• Home
  • »
  • News
  • »
  • state
  • »
  • Crime News: ಬೇರೊಬ್ಬನ ಜೊತೆ ಗೆಳತಿಯ ಪ್ರೀತಿ; ಅಮಾಯಕನ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ

Crime News: ಬೇರೊಬ್ಬನ ಜೊತೆ ಗೆಳತಿಯ ಪ್ರೀತಿ; ಅಮಾಯಕನ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ನೇಹಿತನ ಜೊತೆ ನಿಂತಿದ್ದ ದೀಪು ಮೇಲೆ ಮಂಜೇಶ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಸಂಬಂಧ ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Share this:

ಬೆಂಗಳೂರಿನ ಮಾಗಡಿ ರಸ್ತೆಯ (Magadi  Road, Bengaluru) ಬಾರ್ ಬಳಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು (Police) ಓರ್ವನನ್ನು ಬಂಧಿಸಿದ್ದು (Accused Arrest), ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಬಾರ್ ಬಳಿ ನಡೆದ ಹಲ್ಲೆಯ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕಣ್ಣಿನಲ್ಲಿ (CCTV Camera) ಸೆರೆಯಾಗಿವೆ. ತನ್ನ ಗೆಳತಿಯೊಂದಿಗೆ ಜಗಳ ಮಾಡ್ಕೊಂಡಿದ್ದ ಪಾಗಲ್ ಪ್ರೇಮಿ ಮತ್ತು ಆತನ ಗೆಳೆಯರು ಅಪರಿಚಿತನ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು. ಸದ್ಯ ಪೊಲೀಸರು ಪಾಗಲ್ ಪ್ರೇಮಿ ಮಂಜೇಶ್ ಎಂಬಾತನನ್ನು ಬಂಧಿಸಿದ್ದಾರೆ. ದೀಪು ಹಲ್ಲೆಗೊಳಗಾದ ಯುವಕ. ಮಂಜೇಶ್ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ ಯುವತಿ ಬೇರೆ ಯುವಕನನ್ನು ಪ್ರೀತಿಸುತ್ತಿದ್ದಳು.


ಈ ವಿಚಾರ ತಿಳಿದ ಮಂಜೇಶ್, ತನ್ನ ಗೆಳತಿ ಪ್ರೀತಿಸುತ್ತಿದ್ದ ಯುವಕನನ್ನು ಭೇಟಿಯಾಗಲು ಹೇಳಿದ್ದನು. ಅದೇ ಸ್ಥಳದಲ್ಲಿ ಸ್ನೇಹಿತನ ಜೊತೆ ನಿಂತಿದ್ದ ದೀಪು ಮೇಲೆ ಮಂಜೇಶ್ ಆಂಡ್ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಸಂಬಂಧ ಮಾಗಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


5 ಎಕರೆ 11 ಗುಂಟೆ ಜಾಗಕ್ಕೆ ಗುರೂಜಿ ಕೊಲೆ


ಹುಬ್ಬಳ್ಳಿ ಯಲ್ಲಿ  ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದಲ್ಲಿ ಪೊಲೀಸರು 840 ಪುಟಗಳ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ಮಹತ್ವದ ಅಂಶಗಳು ಬಹಿರಂಗವಾಗಿದ್ದು, ಬೇನಾಮಿ ಆಸ್ತಿ ಆರೋಪಿ ಮಹಾಂತೇಶ್ ಹೆಸರಿನಲ್ಲಿ ಇರಲಿಲ್ಲ. 5 ಎಕರೆ11 ಗುಂಟೆ ಜಮೀನು  ವಿಚಾರವೇ ಗುರೂಜಿ ಕೊಲೆಗೆ ಮುಖ್ಯ ಕಾರಣ ಎಂಬ ಮಾಹಿತಿ ಚಾರ್ಜ್​ ಶೀಟ್​ನಲ್ಲಿದೆ.


ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಜಮೀನು ಬಸವರೆಡ್ಡಿ ಎಂಬವರ ಹೆಸರಿನಲ್ಲಿತ್ತು. ಬಸವರೆಡ್ಡಿ ಕೂಡ ಸರಳವಾಸ್ತು ಕಂಪನಿಯ ಹಳೇ ಉದ್ಯೋಗಿ ಎಂದು ತಿಳಿಸಿದೆ.


Gang attack on youth case one arrested mrq
ಚಂದ್ರಶೇಖರ್ ಗುರೂಜಿ


ಅಧಿಕಾರಿ ಕಾರು ಮೇಲೆ ಆ್ಯಸಿಡ್​ ಮೊಟ್ಟೆ


ರಾಮನಗರದ ಚನ್ನಪಟ್ಟಣದ ಸಿಂಗರಾಜಿಪುರ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿ ಕೊಲೆಗೆ ಯತ್ನ ನಡೆದಿದೆ. ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಕ ಅಧಿಕಾರಿ ಹನುಮಯ್ಯ, ಚನ್ನಪಟ್ಟಣದ ಅರಳಾಳುಸಂದ್ರ - ಸಿಂಗರಾಜಿಪುರ ರಸ್ತೆಯಲ್ಲಿ ಕಾರಿಗೆ ಆಸಿಡ್‌ ಮೊಟ್ಟೆ ಹೊಡೆದಿದ್ದಾರೆ ಕಿಡಿಗೇಡಿಗಳು. ಕಾರು ಪಕ್ಕಕ್ಕೆ ನಿಲ್ಲಿಸುತ್ತಿದ್ದಂತೆ ಹಲ್ಲೆ ಮಾಡಿದ್ದಾರೆ. ಗಾಯಾಳು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಡಲಾಗಿದೆ.


ಪೇಂಟರ್​ ಕೊಲೆ ಕೇಸ್​ ರೀ ಓಪನ್​


ಕೋಲಾರದ ಮುಳಬಾಗಿಲು ನಗರದಲ್ಲಿ ನಡೆದಿದ್ದ ಪೇಂಟರ್ ರಮೇಶ್ ಕೊಲೆ ಕೇಸ್ ರೀ ಓಪನ್​ ಆಗಿದೆ. ಮರು ಮರಣೋತ್ತರ ಪರೀಕ್ಷೆ ನಡೆಸಲು ಶವ ಹೊರತೆಗೆದಿದ್ದಾರೆ. ಕೋಲಾರದ ಮುಳಬಾಗಿಲು ನಗರ ಹೊರವಲಯದಲ್ಲಿ 2015 ರ  ಏಪ್ರಿಲ್ 30 ರಂದು ಸುಪಾರಿ ಕೊಲೆ ನಡೆದಿತ್ತು. ಪೇಂಟರ್ ರಮೇಶ್ ಮರಣೋತ್ತರ ಪರೀಕ್ಷೆಗಾಗಿ ಕೆರೆಯಲ್ಲಿನ ನೀರು ಖಾಲಿ ಮಾಡಿದ್ದಾರೆ ಪೊಲೀಸರು. 7 ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಕೋಲಾರ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.


ಇದನ್ನೂ ಓದಿ: Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?


ಮಾವನನ್ನೇ ಕೊಂದ ಅಳಿಯ!


ಮಗುವನ್ನ ಕೊಡ್ತಿಲ್ಲ ಅಂತ ಮಾವನನ್ನೇ ಅಳಿಯ ಕೊಲೆ ಮಾಡಿದ್ದಾನೆ. 65 ವರ್ಷದ ಸುಬ್ಬರಾಯಪ್ಪನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಳಿಯ ಕೊಲೆ ಮಾಡಿದ್ದಾನೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಬಳಿ ನಡೆದಿದೆ.


Gang attack on youth case one arrested mrq
ಸಾಂದರ್ಭಿಕ ಚಿತ್ರ


ಇನ್ನು ಆರು‌ ತಿಂಗಳ ಹಿಂದೆ ಗಂಡ ಬೇರೊಬ್ಬರ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ ಅಂತ ತವರು ಮನೆಗೆ ಪತ್ನಿ ಬಂದಿದ್ಲು.  ಆದ್ರೆ ಮಗುವನ್ನ ತನ್ನ ಜೊತೆ ಕಳಿಸುವಂತೆ ಪೀಡಿಸುತ್ತಿದ್ದ ಪತಿ. ಇದೇ ವಿಚಾರಕ್ಕೆ ಮಾವನನ್ನು ಅಳಿಯ ಕೊಂದಿದ್ದಾನೆ.


ಇದನ್ನೂ ಓದಿ:  Jayadeva Hospital: ಜಯದೇವ ಆಸ್ಪತ್ರೆಯ ವರದಿ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು


ಮೂವರು ಮಕ್ಕಳು ಮಿಸ್ಸಿಂಗ್!


ಬೆಂಗಳೂರಿನಲ್ಲಿ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಇದೇ ಅಕ್ಟೋಂಬರ್ 3ರಂದು ಕಲಾಸಿಪಾಳ್ಯದ ಆರ್ ವಿ ರಸ್ತೆಯಿಂದ ಮಕ್ಕಳು ಕಾಣೆಯಾಗಿದ್ದಾರೆ. 15 ವರ್ಷ, 5 ವರ್ಷ ಹಾಗೂ 1 ವರ್ಷದ ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಹುಡುಕಾಟ ನಡೆಸಿದ್ದಾರೆ.

Published by:Mahmadrafik K
First published: