ಗದಗದಲ್ಲಿ ಲಾರಿ ಚಾಲಕರನ್ನು ಗುರಿಯಾಗಿಸಿಕೊಂಡು ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ಗ್ಯಾಂಗ್​

ತಾಲೂಕಿನ ಹುಲಕೋಟಿ, ಸಂಭಾಪುರ ಹಾಗೂ ಲಕ್ಕುಂಡಿ ಗ್ರಾಮದ ಸಮೀಪದ ಹೆದ್ದಾರಿ ಬಳಿ ದರೋಡೆಕೋರ ತಂಡ  ಸಕ್ರಿಯವಾಗಿದ್ದು, ಲಾರಿ ಚಾಲಕರನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸುತ್ತಿದ್ದಾರೆ. 

ಲಾರಿ

ಲಾರಿ

  • Share this:
ಗದಗ (ಡಿ. 29): ದೇಶದೆಲ್ಲೆಡೆ ನಿರ್ಭಿತಿಯಿಂದ ಲಾರಿ ಚಲಾಯಿಸುವ ಚಾಲಕರು ಈಗ ಜಿಲ್ಲೆಗೆ ಪ್ರವೇಶ ಮಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರಣ ದರೋಡೆಕಾರರ ಹಾವಳಿ. ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲೆಯನ್ನು ಪ್ರವೇಶ ಮಾಡಿದರೆ ಸಾಕು ದರೋಡೆಕೋರರು ಲಾರಿ ಚಾಲಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು ಚಾಲಕರಲ್ಲಿ ನಡುಕ ಹುಟ್ಟಿಸುತ್ತಿದೆ.  ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪ್ರತಿನಿತ್ಯ ಸಾವಿರಾರು ಲಾರಿಗಳು ಸಂಚಾರ ಮಾಡುತ್ತವೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಲಾರಿ ಚಾಲಕರು ಭಯವಿಲ್ಲದೆ ಸಂಚಾರ ಮಾಡುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ  ಲಾರಿ ಚಾಲಕರು ಜೀವವನ್ನು ಕೈಯಲಿ ಹಿಡಿದುಕೊಂಡು ಸಂಚಾರ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.  ತಾಲೂಕಿನ ಹುಲಕೋಟಿ, ಸಂಭಾಪುರ ಹಾಗೂ ಲಕ್ಕುಂಡಿ ಗ್ರಾಮದ ಸಮೀಪದ ಹೆದ್ದಾರಿ ಬಳಿ ದರೋಡೆಕೋರ ತಂಡ  ಸಕ್ರಿಯವಾಗಿದ್ದು, ಲಾರಿ ಚಾಲಕರನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸುತ್ತಿದ್ದಾರೆ. 

ರಾತ್ರಿ ಸಮಯದಲ್ಲಿ ನಡೆಯುತ್ತಿರುವ ಈ ದಾಳಿಗೆ ಜಿಲ್ಲೆಯ ಜನರು ಬೆಚ್ಚಿದ್ದಾರೆ. ಮೊನ್ನೆ ಕೂಡಾ ರಾತ್ರೋರಾತ್ರಿ ದುಷ್ಕರ್ಮಿಗಳ‌ ತಂಡ ಹುಲಕೋಟಿ ಗ್ರಾಮದ ಬಳಿ ಲಾರಿ ಸೈಡಿಗೆ ಹಾಕಿ ವಿಶ್ರಾಂತಿ ಪಡೆಯುವಾಗ, ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದ ವಿಜಯಕುಮಾರ್ ಎನ್ನುವ ಚಾಲಕನ ಮೇಲೆ‌ ಮಾರಣಾಂತಿಕವಾಗಿ ಹಲ್ಲೆ‌ ಮಾಡಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಹಾಗೂ ಹಣವನ್ನು ದೊಚ್ಚಿಕೊಂಡು ಪರಾರಿಯಾಗಿದ್ದಾರೆ. ಹೀಗೆ ರಾತ್ರೋರಾತ್ರಿ ಲಾರಿ ಚಾಲಕ ಮೇಲೆ ದಾಳಿ ಮಾಡುತ್ತಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಲಾರಿ ಚಾಲಕ ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ: ಮಗಳ ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಟ ರಮೇಶ್

ಇನ್ನೂ ಸಂಭಾಪುರ ಗ್ರಾಮದ ಜೀವನ ಸಾಬ್ ಬುದಿಹಾಳ ಎನ್ನುವ ಲಾರಿ ಚಾಲಕ ಮೇಲೆ ಹಲ್ಲೆ ಮಾಡಿ‌ ಮೊಬೈಲ್ ಹಾಗೂ ಹಣವನ್ನು ದೊಚ್ಚಿಕೊಂಡು ಹೋಗಿದ್ದಾರೆ. ಲಾರಿಯ ಗ್ಲಾಸ್ ಒಡೆದು ಲಾರಿ ಚಾಲಕನಿಗೆ ಜೀವ ಬೆದರಿಕೆ ಹಾಕಿ ನಾಪತ್ತೆಯಾಗಿದ್ದಾರೆ. ಕೆಲವು ಲಾರಿ ಚಾಲಕರು ಗದಗ ಶಹರ ಹಾಗೂ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಲಾರಿ ಚಾಲಕರ ಕುತ್ತಿಗೆ ಹರಿತವಾದ ಆಯುಧ ಹಿಡಿದುಕೊಂಡು ಲಾರಿ ಚಾಲಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕೂಡಲೇ ಪೊಲೀಸರು ಲಾರಿ ಚಾಲಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವ ‌ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಚಾಲಕರು  ಒತ್ತಾಯ ಮಾಡಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Published by:Seema R
First published: