Hubballi: ಬಿರಿಯಾನಿ ತಿನ್ನೋಕೆ ಬಂದವರು ಜೈಲು ಪಾಲಾದ್ರು; ಗುರಾಯಿಸಿದ್ದ ಅಂತ ಮಾರಣಾಂತಿಕ ಹಲ್ಲೆ

ಗುರಾಯಿಸಿ ನೋಡಿದ ಅಂತ ಗ್ಯಾಂಗ್​ವೊಂದು ಯುವಕನ (Youth Assault) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಬಿರಿಯಾನಿ (Biryani) ತಿನ್ನೋಕೆ ಹೋದವರು ಹಲ್ಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.

ಅಭಿಷೇಕ್

ಅಭಿಷೇಕ್

  • Share this:
ಹುಬ್ಬಳ್ಳಿ: ಇನ್ನೇನು ಹುಬ್ಬಳ್ಳಿ (Hubballi) ಶಾಂತವಾಯಿತು ಅನ್ನುವಷ್ಷರೊಳಗಾಗಿ ಏನಾದರೂ ಒಂದು ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲಿಯೂ ಕ್ಷುಲ್ಲಕ ಕಾರಣಕ್ಕೆ ಹಲ್ಲೆ (Assault), ಕೊಲೆಗಳು (Murders) ನಡೆದು ಹೋಗುತ್ತಿದ್ದು, ನಾಗರಿಕರನ್ನು ಭಯಭೀತರನ್ನಾಗಿಸಿವೆ. ಕೇವಲ ಗುಟ್ಕಾ ಕೊಡಿಸಲಿಲ್ಲ ಅಂತ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಕೊಲೆಯಾಗಿತ್ತು. ಇದೀಗ ಗುರಾಯಿಸಿ ನೋಡಿದ ಅಂತ ಗ್ಯಾಂಗ್​ವೊಂದು ಯುವಕನ (Youth Assault) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಬಿರಿಯಾನಿ (Biryani) ತಿನ್ನೋಕೆ ಹೋದವರು ಹಲ್ಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಚಾಕು ಮತ್ತು ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ನಡೆದಿದೆ.

ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ರು

ಇಂದಿರಾನಗರ ನಿವಾಸಿ ಯಶವಂತ್ ಭಂಡಾರಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹೋಟೆಲ್​ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಯಶವಂತ್ ಭಂಡಾರಿ ಬಂದಿದ್ದ. ಅದೇ ವೇಳೆ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಸೆಟ್ಲ್ ಮೆಂಟ್ ಏರಿಯಾದ ಅಭಿಷೇಕ್ ಜಾಧವ್ ಬಂದಿದ್ದಾನೆ.

ಇದನ್ನೂ ಓದಿ:  Mysore: ಮಾಜಿ ಸಿಎಂ ಸಿದ್ದರಾಮಯ್ಯ ಕಿರಿಯ ಸಹೋದರ ರಾಮೇಗೌಡ ನಿಧನ

ಗುರಾಯಿಸಿ ನೋಡಿದ್ದೀ ಅಂತ ಜಗಳ ಆರಂಭಿಸಿದ ಅಭಿಷೇಕ್ ಜಾಧವ್ ತಲ್ವಾರ್ ತೆಗೆದುಕೊಂಡು ಹಣೆ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಹತ್ತಕ್ಕೂ ಹೆಚ್ಚು ಸಹಚರರು ಬಾಟಲಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

Gang attack on youth 12 arrested in hubballi saklb mrq
ಸಾಂದರ್ಭಿಕ ಚಿತ್ರ


ಕಿಮ್ಸ್ ಆಸ್ಪತ್ರೆಗೆ ದಾಖಲು

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಶವಂತ್​​ನನ್ನು ಆತನ ಸಹೋದರರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮ್ಮನೆ ನಿಂತವನ ಮೇಲೆ ಅಭಿಷೇಕ್ ಮೊದಲು ಹಲ್ಲೆ ಮಾಡಿದ. ನಂತರ ಆತನ ಸಹಚರರೂ ದಾಳಿ ಮಾಡಿದರು.

ಸುಮ್ಮನೆ ನಿಂತವನ ಮೇಲೆ 15 ರಿಂದ 20 ಜನರಿದ್ದ ಗುಂಪು ಹಲ್ಲೆ ಮಾಡಿದೆ. ಅಭಿಷೇಕ್ ಹಾಗೂ ತನ್ನ ಮಧ್ಯೆ ಯಾವುದೇ ರೀತಿಯ ದ್ವೇಷವಿರಲಿಲ್ಲ. ಕುಡಿದ ಮತ್ತಿನಲ್ಲಿ ಹೀಗೆ ಹಲ್ಲೆ ಮಾಡಿದ್ದಾರೆ ಎಂದು ಯಶವಂತ್ ಭಂಡಾರಿ ಆರೋಪಿಸಿದ್ದಾನೆ.

12 ಜನರ ಬಂಧನ

ಸ್ಥಳಕ್ಕೆ ಕಸಬಾಪೇಟೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಭಿಷೇಕ್ ಜಾಧವ್ ಸೇರಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನೆಯಲ್ಲಿ ಗಾಂಜಾ ಬೆಳೆದಾತನ ಬಂಧನ

ಧಾರವಾಡ ಜಿಲ್ಲೆ ಕಲಘಟಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲಪ್ಪ ಹನಮಂತಪ್ಪ ಸೋಮನಕೊಪ್ಪ ಬಂಧಿತ ಆರೋಪಿಯಾಗಿದ್ದಾನೆ.

20 ಸಾವಿರ ಮೌಲ್ಯದ ಗಾಂಜಾ ವಶಕ್ಕೆ

ಕಲ್ಲಪ್ಪ ತನ್ನ ಮನೆಯ ಜಾಗದಲ್ಲೇ ಗಾಂಜಾ ಬೆಳೆದಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಬಂಧಿತ ಆರೋಪಿ ಮನೆಯಲ್ಲಿ ಬೆಳೆದಿದ್ದ 20 ಸಾವಿರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Gang attack on youth 12 arrested in hubballi saklb mrq
ಸಾಂದರ್ಭಿಕ ಚಿತ್ರ


Idgah Maidan: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ನಿನ್ನೆಯಷ್ಟೇ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಲು ಕರ್ನಾಟಕ ಹೈಕೋರ್ಟ್​ ಗ್ರೀನ್​ ಸಿಗ್ನಲ್ ನೀಡಿದೆ. ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.
Published by:Mahmadrafik K
First published: