ಸುಸಜ್ಜಿತ ಮೀನುಗಾರಿಕಾ ಜೆಟ್ಟಿ (Fishing Jetty) ಬೇಕು ಅನ್ನೋದು ಉಡುಪಿಯ ಗಂಗೊಳ್ಳಿಯ (Gangolli, udupi) ಮೀನುಗಾರರ (Fisherman) ಬಹುವರ್ಷದ ಬೇಡಿಕೆ. ಮೀನುಗಾರರ ಕನಸಿನ ಜೆಟ್ಟಿಗೆ ಅಂತ ಸರ್ಕಾರದಿಂದ 12 ಕೋಟಿ ಬಿಡುಗಡೆ ಆಗಿ, ಕಾಮಗಾರಿಯೂ ನಡೆಯುತ್ತಿದೆ. ಆದ್ರೆ ಅಧಿಕಾರಿಗಳ ಲಅವೈಜ್ಞಾನಿಕ ಕಾಮಗಾರಿಯಿಂದ (Unscientific Construction) ನಿರ್ಮಾಣ ಹಂತದಲ್ಲಿದ್ದ ಜಟ್ಟಿ ನೋಡು ನೋಡುತ್ತಲೇ ಕುಸಿದು ಬಿದ್ದಿದೆ. ಈ ನಡುವೆ ಮೀನುಗಾರ ಜಟ್ಟಿ ನಿರ್ಮಾಣದಲ್ಲೂ ಪರ್ಸೆಂಟೇಜ್ ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೆಟ್ಟಿ ಕುಸಿತ ಕಂಡು ಮೀನುಗಾರರು ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಗೆ ಹಿಟ್ಟು ನೀಡುಲು ಸಹಕಾರಿಯಾಗಿದ್ದ ಜಟ್ಟಿ ಕುಸಿದು ಹೋಯಿತಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಜೆಟ್ಟಿ ಅನ್ನೋದು ಮತ್ಸ್ಯ ಬೇಟೆ ಮುಗಿದ ಬಳಿಕ ಮೀನುಗಳನ್ನು ಖಾಲಿ ಮಾಡಲು ಹಾಗೂ ಹಡಗು, ದೋಣಿಗಳು ತಂಗಲು ಇರೋ ಪ್ರದೇಶ.
ಗಂಗೊಳ್ಳಿಯಲ್ಲಿ ಸದ್ಯ ಇರೋದು ಹಳೆ ಜಟ್ಟಿ, ಹೀಗಾಗಿ ಹೊಸ ಜಟ್ಟಿ ನಿರ್ಮಾಣ ಮಾಡಿಕೊಡಿ ಅಂತ ಮೀನುಗಾರರು ನಡೆಸಿದ ಹೋರಾಟದ ಫಲವಾಗಿ 12 ಕೋಟಿ ಜೆಟ್ಟಿಗಾಗಿ ಮಂಜೂರಾಗಿತ್ತು. ಆದ್ರೆ ಹೊಸ ಜೆಟ್ಟಿ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಹಳೆ ಜಟ್ಟಿಯೇ ಕುಸಿದಿದೆ.
ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾದ ಮೀನುಗಾರರು
ಹೊಸ ಜೆಟ್ಟಿಗೂ ಹಾನಿಯಾಗಿದೆ. ಈ ಬಗ್ಗೆ ಮೀನುಗಾರ ಮುಖಂಡರು ಆಕ್ರೋಶ ಹೊರಹಾಕಿ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದಾರೆ.
ಹಳೆ ಜಟ್ಟಿಗೆ ರಾಡ್ಗಳು ಆಧಾರವಾಗಿತ್ತು. ಈ ರಾಡ್ಗಳನ್ನು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹೊಸ ಜೆಟ್ಟಿ ಕಾಮಗಾರಿ ವೇಳೆ ತುಂಡಿಸಲಾಗಿತ್ತು. ಇದೇ ಹಳೆ ಜೆಟ್ಟಿ ಕುಸಿತಕ್ಕೆ ಕಾರಣ ಅನ್ನೋದು ಮೀನುಗಾರರ ಆರೋಪ.
ತನಿಖೆಗೆ ಆಗ್ರಹಿಸಿದ ಸಿದ್ದರಾಮಯ್ಯ
ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರ ಇಂದು ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ. 12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನ ಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ ಬಿಜೆಪಿಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ .
ರಾಡ್ ತುಂಡರಿಸಿದ ಪರಿಣಾಮ ಹಳೇ ಜೆಟ್ಟಿ ಕುಸಿದು, ಹೊಸ ಜೆಟ್ಟಿ ಕಾಮಗಾರಿ ಮೇಲೆ ಬಿದ್ದು, ಸಾಕಷ್ಟು ಪಿಲ್ಲರ್ಗಳಿಗೆ ಹಾನಿಯಾಗಿದೆ. ಈ ಘಟನೆಗೆ ಪರ್ಸೆಂಟೇಜ್ ಕಾರಣ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇದಕ್ಕೆ ಮೀನುಗಾರು ಧ್ವನಿಗೂಡಿಸಿದ್ದಾರೆ.
10 ಕೋಟಿ 6 ಲಕ್ಷ ಪೇಮೆಂಟ್
12 ಕೋಟಿ ಕಾಮಗಾರಿಯಲ್ಲಿ ಇದುವರೆಗೆ 10 ಕೋಟಿ 6 ಲಕ್ಷ ಪೇಮೆಂಟ್ ಆಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಸದ್ಯ ಕಾಮಗಾರಿ ನಡೆದದ್ದು ಸ್ವಲ್ಪ ಮಾತ್ರ ಮಾಡದೇ ಇರುವ ಕೆಲಸಕ್ಕೆ 10 ಕೋಟಿ ಹೇಗೆ ನೀಡದ್ರು ? ಪರ್ಸೆಂಟೇಜ್ ಬಿಟ್ಟು ಅಧಿಕಾರಿಗಳಿಗೆ ಇಲ್ಲಿ ಏನು ಇಲ್ಲ ಪರ್ಸೆಂಟ್ ಹೋಗಿದೆ ಎನ್ನುವುದು ಇವರ ಕೆಲಸದಲ್ಲಿ ಕಾಣುತ್ತೆ ಅಂತ ಮೀನುಗಾರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ #40Percent ಕಮಿಷನ್ ಸರ್ಕಾರ ಇಂದು ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ.
12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನ ಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ @BJP4Karnataka ಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ. @KotasBJP @AngaraSBJP pic.twitter.com/CxbyE0Jn5u
— Siddaramaiah (@siddaramaiah) September 29, 2022
ಇನ್ನು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಜೊತೆ ಚರ್ಚಿಸಿದ ಉಸ್ತುವಾರಿ ಸಚಿವ ಅಂಗಾರ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 40 ಪರ್ಸೆಂಟ್ ಕಮಿಷನ್ ಆರೋಪ ತಳ್ಳಿ ಹಾಕಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಬಗ್ಗೆ ತನಿಖೆ ನಡೆಸಿ ಜಟ್ಟಿ ನಿರ್ಮಾಣ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸುವುದರ ಜೊತೆಗೆ ಠೇವಣಿ ಮುಟ್ಟುಗೋಲು ಹಾಕಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ, ಹೊಸ ಜೆಟ್ಟಿ ನಿರ್ಮಾಣ ಆಗುತ್ತೆ ಎನ್ನುವಷ್ಟರಲ್ಲೇ ಮತ್ತೆ ಅವೈಜ್ಞಾನಿಕ ಕಾಮಗಾರಿಯಿಂದ ತೊಡಕು ಉಂಟಾಗಿ, ಕಾಮಗಾರಿ ಮತ್ತಷ್ಟು ವಿಳಂಬ ಆಗುವಂತೆ ಆಗಿದೆ. ಮೀನುಗಾರರು ಪಕ್ಕದ ಮಲ್ಪೆ, ಭಟ್ಕಳ ಬಂದರು ಅವಲಂಬಿಸಬೇಕಿದೆ. ಹೀಗಾಗಿ ಉನ್ನತ ಮಟ್ಟದ ಅಧಿಕಾರಿಗಳೇ ನಿಂತು ಜೆಟ್ಟಿ ಕಾಮಗಾರಿ ನಡೆಸಲಿ ಅನ್ನೋದು ಮೀನುಗಾರ ಆಗ್ರಹವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ