Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಘಾಟು; ಮೂರು ತಿಂಗಳಲ್ಲಿ 14 ಕೇಸ್

ಜಿಲ್ಲೆಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಹೆಚ್ಚಾಗಿ ಗಾಂಜಾ ಬರುತ್ತಿದ್ದು, ಅದನ್ನ ತಡೆಗಟ್ಟಲು ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಗಾಂಜಾ ಘಾಟು ಇಷ್ಟು ಪ್ರಮಾಣದಲ್ಲಿ ಜಿಲ್ಲೆಯನ್ನ ಆವರಿಸಿದರೆ ಯುವ ಸಮುದಾಯದ ಗತಿ ಏನು..?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರವಾಸಿಗರ ಸ್ವರ್ಗ ಜಿಲ್ಲೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಗಾಂಜಾ ಘಾಟ್ ಎಲ್ಲೆಡೆ ಹೋಗೆಯಾಡುತಿದೆ, ಪೊಲೀಸರು (Police) ಪಕ್ಕಾ ಮಾಹಿತಿ ಮೇರೆಗೆ ದಾಳಿ ಮಾಡಿ ನಶೆ ಗಿರಾಕಿಗಳನ್ನ ಹೆಡೆಮುರಿ ಕಟ್ಟುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ 12 ಕೆಜಿ ಅಷ್ಟು ಗಾಂಜಾ (Ganja) ವಶ ಪಡಿಸಿಕೊಂಡ ಪೊಲೀಸರು ಮತ್ತಷ್ಟು ನಶೆ ಗಿರಾಕಿಗಳನ್ನ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ. ಜೊತೆಗೆ ಗಾಂಜಾ ದಿಂದ ಯುವ (Youths) ಸಮುದಾಯ ಹಾಳಾಗುತ್ತಿದೆ, ಪೊಲೀಸ್ ಇಲಾಖೆ (Police Department) ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜನರು ಒತ್ತಾಯ ಮಾಡುತ್ತಿದ್ದಾರೆ.

ಮೂರೇ ತಿಂಗಳಲ್ಲಿ ಹದಿನಾಲ್ಕು ಪ್ರಕರಣ

ಪ್ರವಾಸಿಗರ ಸ್ವರ್ಗ ಜಿಲ್ಲೆ ಅಂದಾಕ್ಷಣ ನೆನಪಾಗುವುದೇ ಉತ್ತರ ಕನ್ನಡ ಜಿಲ್ಲೆ. ಅಲ್ಲಿನ ಪ್ರಕೃತಿಯ ಸೌಂದರ್ಯ, ರಮಣೀಯ ದೃಶ್ಯಗಳನ್ನ ಒಮ್ಮೆ ನೋಡಿದರೆ ಮನಸೂರೆಗೊಳ್ಳದೆ ಇರದು. ಅಷ್ಟೊಂದು ನೈಸರ್ಗಿಕ ಸಂಪತ್ತು ಮತ್ತು ಸೌಂದರ್ಯವನ್ನ ಹೊದ್ದು ನಿಂತ ಜಿಲ್ಲೆಗೆ ಈಗ ಅಕ್ರಮ ಗಾಂಜಾ ಮಾರಾಟ, ಕಪ್ಪು ಚುಕ್ಕೆಯಂತೆ ಎದ್ದು ಕಾಣುತ್ತಿದೆ.

ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ ಗಾಂಜಾಗೆ ಸಂಬಂಧಿಸಿದಂತೆ 14 ಪ್ರಕರಣಗಳು ದಾಖಲಾಗಿದ್ರೆ, 12 ಕೆಜಿಯಷ್ಟು ಗಾಂಜಾವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:  Ganja Case- ರಾಜಧಾನಿ ಕೂಗಳತೆಯಲ್ಲೇ 'ಮಾದಕ' ಘಾಟು! ಮನೆ ಟೆರೇಸ್ ಮೇಲೆ 'ಗಾಂಜಾಲೋಕ' ಸೃಷ್ಟಿ!

ಹೊರ ರಾಜ್ಯಗಳಿಂದಲೂ ಬರುತ್ತಿರುವ ಗಾಂಜಾ

ಇನ್ನೂ ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಗೋಕರ್ಣದಲ್ಲಿ ಗಾಂಜಾ ಹೆಚ್ಚಾಗಿ ಸದ್ದು ಮಾಡುತ್ತಿದ್ದು ಅಲ್ಲಿಯೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ನಶೆಯ ಗಿರಾಕಿಗಳನ್ನ ಹೆಡೆಮುರಿ ಕಟ್ಟಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಗೆ ಗಾಂಜಾ ಹೊರ ರಾಜ್ಯಗಳಿಂದ ಮತ್ತು ಪಕ್ಕದ ಜಿಲ್ಲೆಯಿಂದ ನುಸುಳುತ್ತಿದ್ದು ಅದನ್ನ ಖರೀದಿಸಿ ಇಲ್ಲಿ ಮಾರಾಟ ಮಾಡಲಾಗುತ್ತಿದೆ.‌

ವಿದ್ಯಾರ್ಥಿ, ಕಾರ್ಮಿಕರೇ ಇವರ ಟಾರ್ಗೆಟ್

ಇನ್ನೂ ಜಿಲ್ಲೆಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಹೆಚ್ಚಾಗಿ ಗಾಂಜಾ ಬರುತ್ತಿದ್ದು, ಅದನ್ನ ತಡೆಗಟ್ಟಲು ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಗಾಂಜಾ ಘಾಟು ಇಷ್ಟು ಪ್ರಮಾಣದಲ್ಲಿ ಜಿಲ್ಲೆಯನ್ನ ಆವರಿಸಿದರೆ ಯುವ ಸಮುದಾಯದ ಗತಿ ಏನು..? ಅದರಲ್ಲೂ ಗಾಂಜಾ ಮಾರಾಟಗಾರರು ವಿದ್ಯಾರ್ಥಿಗಳನ್ನ, ಕಾರ್ಮಿಕರನ್ನ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಾರೆ.

ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಸಾಕಷ್ಟು ಪರಿಣಾಮಕಾರಿಯಾಗಿದೆ. ಗಾಂಜಾ ಸುಲಭವಾಗಿ ಸಿಗುವುದರಿಂದ ವ್ಯಸನಿಗಳು ಕೂಡ ಹೆಚ್ಚಾಗುತ್ತಾರೆ. ಹೀಗಾಗಿ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿ ಗಾಂಜಾ ಪೆಡ್ಲರ್‌ಗಳನ್ನ ಮಟ್ಟ ಹಾಕುವ ಕೆಲಸ ಮಾಡಬೇಕು. ಜೊತೆಗೆ ಗಾಂಜಾ ಮಾರಾಟದ ಕೇಸ್‌ ನಲ್ಲಿ ಪದೇ ಪದೇ ಸಿಕ್ಕಿಹಾಕಿಕೊಳ್ಳುವ  ಆರೋಪಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಆಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರವಾಸಿಗರ ಸ್ವರ್ಗ ಜಿಲ್ಲೆಗೆ ಕಪ್ಪು ಚುಕ್ಕೆಯಂತೆ ಎದ್ದು ಕಾಣುತ್ತಿರುವ ಅಕ್ರಮ ಗಾಂಜಾ ಮಾರಾಟವನ್ನ, ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮವಹಿಸಿ ಸಂಪೂರ್ಣ ಬಂದ್ ಮಾಡಿಸಬೇಕಿದೆ. ಇನ್ನ ಆದಷ್ಟು ಬೇಗ ಗಾಂಜಾ ಮುಕ್ತ ಜಿಲ್ಲೆಯಾನ್ನಾಗಿ ಮಾಡುತ್ತೇನೆ ಎಂದು ಹೇಳುವ ಅಧಿಕಾರಿಗಳು ಯಾವಾಗ ಮಾಡುತ್ತಾರೆ ಎನ್ನುವುದನ್ನ ಕಾದು ನೋಡಬೇಕಿದೆ.

ವೈದ್ಯಕೀಯ ಗಾಂಜಾ ಎಂದರೇನು?

ಇದು ಕೂಡ ಗಾಂಜಾವೇ. ಅಂದರೆ ಗಾಂಜಾ ಸಸ್ಯದಿಂದ ಪಡೆದ ವೈದ್ಯಕೀಯ ಗಾಂಜಾ. ಅಂದರೆ ಇದನ್ನು ಸಮತೋಲಿತ ಪ್ರಮಾಣದಲ್ಲಿ, ರೋಗದ ಚಿಕಿತ್ಸೆಗಾಗಿ, ಔಷಧದ ಉತ್ಪಾದನೆಯಲ್ಲಿ ಬಳಸಿದಾಗ ಅದನ್ನು ವೈದ್ಯಕೀಯ ಗಾಂಜಾ ಎನ್ನಲಾಗುತ್ತದೆ. ತಾಂತ್ರಿಕವಾಗಿ 100 ಕ್ಕೂ ಹೆಚ್ಚು ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವ ಈ ಸಸ್ಯದಿಂದ ಔಷಧಿಗಾಗಿ ಮಾದಕ ದ್ರವ್ಯವನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ:  Bengaluru ನಗರದಲ್ಲಿ ಮಿತಿ ಮೀರಿದ ಗಾಂಜಾ ಘಾಟು: ತಿಂಡಿಗಳ ಪ್ಯಾಕ್ ಒಳಗೆ Drugs ಇಟ್ಟು ಮಾರಾಟ..!

ಉದಾಹರಣೆಗೆ, ಗಾಂಜಾದಲ್ಲಿರುವ ಡೆಲ್ಟಾ -9-ಟೆಟ್ರಾಹೈಡ್ರೊಕಾನ್ನಾಬಿನಾಲ್ (ಟಿಎಚ್‌ಸಿ) ಮತ್ತು ಕ್ಯಾನಬಿಡಿಯಾಲ್ (ಸಿಬಿಡಿ) ಎಂಬ ಎರಡು ರಾಸಾಯನಿಕಗಳನ್ನು ಮುಖ್ಯವಾಗಿ ಔಷಧಿಗಾಗಿ ಬಳಸಲಾಗುತ್ತದೆ. ಇದು ರಾಸಾಯನಿಕ ಟಿಎಚ್‌ಸಿ, ಇದರ ಮೂಲಕ ಜನರು ಮಾದಕತೆಯ ಸ್ಥಿತಿಯನ್ನು ಅನುಭವಿಸಬಹುದು.
Published by:Mahmadrafik K
First published: