ಹೋಟೆಲ್ಗಳಿಗೆ (Hotel) ಎಲ್ಲಾ ರೀತಿಯ ಜನರು ಬರುತ್ತಾರೆ. ಕೆಲವೊಮ್ಮೆ ನೀಡುವ ಸೇವೆ (Service) ಅಥವಾ ಚಿಲ್ಲರೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು (Customers) ಮತ್ತು ಹೋಟೆಲ್ ಸಿಬ್ಬಂದಿ (Hotel Staff) ನಡುವೆ ಜಗಳ ನಡೆಯುತ್ತವೆ. ಬಹುತೇಕ ಗ್ರಾಹಕರು ಇನ್ನೊಮ್ಮೆ ನಿಮ್ಮ ಹೋಟೆಲ್ಗೆ ಬರಲ್ಲ ಅಂತ ಹೊರ ಹೋದ ಬಳಿಕ ಘಟನೆ ಮರೆಯುತ್ತಾರೆ. ಇತ್ತ ಹೋಟೆಲ್ ಸಿಬ್ಬಂದಿ ಸಹ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುತ್ತಾರೆ. ಇನ್ನು ತಡರಾತ್ರಿ ಹೋಟೆಲ್ ನಡೆಸೋರಿಗೆ ಕುಡುಕರು (Drunkards) ಮತ್ತು ಸ್ಥಳೀಯ ಪುಡಿ ರೌಡಿಗಳ ಕಿರಿಕಿರಿ ಇದ್ದೆ ಇರುತ್ತದೆ. ರಾತ್ರಿ ಕುಡಿದು ಬಂದು ಹೋಟೆಲ್ನಲ್ಲಿ ಕುಡುಕರು ಜಗಳ ಮಾಡುತ್ತಾರೆ. ಕೆಲವೊಮ್ಮೆ ಇಂತಹ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ಗಳು ಗ್ಯಾಂಗ್ ವಾರ್ಗಳಿಗೆ (Gang war) ಸಾಕ್ಷಿಯಾಗುತ್ತವೆ. ಕೆಲವೊಮ್ಮೆ ಪುಂಡರು ಸರ್ವಿಸ್ ಚೆನ್ನಾಗಿಲ್ಲ ಎಂದು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಸಹ ನಡೆಸುತ್ತಾರೆ.
ಇದೀಗ ಇಂತಹವುದೇ ಒಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಚಿಕನ್ ರೋಲ್ ಕೊಟ್ಟಿಲ್ಲ ಎಂದು ಹೋಟೆಲ್ ಸಿಬ್ಬಂದಿ ಕೋಣೆಗೆ ಪುಂಡರು ಬೆಂಕಿ ಹಾಕಿದ್ದಾರೆ.
ಚಿಕನ್ ರೋಲ್ ಕೇಳಿದ್ರು
ಬೆಂಗಳೂರಿನ ಹನುಮಂತನಗರದ ಕುಮಾರ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಕುಮಾರ್ ಹೋಟೆಲ್ಗೆ ದೇವರಾಜ್ ಆಂಡ್ ಟೀಂ ಬಂದಿದೆ. ಈ ವೇಳೆ ಚಿಕನ್ ರೋಲ್ ಬೇಕೆಂದು ಹೋಟೆಲ್ ಸಿಬ್ಬಂದಿಗೆ ಹೇಳಿದ್ದಾರೆ.
ರಾತ್ರಿಯಾಗಿದ್ದು ಇದು ಹೋಟೆಲ್ ಮುಚ್ಚುವ ಸಮಯ. ಹಾಗಾಗಿ ಚಿಕನ್ ರೋಲ್ ಇಲ್ಲ ಎಂದು ಹೇಳಿ, ತಮ್ಮಲ್ಲಿರುವ ಮೆನು ಹೇಳಿದ್ದಾರೆ. ಇದೇ ವಿಷಯಕ್ಕೆ ಹೋಟೆಲ್ ಸಿಬ್ಬಂದಿ ಹಾಗೂ ದೇವರಾಜ್ ಟೀಂ ನಡುವೆ ಗಲಾಟೆ ಆಗಿದೆ. ಗಲಾಟೆ ವೇಳೆ ಮದ್ಯದ ಅಮಲಿನಲ್ಲಿದ್ದ ಮೂವರನ್ನು ಥಳಿಸಿದ ಹೋಟೆಲ್ ಸಿಬ್ಬಂದಿ ಹೊರಗೆ ಕಳುಹಿಸಿ ಬಾಗಿಲು ಹಾಕಿದ್ದಾರೆ.
ಸಿಬ್ಬಂದಿ ರೂಮ್ಗೆ ಬೆಂಕಿ
ಏಟು ತಿಂದ ಬಳಿಕ ದೇವರಾಜ್ ಅಂಡ್ ಟೀಂ ದೇವೇಗೌಡ ಪೆಟ್ರೋಲ್ ಬಂಕ್ಗೆ ಹೋಗಿದ್ದಾರೆ. ಅಲ್ಲಿ ಎರಡು ಲೀಟರ್ ಪೆಟ್ರೋಲ್ ಖರೀದಿಸಿದ್ದಾರೆ. ಹೋಟೆಲ್ ಪಕ್ಕದಲ್ಲಿಯೇ ಇರುವ ಸಿಬ್ಬಂದಿ ವಾಸವಾಗಿರೋದನ್ನು ತಿಳಿದ ದೇವರಾಜ್ ಆಂಡ್ ಟೀಂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಪ್ರಾಣ ಉಳಿಸಿಕೊಂಡ ಹೋಟೆಲ್ ಸಿಬ್ಬಂದಿ
ಬೆಂಕಿ ತಗುಲುತ್ತಿದ್ದಂತೆ ಎಚ್ಚರಗೊಂಡ ಹೋಟೆಲ್ ಸಿಬ್ಬಂದಿ ರೂಮ್ನಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮನೆ ಬಾಗಿಲು, ಕಿಟಕಿಗೆ ಬೆಂಕಿ ತಗುಲಿದೆ. ಪ್ರಾಣ ಉಳಿಸಿಕೊಂಡ ಹೋಟೆಲ್ ಸಿಬ್ಬಂದಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: CM Bommai: ರಾಷ್ಟ್ರೀಯ ನಾಯಕರೇ ಬಂದು ಪ್ರಚಾರ ಮಾಡ್ತಾರೆ, ಆದರೂ ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷನ್!
ಇಬ್ಬರ ಬಂಧನ, ಓರ್ವ ಎಸ್ಕೇಪ್
ಹೋಟೆಲ್ ಸಿಬ್ಬಂದಿ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರ ಪೈಕಿ ದೇವರಾಜ್ ಮತ್ತು ಗಣೇಶ್ ಎಂಬಾತನನ್ನು ಬಂಧಿಸಿದ್ದಾರೆ. ಘಟನೆ ಬಳಿಕ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೇಕಲ್ನಲ್ಲಿ ಸರಗಳ್ಳತನ
ಆನೇಕಲ್ನಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದು (Chain Snatch) ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದಾರೆ. ಆನೇಕಲ್ ಪಟ್ಟಣದ ಶಿವಾಜಿ ಸರ್ಕಲ್ ಬಳಿ ಘಟನೆ ನಡೆದಿದ್ದು, ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.
ಇದನ್ನೂ ಓದಿ: Kalaburagi Railway Station: ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಡಿಸೆಂಬರ್ 12ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾರ್ವತಮ್ಮ ಸರ ಕಳೆದುಕೊಂಡ ಮಹಿಳೆ ಆಗಿದ್ದು, ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ