ಮೈಸೂರು ಶೂಟೌಟ್​ ಪ್ರಕರಣ; ಹಳೆ ನೋಟುಗಳ ಬದಲಾವಣೆಗಾಗಿ ಬಂದಿಳಿದಿದ್ದಾ ಮುಂಬೈ ಗ್ಯಾಂಗ್​​?

ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬ್​ ಮೂಲದ ಸುಖವಿಂದರ್​ ಮರಣೋತ್ತರ ಪರೀಕ್ಷೆ ನಡೆಸಲು ಅವರ ಕುಟುಂಬದ ಅನುಮತಿಗಾಗಿ ಮೈಸೂರು ಪೊಲೀಸರು ಕಾದು ಕುಳಿತಿದ್ದಾರೆ. ಅವರ ಕುಟುಂಬ ಆಗಮಿಸುವವರೆಗೂ ಶವವನ್ನು ಬಿಗಿಬಂದೋಬಸ್ತಿನಲ್ಲಿ ಇರಿಸಲಾಗಿದೆ.

Seema.R | news18
Updated:May 17, 2019, 7:07 PM IST
ಮೈಸೂರು ಶೂಟೌಟ್​ ಪ್ರಕರಣ; ಹಳೆ ನೋಟುಗಳ ಬದಲಾವಣೆಗಾಗಿ ಬಂದಿಳಿದಿದ್ದಾ ಮುಂಬೈ ಗ್ಯಾಂಗ್​​?
ಸಾಂದರ್ಭಿಕ ಚಿತ್ರ
Seema.R | news18
Updated: May 17, 2019, 7:07 PM IST
ಮೈಸೂರು (ಮೇ.17):  ಸಾಂಸ್ಕೃತಿಕ ನಗರಿಯಲ್ಲಿ ನಿನ್ನೆ ನಡೆದ ಗುಂಡಿನ ಸದ್ದಿನ ಹಿನ್ನೆಲೆ ಮನಿ ಡಬ್ಲಿಂಗ್​ ಕಾರಣ ಎಂಬ ಸುದ್ದಿ ಹರಡಿತ್ತು. ಆದರೆ, 500 ಕೋಟಿಯ  ಈ ವ್ಯವಹಾರದಲ್ಲಿ,  ಚಲಾವಣೆಯಲ್ಲಿಲ್ಲದ್ದ ಹಳೆ 500 ರೂ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡುವ ಕಾರ್ಯ ನಡೆದಿತ್ತು ಎಂಬ ಸ್ಪೋಟಕ ವರದಿ ಬಹಿರಂಗವಾಗಿದೆ.

ನೋಟು ಅಮಾನ್ಯೀಕರಣಗೊಂಡು ಎರಡು ವರ್ಷಗಳು ಕಳೆಯುತ್ತಾ ಬಂದಿದ್ದರೂ ಹಳೆ ನೋಟುಗಳ ಬದಲಾವಣೆ ಕಾರ್ಯ ನಡೆಯುತ್ತಲೇ ಇದೆಯಾ ಎಂಬ ಅನುಮಾನವನ್ನು ಈ ಪ್ರಕರಣ ಹುಟ್ಟುಹಾಕಿದೆ. ಈ ಮನಿ ಡಬ್ಲಿಂಗ್​ನಲ್ಲಿ ಮುಂಬೈ ಗ್ಯಾಂಗ್​ ಕೈವಾಡವಿದ್ದು, ಮೈಸೂರಿನ ನಿವಾಸಿಯೊಬ್ಬರಿಗೆ ಹಣ ಬದಲಾವಣೆ ಮಾಡಿಕೊಡಲು ಅವರು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿ ಶೂಟೌಟ್​ ಮಾಡಿದ್ದಾರೆ.

ಪೊಲೀಸರ ಗುಂಡೇಟಿಗೆ ಬಲಿಯಾದ ಸುಖವಿಂದರ್​ ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಡುವ ಭರವಸೆ ನೀಡಿದ್ದ. ಅಲ್ಲದೇ, ಆ ವ್ಯಕ್ತಿ ಬಳಿ 10 ಲಕ್ಷ ಹಣ ಪಡೆದು ವಂಚಿಸಿದ್ದ. ಆದರೆ ಈ ಬಾರಿ 500 ಕೋಟಿ ಹಳೆ ನೋಟುಗಳ ಬದಲಾವಣೆ ಭರವಸೆ ನೀಡಿದ ಹಿನ್ನೆಲೆ ಮುಂಬೈ ಮೂಲದ ಮೂವರು ಮೈಸೂರಿಗೆ ಬಂದಿಳಿದಿದ್ದರು.

ಇದನ್ನು ಓದಿ: ವೀರಶೈವರು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮತ ಹಾಕಲ್ಲ ಎಂಬ ವಿಶ್ವಾಸವಿದೆ; ಯಡಿಯೂರಪ್ಪ

ವಿಜಯನಗರದ ಎಸ್.ವಿ.ಅಪಾರ್ಟ್‌ಮೆಂಟ್ ಬಳಿ ಈ ಹಣ ಬದಲಾವಣೆ ಕಾರ್ಯ ಅರಿತ ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಸುಖವಿಂದರ್​ ಸಾವನ್ನಪ್ಪಿದ್ದಾನೆ. ಇನ್ನು ಮೂವರು ಆರೋಪಿಗಳು ಪರಾರಿಯಾಗಿದ್ದು ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.  ಆರೋಪಿಗಳು ಬಳಸಿದ್ದ ಕಾರ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದು,  ಈ ಕಾರ್ ನಗರದ ಮಂಡಿಮೊಹಲ್ಲಾ ನಿವಾಸಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಪಂಜಾಬ್​ ಮೂಲದ ಸುಖವಿಂದರ್​ ಮರಣೋತ್ತರ ಪರೀಕ್ಷೆ ನಡೆಸಲು ಅವರ ಕುಟುಂಬದ ಅನುಮತಿಗಾಗಿ ಮೈಸೂರು ಪೊಲೀಸರು ಕಾದು ಕುಳಿತಿದ್ದಾರೆ. ಅವರ ಕುಟುಂಬ ಆಗಮಿಸುವವರೆಗೂ ಶವವನ್ನು ಬಿಗಿಬಂದೋಬಸ್ತಿನಲ್ಲಿ ಇರಿಸಲಾಗಿದೆ. ಸುಖವಿಂದರ್​ ಮೂಲ ಪಂಜಾಬ್​ ಆಗಿದ್ದು, ಅವರ ಕುಟುಂಬದವರಿಗಾಗಿ ಪೊಲೀಸರು ಕಾದು ಕುಳಿತಿದ್ದಾರೆ.'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ