Chitradurga: ನಕಲಿ ಚಿನ್ನ ಕೊಟ್ಟು ಪರಾರಿಯಾಗಲು ಯತ್ನಿಸಿದ್ದ ವಂಚಕರು ಪೊಲೀಸರ ಖೆಡ್ಡಾಗೆ ಬಿದ್ದಿದ್ದೇಗೆ?

ಕೆಲವೊಮ್ಮೆ ಚಿನ್ನ ವ್ಯಾಪಾರಸ್ಥರು ತೂಕ ಮತ್ತು ಶುದ್ಧತೆಯಲ್ಲಿ ಮೋಸ ಮಾಡುವ ಸಾಧ್ಯತೆಗಳು ಸಹ ಇರುತ್ತವೆ. ಹಾಗಾಗಿ ನಂಬಿಕೆ ಅರ್ಹವಾದ ವ್ಯಾಪಾರಿ ಅಥವಾ ಮಳಿಗೆಗಳಲ್ಲಿ ಚಿನ್ನ ಖರೀದಿಸೋದು ಉತ್ತಮ .

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಚಿತ್ರದುರ್ಗ: ಕಡಿಮೆ ಬೆಲೆಗೆ ಅಸಲಿ ಚಿನ್ನ (Gold) ನೀಡೋದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ವಂಚಕರನ್ನ ಚಿತ್ರದುರ್ಗ ಪೊಲೀಸರು (Chitradurga Police) ಸಿನಿಮೀಯ  ಸ್ಟೈಲ್ ನಲ್ಲಿ ಪ್ಲಾನ್ ಮಾಡಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೇನು ನಕಲಿ ಬಂಗಾರ (Fake Gold) ಕೊಟ್ಟು ಹಣ (Money) ದೋಚಿ ಪರಾರಿ ಆಗೋಕೆ ಪ್ಲಾನ್ ಮಾಡಿದ್ದ ವಂಚಕರು ಪೊಲೀಸರು ತೋಡಿದ್ದ ಖೆಡ್ಡಾಕ್ಕೆ ಬಿದ್ದು ಜೈಲು ಸೇರಿದ್ದಾರೆ. ಮನುಷ್ಯನಿಗೆ ಕಡಿಮೆ ಬೆಲೆಗೆ ಏನಾದ್ರು ಬೆಲೆ ಬಾಳುವ ವಸ್ತುಗಳು ಸಿಗುತ್ತವೆ ಅಂದ್ರೆ ನನಗೂ ಇರಲಿ ನಮ್ಮ ಮನೆಯವರೆಗೂ ಇರಲಿ ಅನ್ನೋ ಚಾಳಿ‌. ಅದರಲ್ಲೂ ಗಗನಕ್ಕೆ ಏರಿಕೆ ಆಗಿರೋ ಚಿನ್ನದ ರೇಟು (Gold Price) ಕೇಳಿದರೆ ಅಬ್ಬಬ್ಬಾ ಇಷ್ಟೊಂದು ಬೆಲೆನಾ ಅನ್ನೋ ಈ ಪ್ರಸ್ತುತ ದಿನಮಾನಗಳಲ್ಲಿ ಅರ್ಧಕರ್ದ ಕಡಿಮೆ ಬೆಲೆಗೆ ಕೊಡ್ತಾರೆ ಅಂದರೆ ಯಾರಾದ್ರೂ ಬಿಡೋದು ಉಂಟೆ?, ಸಾಧ್ಯವೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಗೆ ಇಳಿದಿರುವವರು ಕತ್ತಲ ಕೋಣೆ ಸೇರಿದ್ದಾರೆ.

ಕಡಿಮೆ ಬೆಲೆಗೆ ಕೆಜಿಗಟ್ಟಲೆ ಚಿನ್ನ ಸಿಗುತ್ತೆ ಅಂದ್ರೆ ಸಾಲ ಸೂಲ ಮಾಡಿಯಾದರೂ ಕೊಂಡುಕೊಳ್ಳುವ ಆಸೆ ಮನುಷ್ಯಂದು. ಇಂಥ ಮನಸ್ಥಿತಿ ಮನುಷ್ಯನಲ್ಲಿ ಇರುವುದನ್ನ ನೋಡಿ ಗಮನಿಸಿರೋ ವಂಚಕರ ದುಡ್ಡು ಮಾಡುವ ದಾರಿ ಕಂಡುಕೊಳ್ಳೋದು ಸರ್ವೆ ಸಾಮಾನ್ಯ‌. ಇಂಥ ಪ್ರಕರಣಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಆಗಿಂದಾಗ್ಗೆ ಬೆಳಕಿಗೆ ಬಂದಿವೆ.

ಮೋಸಕ್ಕೆ ಒಳಗಾದ ವ್ಯಕ್ತಿಯಿಂದ ದೂರು

ಅದರಲ್ಲಿ ಅನೇಕ ಜನರು ಚಿನ್ನದ ಆಸೆಗೆ ಮಾರು ಹೋಗಿ ಕಷ್ಟಪಟ್ಟು ಕೂಡಿಟ್ಟ ಅಷ್ಟೋ ಇಷ್ಟೋ ಹಣವನ್ನ ಕೊಟ್ಟು ಕಳೆದುಕೊಂಡ ಪರದಾಡಿ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಅಂತಹವುದೇ ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ತಾಲ್ಲೂಕಿನ ಜಿಆರ್ ಹಳ್ಳಿ ಗ್ರಾಮ ಮೂಲದ ಶ್ರೀನಿವಾಸ್ ಎಂಬವರು ವಂಚನೆಗೆ ಒಳಗಾಗಿ ಚಿತ್ರದುರ್ಗ ಪೊಲೀಸರಿಗೆ ಮಾಹಿತಿ ಜೊತೆ ದೂರು ನೀಡಿದ್ದರು.

ಇದನ್ನೂ ಓದಿ:  Gold Price Today: ಮಕ್ಕಳ ಮದುವೆಗೆ ಚಿನ್ನ ಖರೀದಿಸುವ ಪ್ಲಾನ್ ಇದೆಯಾ? ಅಂಗಡಿ ತೆರೆಯುವ ಮೊದಲು ಇವತ್ತಿನ ಬೆಲೆ ತಿಳಿದುಕೊಳ್ಳಿ

ದೂರು ದಾಖಲಿಸಿಕೊಂಡ ಪೊಲೀಸರು ಅಸಲಿ ಚಿನ್ನದ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಗಳನ್ನ ಸಿನಿಮೀಯ ಶೈಲಿಯಲ್ಲಿ ಹಿಡಿದು ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ‌.

ಮಾಸ್ಕ್ ತಪಾಸಣೆ ನೆಪದಲ್ಲಿ ವಂಚಕರ ಬಂಧನ

ಶ್ರೀನಿವಾಸ್ ಬಳಿ 7.5 ಲಕ್ಷ ರೂ ಹಣ ಪಡೆದು1 kg ಬಂಗಾರ ನೀಡೋದಾಗಿ ಹೇಳಿ ಪ್ಲಾನ್ ಮಾಡಿದ್ರು. ಅದರಂತೆ ವಂಚಿಸಿದ್ದ ಆರೋಪಿಗಳ ಕುರಿತು ದೂರು ಪಡೆದ ನಗರ ಠಾಣೆ PSI ಸುರೇಶ್ ನೇತೃತ್ವದ ತಂಡ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ NH13 ರ ಗುಡ್ಡದ ರಂಗವ್ವನಹಳ್ಳಿ ಬಳಿ  ಮಾಸ್ಕ್ ತಪಾಸಣೆ ನೆಪದಲ್ಲಿ ತಡೆದು ಆರೋಪಿಗಳನ್ನ ಲಾಕ್ ಮಾಡಿದ್ದಾರೆ.

ನಕಲಿ ಚಿನ್ನದ ನಾಣ್ಯ , ಕಾರ್ ಪೊಲೀಸರ ವಶಕ್ಕೆ

ಇದಕ್ಕೆ ಚಿತ್ರದುರ್ಗ SP ಜಿ.ರಾಧಿಕಾ ಮಾರ್ಗದರ್ಶನ ನೀಡಿದ್ದಾರೆ. ಚಿತ್ರದುರ್ಗದ  NH-13 ಹೆದ್ದಾರಿ ಬಾಪೂಜಿ ಕಾಲೇಜ್ ಸಮೀಪ ಕಾರ್ಯಾಚರಣೆ ಮಾಡಿ ಮೂವರು ಆರೋಪಿಗಳು ಲಾಕ್ ಮಾಡಿದ್ದು, ಕೇಶವಮೂರ್ತಿ, ಶೇಖರಪ್ಪ, ಸುರೇಶ್ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ, ಅಲ್ಲದೇ ಆರೋಪಿಗಳಿಂದ ನಕಲಿ ಬಂಗಾರದ ನಾಣ್ಯ, ಕಾರು ವಶಕ್ಕೆ ಪಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mandya: ಪ್ರೇಯಸಿ ಜೊತೆ ಹೋದವ ಸಿಕ್ಕಿದ್ದು ಶವವಾಗಿ; ಸ್ನೇಹಿತ ಹಾಗೂ ಹುಡುಗಿ ತಾಯಿಯಿಂದಲೇ ನಡೀತಾ ಹತ್ಯೆ.?

ಚಿನ್ನ ಖರೀದಿಸುವಾಗ ಇರಲಿ ಎಚ್ಚರ 

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿದಿನ ಪರಿಷ್ಕರಣೆ ಆಗುತ್ತಿರುತ್ತದೆ. ಚಿನ್ನ ಖರೀದಿಗೂ ತೆರಳುವ ಮುನ್ನ  ಆ ದಿನದ ಬೆಲೆ ಪರಿಶೀಲನೆ ಮಾಡಬೇಕು. ಕೆಲವೊಮ್ಮೆ ಚಿನ್ನ ವ್ಯಾಪಾರಸ್ಥರು ತೂಕ ಮತ್ತು ಶುದ್ಧತೆಯಲ್ಲಿ ಮೋಸ ಮಾಡುವ ಸಾಧ್ಯತೆಗಳು ಸಹ ಇರುತ್ತವೆ. ಹಾಗಾಗಿ ನಂಬಿಕೆ ಅರ್ಹವಾದ ವ್ಯಾಪಾರಿ ಅಥವಾ ಮಳಿಗೆಗಳಲ್ಲಿ ಚಿನ್ನ ಖರೀದಿಸೋದು ಉತ್ತಮ .
Published by:Mahmadrafik K
First published: