• Home
  • »
  • News
  • »
  • state
  • »
  • Gang Rape: ಬೈಕ್‌ ಬುಕ್‌ ಮಾಡಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್! ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಪಾಪಿಗಳು

Gang Rape: ಬೈಕ್‌ ಬುಕ್‌ ಮಾಡಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್! ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಪಾಪಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೈಕ್​ ಸವಾರ​ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ  ರೂಮ್​ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.29): ರಾಜ್ಯ ರಾಜಧಾನಿಯಲ್ಲಿ (State Capital)  ಮತ್ತೆ ಗ್ಯಾಂಗ್​ ರೇಪ್​ (Gang Rape) ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿಯಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಕೇರಳ (Kerala) ಮೂಲದ ಯುವತಿ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮೂರು ದಿನಗಳಲ್ಲಿ ಆರೋಪಿಗಳನ್ನು (Accused) ಬಂಧಿಸಿದ್ದಾರೆ.


ಯುವತಿಯ ಮೇಲೆ ಗ್ಯಾಂಗ್‌ ರೇಪ್‌ 


ನವೆಂಬರ್​ 25ರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಟಿಎಂ ಲೇಔಟ್​ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ ರೇಪ್‌  ನಡೆದಿದೆ. ಶುಕ್ರವಾರ ರಾತ್ರಿ ಬಿಟಿಎಂ ಲೇಔಟ್ (BTM Layout) ನಿಂದ ನೀಲಾದ್ರಿ ನಗರಕ್ಕೆ ರ್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾರೆ.


a 17 year old girl was repeatedly raped by her grandfather father and uncle
ಸಾಂದರ್ಭಿಕ ಚಿತ್ರ


ಮದ್ಯಪಾನ ಮಾಡಿದ್ದ ಯುವತಿ 


ರ್ಯಾಪಿಡ್ ಬೈಕ್ (Rapido Bike) ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿದ್ದಳು. ನೀಲಾದ್ರಿ ನಗರ ತಲುಪುವ ಹೊತ್ತಿಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ ತಲುಪಿಸದೇ ಸ್ನೇಹಿತನ ರೂಮ್​ಗೆ ಕರೆದೊಯ್ದಿದ್ದಾನೆ.


ಸ್ನೇಹಿತನ ಜೊತೆ ಸೇರಿ ಅತ್ಯಾಚಾರ


ಬೈಕ್​ ಸವಾರ​ ಕುಡಿದ ಅಮಲಿನಲ್ಲಿದ್ದ ಯುವತಿಯನ್ನು ನೀಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತನ  ರೂಮ್​ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ರ್ಯಾಪಿಡೋ ಬೈಕ್ ಸವಾರ ಮತ್ತು ಸ್ನೇಹಿತನಿಂದ ರೇಪ್ ಆಗಿದೆ.


ಯುವತಿಗೆ ಬೆದರಿಕೆ ಹಾಕಿದ ಬೈಕ್​ ಸವಾರ


ಪ್ರಜ್ಞೆ ಬಂದ ಬಳಿಕ ಯುವತಿಗೆ ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಕಳುಹಿಸಿದ್ದರು. ಘಟನೆ ಬಳಿಕ ಯುವತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರ್ಯಾಪಿಡೋ ಬೈಕ್ ಬುಕ್


ಎಲೆಕ್ಟ್ರಾನಿಕ್ ಸಿಟಿ ಯುವತಿ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ನವೆಂಬರ್​ 25 ರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. 22 ವರ್ಷದ ಯುವತಿ ಸ್ನೇಹಿತನ ಮನೆಯಿಂದ ತನ್ನ ಮನೆಗೆ ಹೋಗಬೇಕಿತ್ತು. ಆಗ ಯುವತಿ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ.


ಈ ವೇಳೆ ಯುವತಿಯನ್ನು ಬೈಕ್ ಮೇಲೆ ಕೂರಿಸಿಕೊಂಡ ಯುವಕ ಸ್ನೇಹಿತನ ರೂಮ್​ಗೆ ಕರೆದುಕೊಂಡು ಅತ್ಯಾಚಾರ ಮಾಡಿದ್ದಾರೆ. ಇಬ್ಬರು ಯುವಕರ ಕೃತ್ಯಕ್ಕೆ ಓರ್ವ ಯುವತಿ ಕೂಡ ಸಾಥ್ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.


ಇದನ್ನೂ ಓದಿ: Kalaburagi: ರೇಪ್​ ಆಂಡ್ ಮರ್ಡರ್​ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ


ಕೆಲ ದಿನಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರ


ಅಪ್ರಾಪ್ತ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಮಾನುಷ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಳ್ಳಿ ಗ್ರಾಮದ ಹೊರವಲಯದಲ್ಲಿ ನ.01 ರಂದು ನಡೆದಿತ್ತು. ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ. ಅಪ್ರಾಪ್ತ ಬಾಲಕರು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರು, ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯಗಳನ್ನ ಕಂಡು ಅತ್ಯಾಚಾರ ಗೈದಿದ್ದಾರಂತೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published by:ಪಾವನ ಎಚ್ ಎಸ್
First published: