Bengaluru: ಬಾಂಗ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ ಮಾಡಿ ಕೊಡ್ತಿದ್ದ ಗ್ಯಾಂಗ್ ಅಂದರ್; ಕಳ್ಳರ ಪ್ಲ್ಯಾನ್​ ಏನು ಗೊತ್ತಾ?

ಅರೋಪಿ ಆತನ ಬ್ಯಾಂಕ್ ಖಾತೆ ಹಾಗೂ ಹವಾಲ ಮೂಲಕ ಕಳೆದ 1 ವರ್ಷದಲ್ಲಿ 5 ಕೋಟಿ ಹಣದ ವಹಿವಾಟು ನಡೆಸಿರೊ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಭಾರತೀಯ ರೂಪಾಯಿ ಯನ್ನು ವಿವಿಧ ರೀತಿಯಲ್ಲಿ ಚನ್ನೈ. ಕೊಲ್ಕತ್ತಾ. ಪಂಜಾಬ್ ಹಾಗು ದೇಶದ ವಿವಿಧ ಬ್ಯಾಂಕ್ ಗಳ ಮೂಲಕ  ಹಣವನ್ನು ಬಾಂಗ್ಲಾದೇಶಕ್ಕೆ  ಕಳಿಸುತಿದ್ದ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ 12): ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗ್ಬೇಕು ಅಂದ್ರೆ ಅದಕ್ಕೆ ವೀಸಾ , ಪಾಸ್‌ಪೋರ್ಟ್‌‌‌‌ (Visa, Passport) ಬೇಕು. ಇದ್ಯಾವುದು ಇಲ್ಲದೆ ಹಾಗೆ ನುಸುಳಿ ಹೋದ್ರೆ ಅದು ಅಕ್ರಮ ಪ್ರವೇಶ. ಜೊತೆಗೆ ಆ ದೇಶನ ಭದ್ರತೆಗೂ ಕುತ್ತು. ಈಗ ರಾಷ್ಟ್ರದ ಭದ್ರತೆಗೆ ಕುತ್ತಾಗಿರೋದು ಭಾರತಕ್ಕೆ, ಅದು ಬಾಂಗ್ಲಾದೇಶದಿಂದ (Bangladesh) ಅಕ್ರಮವಾಗಿ ಬಂದು ಅಕ್ರಮ ಕೆಲಸಗಳನ್ನು (Illegal Work) ಮಾಡ್ತಿರೊದ್ರಿಂದ.

ಬಾಂಗ್ಲದೇಶದಿಂದ ಅಕ್ರಮವಾಗಿ ಬಂದ ರಾಜ್ಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿ !

ಭಾರತದಲ್ಲಿ ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ಬಂದಿದ್ದಾರೆ ಅನ್ನೊದು ಗೊತ್ತಿರೊ ವಿಚಾರ ಅದ್ರೆ ಈ ಗ್ಯಾಂಗ್ ಮಾಡಿರೊ ಕೃತ್ಯ ಹಾಗು ಈ ಗ್ಯಾಂಗ್ ಕಾರ್ಯ ನಿರ್ವಹಿಸುತಿದ್ದ ರೀತಿ ನೋಡಿದ್ರೆ ನಿಜಕ್ಕು ಶಾಕ್ ಅಗುತ್ತೆ. ಕಳೆದ ಏಪ್ರಿಲ್ ನಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಎಟಿಎಂ ಕಳ್ಳತನ ಆಗುತ್ತೆ ಆಗ ಕೇಸ್ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭ ಮಾಡಿ ಕಳ್ಳತನ ಮಾಡಿದ್ದ ಒರ್ವ ಇಸ್ಮಾಯಿಲ್ ಎಂಬ ಅರೋಪಿಯನ್ನು ಲಾಕ್  ಮಾಡ್ತಾರೆ,  ಅರೋಪಿಯನ್ನು ಅರೋಪಿ ಎಟಿಎಂ ನಲ್ಲಿ ಕದ್ದಿದ್ದ ಹದಿನೆಂಟು ಲಕ್ಷ ಹಣ ಎಲ್ಲಿ ಅಂದಾಗ ಶಾಕ್ ಅಗುವಂತಹ ಉತ್ತರ ಹೊರಬಂದಿದೆ.

ಖತರ್ನಾಕ್​ ಗ್ಯಾಂಗ್​ ಅಂದರ್​

ಅದೇನು ಅಂದ್ರೆ ಕದ್ದ ಹಣ ಕೆಲವೇ ದಿನದಲ್ಲಿ ಬಾಂಗ್ಲಾದೇಶ ತಲುಪಿತ್ತು. ಯಾಕೆ ಆಂತ ವಿಚಾರಿಸಿದಾಗ ಬಹುದೊಡ್ಡ್ ರಾಕೇಟ್ ಒಂದು ಹೊರಗೆ ಬಂದಿದೆ , ಗ್ಯಾಂಗ್ ನಲ್ಲಿ ಇದ್ದ ಸುಮಾರ್ ಒಂಬತ್ತು ಜನರಾದ ಸೈದುಲ್ ಅನಕೂನ್. ಶಾಹಿದ್ ಮಹಮದ್ .ಅಬ್ದೂಲ್. ಆಯೀಶಾ. ಸೈಯದ್ ಮನ್ಸೂರ್. ಅಮೀನ್ ಸೇಠ್. ಇಸ್ತಾಕ್ ಪಾಷಾ. ಮಹಮದ್ ಇದಾಯತ್. ಸುಹೇಲ್ ಮನ್ಸೂರ್. ಮತ್ತು ಅಬ್ದುಲ್ ಅಲೀಮ್  ರನ್ನು ಹಂತ ಹಂತವಾಗಿ ಲಾಕ್ ಮಾಡಲಾಗಿದೆ

ಇದನ್ನೂ ಓದಿ: Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

3 ಬ್ಯಾಂಕ್ ಖಾತೆಯಿಂದ ಒಂದು ವರ್ಷದಲ್ಲಿ 5 ಕೋಟಿ ಹಣ ವಹಿವಾಟು!

ಅಷ್ಟಕ್ಕು ತ್ರಿಪುರಾ ಗಡಿಯಿಂದ ಅಕ್ರಮವಾಗಿ ನುಸುಳಿ ಭಾರತಕ್ಕೆ ಬರ್ತಿದ್ದ ಅರೋಪಿಗಳಿಗೆ ಶಾಹಿದ್ ಮತ್ತು ಅಮೀನ್ ಸೇಠ್  ನಕಲಿ ದಾಖಲೆಗಳನ್ನು  ತಯಾರು ಮಾಡ್ತಿದ್ರು, ನಕಲಿ ದಾಖಲೆ ಗಳನ್ನು ಬಳಸಿ ಅಸಲಿ ಆಧಾರ್ ಕಾರ್ಡ್ ಪಡೆಯುತಿದ್ರು ಎಷ್ಟರ ಮಟ್ಟಗೆ ಅಂದ್ರೆ  ದಾಖಲಾತಿಗಳನ್ನು ಸೃಷ್ಠಿ  ಮಾಡಲು . ಬಿಬಿಎಂಪಿ ವೈದ್ಯಾಧಿಕಾರಿಯ ಸೀಲ್ ಮಾಡಿಸಿದ್ರು.

31  ಅಧಾರ್ ಕಾರ್ಡ್, 13 ಪಾನ್ ಕಾರ್ಡ್,  28  ವೋಟರ್ ಐಡಿ 

ನಕಲಿ ಸೀಲು ಬಳಸಿ ಆಧಾರ್ ಗೆ  ಗೆಜೆಟೆಡ್  ಅಧಿಕಾರಿ ಎಂದು ಸಹಿ ಹಾಕುತಿದ್ರು, ಬೌರಿಂಗ್  ವಾಣಿವಿಲಾಸ ಅಸ್ಪತ್ರೆ ಹಾಗು ಬಿಬಿಎಂಪಿ ಅರೋಗ್ಯ ಕೇಂದ್ರದ ಸೀಲ್ ಗಳು ಈಗ ಸೀಜ್ ಅಗಿವೆ ಅರೋಪಿಗಳ ಬಳಿ  26  ನಕಲಿ ಅಧಾರ್ ಲೆಟರ್ ಹೆಡ್. ಐದು ಸೀಲು 31  ಅಧಾರ್ ಕಾರ್ಡ್, 13 ಪಾನ್ ಕಾರ್ಡ್,  28  ವೋಟರ್ ಐಡಿ  ಹದಿನಾರು ಮೊಬೈಲ್ 4 ಈಶ್ರಮ್ ಕಾರ್ಡ್.. ಐದು ಡಿ ಎಲ್. ಮೂರು ಆಯುಷ್ಮಾನ್ ಕಾರ್ಡ್ ಮೆಡಿಕಲ್ ಅಗಿರುವ 92  ನಕಲಿ ಸರ್ಟಿಫಿಕೇಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: CM Ibrahim: ಬಿಜೆಪಿಗೆ ಮತ ಹಾಕಿಸಿದ್ದೇ ಡಿಕೆಶಿ, ಸಿದ್ದು; ಯಡಿಯೂರಪ್ಪ ಜೊತೆ ನಡೆದಿದೆ ಡೀಲ್​- ಇಬ್ರಾಹಿಂ ಆರೋಪ

ಒಂದು ವರ್ಷದಲ್ಲಿ 5 ಕೋಟಿ ಹಣದ ವಹಿವಾಟು

ಈ ರಾಕೆಟ್ ನ ಪ್ರಮುಖ ಅರೋಪಿ ಆತನ ಬ್ಯಾಂಕ್ ಖಾತೆ ಹಾಗು ಹವಾಲ ಮೂಲಕ ಕಳೆದ ಒಂದು ವರ್ಷದಲ್ಲಿ 5 ಕೋಟಿ ಹಣದ ವಹಿವಾಟು ನಡೆಸಿರೊ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಭಾರತೀಯ ರೂಪಾಯಿ ಯನ್ನು ವಿವಿಧ ರೀತಿಯಲ್ಲಿ ಚನ್ನೈ. ಕೊಲ್ಕತ್ತಾ. ಪಂಜಾಬ್ ಹಾಗು ದೇಶದ ವಿವಿಧ ಬ್ಯಾಂಕ್ ಗಳ ಮೂಲಕ  ಹಣವನ್ನು  ಬಾಂಗ್ಲಾದೇಶಕ್ಕೆ  ಕಳಿಸುತಿದ್ದ, ಸದ್ಯ ಹದಿಮೂರು ಬ್ಯಾಂಕ್ ಖಾತೆಗಳನ್ನು ಪ್ಗರೀಜ್ ಮಾಡಲಾಗಿದೆ.
ತನಿಖೆ ವೇಳೆ ಒಟ್ಟು 122. ಜನರು ಬಾಂಗ್ಲಾದೇಶ ದಿಂದ ಭಾರತಕ್ಕೆ ಬಂದಿರೋದು ಪತ್ತೆಯಾಗಿದೆ.
Published by:Pavana HS
First published: