ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಹೆಚ್ಚಾದ ಗಾಂಜಾ ದಂಧೆ; ಕಠಿಣ ಕ್ರಮಕ್ಕಾಗಿ ಜನರ ಆಗ್ರಹ

2020 ನೇ ಸಾಲಿನಲ್ಲಿ  ಆಗಸ್ಟ್ ವರೆಗೆ ಒಟ್ಟು 45 ಪ್ರಕರಣಗಳನ್ನು ದಾಖಲಿಸಿಕೊಳ್ಳಾಗಿದೆ. ಒಟ್ಟು  99 ಜನ ಆರೋಪಿತರನ್ನು ಬಂಧಿಸಿ, ಒಟ್ಟು  60 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 41 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ ಒಣ ಗಾಂಜಾ ಸೇರಿದೆ.

ಬೆಳೆಗಳ ಮಧ್ಯೆ ಗಾಂಜಾ ಬೆಳೆದಿರುವ ದೃಶ್ಯ

ಬೆಳೆಗಳ ಮಧ್ಯೆ ಗಾಂಜಾ ಬೆಳೆದಿರುವ ದೃಶ್ಯ

  • Share this:
ಶಿವಮೊಗ್ಗ(ಸೆ.02): ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಗಾಂಜಾ ಗಮಲು (ಗಮತ್ತು) ಜೋರಾಗಿದೆ. ಅಕ್ರಮವಾಗಿ ಹೊಲ, ಗದ್ದೆ, ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವರರ ಸಂಖ್ಯೆ ಹೆಚ್ಚುತ್ತಲೇ ಇದೆ. ಪೊಲೀಸರು ಗಾಂಜಾ ಗಿಡ ಬೆಳೆಯುವವರು ಮತ್ತು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೂ ಸಂಪೂರ್ಣವಾಗಿ ಗಾಂಜಾ ದಂಧೆ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ. ಮೆಕ್ಕೆಜೋಳ, ಹತ್ತಿ, ಶುಂಠಿ ಸೇರಿದಂತೆ ವಿವಿಧ ಬೆಳೆಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದು ಮಾರಾಟ ಮಾಡಲಾಗುತ್ತಿದೆ.

ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದ ಇಬ್ಬರು ಆರೋಪಿತರನ್ನು ಎರಡು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದಾರೆ. ಒಟ್ಟು 13 ಕೆ.ಜಿ. ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಬೆಲೆ 26 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್  ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಗಸ್ಟ್ 31 ರಂದು  ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಮಟ್ಟಿ ಗ್ರಾಮದ ವಾಸಿ ಪಾಂಡುರಂಗ ಎಂಬ ವ್ಯಕ್ತಿಯಿಂದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಶುಂಠಿ ಹೊಲದಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲಿದ್ದ ಕ್ರಿಮಿನಲ್​ ಪ್ರಕರಣಗಳನ್ನು ರದ್ದು ಮಾಡಿದ ಸಿಎಂ ಬಿಎಸ್​ವೈ ಸರ್ಕಾರ 

2018 ರಿಂದ 2020 ರವರೆಗೆ ಮೂರು ವರ್ಷಗಳಲ್ಲಿ  ಪೊಲೀಸರು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಅಂಕಿ ಅಂಶಗಳನ್ನು ನೋಡಿದರೆ ನಿಜಕ್ಕೂ ಗಾಬರಿಯಾಗುತ್ತೇ.
2018 ನೇ ಸಾಲಿನಲ್ಲಿ ಒಟ್ಟು 70  ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಒಟ್ಟು 138  ಜನ ಆರೋಪಿತರನ್ನು ಬಂಧಿಸಿ, ಅವರಿಂದ ಒಟ್ಟು 314 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 295 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ ಒಣ ಗಾಂಜಾ ಸೇರಿದೆ.

2019 ನೇ ಸಾಲಿನಲ್ಲಿ ಒಟ್ಟು  52 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 115 ಜನ ಆರೋಪಿತರನ್ನು ಬಂಧಿಸಿ ಅವರಿಂದ ಒಟ್ಟು 164 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.  ಇದರಲ್ಲಿ 139 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 25 ಕೆ.ಜಿ ಒಣ ಗಾಂಜಾವಾಗಿದೆ. 2020 ನೇ ಸಾಲಿನಲ್ಲಿ  ಆಗಸ್ಟ್ ವರೆಗೆ ಒಟ್ಟು 45 ಪ್ರಕರಣಗಳನ್ನು ದಾಖಲಿಸಿಕೊಳ್ಳಾಗಿದೆ. ಒಟ್ಟು  99 ಜನ ಆರೋಪಿತರನ್ನು ಬಂಧಿಸಿ, ಒಟ್ಟು  60 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 41 ಕೆ.ಜಿ ಹಸಿ ಗಾಂಜಾ ಗಿಡಗಳು ಮತ್ತು 19 ಕೆ.ಜಿ ಒಣ ಗಾಂಜಾ ಸೇರಿದೆ.

ಗಾಂಜಾ ಮಾದಕ ವಸ್ತುವಾಗಿದೆ, ಅದನ್ನು ಬೆಳೆದು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಶಿವಮೊಗ್ಗ ಜನರ ಆಗ್ರಹವಾಗಿದೆ. ಹೊಲಗದ್ದೆಗಳಲ್ಲಿ ಉದ್ದೇಶಪೂರ್ವಕವಾಗಿಯೇ ಬೆಳೆಯುತ್ತಿದ್ದಾರೆ. ಅಂತವರನ್ನು ಮಟ್ಟ ಹಾಕಬೇಕಿದೆ. ಗಾಂಜಾ ಗಿಡ ಬೆಳೆದವರನ್ನು ಮಾತ್ರ ಬಂಧಿಸಿದರೆ ಸಾಲದು, ಇದನ್ನು ಒಣಗಿಸಿ ಪುಡಿ ಮಾಡಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕಿದೆ. ಆ ಮೂಲಕ ಗಾಂಜಾ ದಂಧೆ ಬಂದ್ ಮಾಡಬೇಕಿದೆ.
ಗಾಂಜಾ ಗುತ್ತಿನಲ್ಲಿ (ಮತ್ತಿನಲ್ಲಿ) ಅನೇಕ ಅಪರಾಧ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಗಾಂಜಾ ಕಿಕ್ ಏರಿಸಿಕೊಂಡು ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆಗಳು ಕೂಡ ಜಿಲ್ಲೆಯ ಕೆಲ ಭಾಗಗಳಲ್ಲಿ ನಡೆದಿದ್ದು, ಇವುಗಳಿಗೆ ಕಡಿವಾಣ ಬೀಳಬೇಕಾದರೆ, ಗಾಂಜಾ ಮಾರಾಟ ಜಾಲದ ಎಡೆಮುರಿ ಕಟ್ಟಬೇಕಿದೆ ಎಂದು ಜನರು ಒತ್ತಾಯ ಮಾಡಿದ್ದಾರೆ.
Published by:Latha CG
First published: