನೋವು  ಆಗಿರುವ ಕಸ ವಿಲೇವಾರಿ

ಕಸ ವಿಲೇವಾರಿ ಇಂದು ವಿಶ್ವದೆಲ್ಲೆಡೆಯ ರಾಷ್ಟ್ರಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಹಸಿ, ಒಣ ಮತ್ತು ಎಲೆಕ್ಟ್ರಾನಿಕ್ಸ್ ಕಸಗಳನ್ನು ನಿರ್ವಹಿಸುವುದೇ ಆಡಳಿತ ವ್ಯವಸ್ಥೆಗಳ ತಲೆ ನೋವಾಗಿ ಪರಿಣಮಿಸಿದೆ. ದೇಶದಲ್ಲೂ ಇದೀಗ ಕಸಗಳ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದ್ದು, ಸ್ವಚ್ಛತೆಯ ಸಮಾಜ ನಿರ್ಮಾಣ ಇತ್ತೀಚಿನ ದಿನಗಳಲ್ಲಿ ಸವಾಲಾಗಿಯೂ ಪರಿಣಮಿಸಿದೆ. ರಾಜ್ಯದಲ್ಲಿ ಬುದ್ಧಿವಂತರ ಜಿಲ್ಲೆ ಹಾಗೂ ಅತ್ಯಂತ ಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ಜಿಲ್ಲೆ ಎಂದು ಹೆಸರು ಹೊಂದಿರುವ ದಕ್ಷಿಣಕನ್ನಡ ಜಿಲ್ಲೆಯನ್ನು ಇತ್ತೀಚೆಗಷ್ಟೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ.

ಆದರೆ ಇದೀಗ ಜಿಲ್ಲೆ ಬಯಲು ಕಸಾಲಯವಾಗಿ ಬದಲಾಗುತ್ತಿದ್ದು, ಎಲ್ಲೆಂದರಲ್ಲಿ ಕಸಗಳ ರಾಶಿಗಳೇ ಕಂಡು ಬರುತ್ತಿದೆ. ಜಿಲ್ಲಾ ಪಂಚಾಯತ್ ರಸ್ತೆಯಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲೆಲ್ಲಾ ಕಸಗಳೇ ತುಂಬಿ ತುಳುಕುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರತೀ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಆಯಾಯ ಗ್ರಾಮಪಂಚಾಯತ್ ಗಳು ಸಂಗ್ರಹ ಮಾಡಿ ವಿಲೇವಾರಿ ಮಾಡುವುದಕ್ಕೋಸ್ಕರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನವನ್ನೂ ನೀಡುತ್ತಿದೆ. ಆದರೆ ಈ ಯೋಜನೆಯನ್ನು ಸಮರ್ಪಕವಾಗಿ ಬಳಸದೆ, ನಿರ್ಲಕ್ಷಿಸಿರುವ ಗ್ರಾಮಪಂಚಾಯತ್ ಗಳ ವ್ಯಾಪ್ತಿಯಲ್ಲಿ ಕಸಗಳಲ್ಲೇ ಸಾಮ್ರಾಜ್ಯವಿದೆ.

ಇದನ್ನೂ ಓದಿ: Sudhakar: ಆಗಸ್ಟ್​ನಲ್ಲಿ ಕೊರೊನಾ 4ನೇ ಅಲೆ ಫಿಕ್ಸ್! ಸಚಿವರೇ ಕೊಟ್ಟಿದ್ದಾರೆ ಮುನ್ಸೂಚನೆ

ಮನೆಯಲ್ಲಿ ಸಂಗ್ರಹವಾಗುವ ಕಸಗಳನ್ನು ಒಣ, ಹಸಿ ಕಸಗಳೆಂದು ವಿಂಗಡಿಸಿ, ಸಂಗ್ರಹ ಮಾಡುವ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಹಲವು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯನ್ನೂ ಈವರೆಗೂ ಆರಂಭಿಸಿಲ್ಲ.

ಈ ಕ್ಷೇತ್ರದಲ್ಲಿ ಹೆಚ್ಚಾದ ಕಸ ಸಮಸ್ಯೆ

ಅದರಲ್ಲೂ ಮಂಗಳೂರು ವಿಧಾನಸಭಾ ಕ್ಷೇತ್ರದ ಕೊಣಾಜೆ, ಕಿನ್ಯಾ, ತಲಪಾಡಿ, ಉಳ್ಳಾಲ, ದೇರಳಕಟ್ಟೆ ಮೊದಲಾದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಪರಿಸರ ಹೋರಾಟಗಾರರು ಹಲವು ಬಾರಿ ತಂದರೂ, ಈ ಬಗ್ಗೆ ಯಾವದೇ ಕ್ರಮ ಕೈಗೊಳ್ಳಲಾಗಿಲ್ಲ. ಪ್ಲಾಸ್ಟಿಕ್ ಕಸಗಳನ್ನು ಕಡ್ಡಾಯವಾಗಿ ಕಸ ವಿಲೇವಾರಿ ಘಟಕಕ್ಕೆ ಸಾಗಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದ ನಡುವೆಯೇ ಪ್ಲಾಸ್ಟಿಕ್ ಕಸಗಳನ್ನು ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಉರಿಸಲಾಗುತ್ತಿದೆ ಎನ್ನುತ್ತಾರೆ ದಕ್ಷಿಣಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಸೀನ ಶೆಟ್ಟಿ.

ಇದನ್ನೂ ಓದಿ: ‘ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಇನ್ಯಾರಿಗೂ ಜವಾಬ್ದಾರಿ ಇಲ್ಲ’ ಸದನದಲ್ಲಿ BSYರನ್ನು ಕೊಂಡಾಡಿದ ಸಿದ್ದು

ಜವಬ್ದಾರಿಯಿಂದ ನುಣಚಿಕೊಳ್ಳುತ್ತಿರುವ ಆಡಳಿತ

ಪ್ಲಾಸ್ಟಿಕ್ ಅನ್ನು ಉರಿಸುವುದರಿಂದ ಹೊರಸೂಸುವ ಹೊಗೆ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಉರಿಸುವುದನ್ನು ನಿಶೇಧ ಮಾಡಲಾಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಉರಿಸುವುದು ಇದೀಗ ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ನಿಂದ ಹೊರ ಹೊಮ್ಮುವ ಹೊಗೆ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೂ ಕಾರಣವಾಗುತ್ತಿದ್ದು, ಸ್ಥಳಿಯಾಡಳಿತಗಳು ಈ ಬಗ್ಗೆ ಗಮನಹರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ. ಇನ್ನೊಂದೆಡೆ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕಾದ ಗ್ರಾಮಪಂಚಾಯತ್ ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜನ ರಸ್ತೆ ಬದಿಯನ್ನೇ ಇದೀಗ ಕಸದ ದೊಡ್ಡಿಯೆಂದು ತಿಳಿದು ಕಸ ಸುರಿಯಲಾರಂಭಿಸಿದ್ದಾರೆ.

ಪ್ಲಾಸ್ಟಿಕ್ ಕಸವನ್ನು ಸುಡುವುದರಿಂದ ಮನುಷ್ಯನ ಆರೋಗ್ಯದ ಜೊತೆಗೆ ವಾತಾವರಣದ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರೆ, ದಕ್ಷಿಣಕನ್ನಡ ಜಿಲ್ಲೆ ಮಾತ್ರ ಅಸ್ವಚ್ಛತೆಯ ಮೂಲಕ ಈ ಕಾರ್ಯಕ್ರಮಗಳಿಗೆ ಸಡ್ಡು ಹೊಡೆಯುತ್ತಿದೆ.
Published by:Seema R
First published: