ಫಿಲಂ ಚಾನ್ಸ್ ಕೊಡಿಸುವುದಾಗಿ ಹೇಳಿ ದುರ್ಬಳಕೆಗೆ ಯತ್ನ; ಮೂವರು ಬಂಧನ; ಬಾಲಕಿ ರಕ್ಷಣೆ

ಆರೋಪಿ ಸತೀಶ್ ಪಾಟೀಲ್ ಫೇಸ್ಬುಕ್​ನಲ್ಲಿ ಶ್ರೀಲಂಕಾದ ಬಾಲಕಿಯನ್ನು ಪರಿಚಯ ಮಾಡಿಕೊಂಡಿರುತ್ತಾರೆ. ಎರಡು ವರ್ಷಗಳಿಂದ ಆತ ಮೆಸೆಂಜರ್​ನಲ್ಲಿ ಬಾಲಕಿ ಜೊತೆ ಚ್ಯಾಟ್ ಮಾಡಿಕೊಂಡಿರುತ್ತಾನೆ. ತನಗೆ ಬಾಲಿವುಡ್ ಫಿಲಂ ಇಂಡಸ್ಟ್ರಿಯಲ್ಲಿ ಒಳ್ಳೆಯ ಕಾಂಟ್ಯಾಕ್ಟ್ ಇದೆ.


Updated:January 27, 2018, 2:20 PM IST
ಫಿಲಂ ಚಾನ್ಸ್ ಕೊಡಿಸುವುದಾಗಿ ಹೇಳಿ ದುರ್ಬಳಕೆಗೆ ಯತ್ನ; ಮೂವರು ಬಂಧನ; ಬಾಲಕಿ ರಕ್ಷಣೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜ. 27): ಫೇಸ್ಬುಕ್ ಬಳಸುವ ಮುನ್ನ ಬಾಲಕಿಯರೇ ಹುಷಾರ್..! ಸ್ವಲ್ಪ ಯಾಮಾರಿದರೆ ನಿಮ್ಮ ಜೀವನವೇ ಹಾಳಾಗಿಬಿಡಬಹುದು. ಬಣ್ಣದ ಲೋಕದ ಆಸೆ ಹೊಂದಿರುವ ಬಾಲಕಿಯರಿಗೆ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಆಮಿಷವೊಡ್ಡಿ ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ಬಹಳ ಬಾರಿ ನಡೆದಿವೆ. ಈಗ ಬೆಂಗಳೂರಿನಲ್ಲಿ ಇಂಥ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬಾಲಿವುಡ್​ನಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಬಾಲಕಿಯೊಬ್ಬಳನ್ನು ಕಳ್ಳ ಸಾಗಾಣಿಕೆ ಜಾಲಕ್ಕೆ ಸಿಲುಕಿಸಲು ಯತ್ನಿಸಿದ ಘಟನೆ ನಡೆದಿದೆ. ಎನ್​ಜಿಒ ಸಂಘಟನೆಯೊಂದರ ಮೂಲಕ ಪೊಲೀಸರು ಶ್ರೀಲಂಕಾ ಹುಡುಗಿಯನ್ನು ಈ ಜಾಲದಿಂದ ರಕ್ಷಿಸಿದ್ದಾರೆ. ಉಪ್ಪಾರಪೇಟೆ ಠಾಣೆ ಪೊಲೀಸರು ಸತೀಶ್ ಪಾಟೀಲ್(35), ರಮೇಶ್(40) ಮತ್ತು ಶಂಭು (20) ಈ ಮೂವರನ್ನು ಬಂಧಿಸಿದ್ದಾರೆ.

ಆರೋಪಿ ಸತೀಶ್ ಪಾಟೀಲ್ ಫೇಸ್ಬುಕ್​ನಲ್ಲಿ ಶ್ರೀಲಂಕಾದ ಬಾಲಕಿಯನ್ನು ಪರಿಚಯ ಮಾಡಿಕೊಂಡಿರುತ್ತಾರೆ. ಎರಡು ವರ್ಷಗಳಿಂದ ಆತ ಮೆಸೆಂಜರ್​ನಲ್ಲಿ ಬಾಲಕಿ ಜೊತೆ ಚ್ಯಾಟ್ ಮಾಡಿಕೊಂಡಿರುತ್ತಾನೆ. ತನಗೆ ಬಾಲಿವುಡ್ ಫಿಲಂ ಇಂಡಸ್ಟ್ರಿಯಲ್ಲಿ ಒಳ್ಳೆಯ ಕಾಂಟ್ಯಾಕ್ಟ್ ಇದೆ. ನಿನಗೆ ಚಾನ್ಸ್ ಕೊಡಿಸುತ್ತೇನೆಂದು ಆ ಹುಡುಗಿಯನ್ನು ನಂಬಿಸುತ್ತಾನೆ. ಈತನ ಮಾತನ್ನು ನಂಬಿ ಈ ಅಮಾಯಕ ಹುಡುಗಿ ಲಂಕಾದಿಂದ ಬೆಂಗಳೂರಿಗೆ ಬರುತ್ತಾಳೆ. ಫೋಟೋ ಶೂಟ್ ಮಾಡಿಸಬೇಕೆಂದು ಹೇಳಿ ಈಕೆಯಿಂದ ಸಾಕಷ್ಟು ಹಣವನ್ನೂ ಈತ ಪೀಕಿಸಿಕೊಂಡಿರುತ್ತಾನೆ. ಮುಂಬೈ, ಹಾವೇರಿ ಹೀಗೆ ಹಲವಾರು ಸ್ಥಳಗಳಿಗೆ ಈ ಹುಡುಗಿಯನ್ನು ಕರೆದೊಯ್ದು ಬೇರೆ ರೀತಿಯಲ್ಲಿ ದುರ್ಬಳಕೆಗೆ ಯತ್ನಿಸಿರುತ್ತಾನೆ. ಆದರೆ, ಅದೃಷ್ಟವಶಾತ್, ಬಾಲಕಿಯ ಜೊತೆ ಆಕೆಯ ತಾಯಿ ಕೂಡ ಇದ್ದದ್ದರಿಂದ ಆಕೆ ಬಚಾವ್ ಆಗಿರುತ್ತಾಳೆ. ಆರೋಪಿಗಳು ಬಾಲಕಿಯಿಂದ ಇನ್ನಷ್ಟು ಹಣಕ್ಕಾಗಿ ಒತ್ತಾಯಿಸುತ್ತಿರುತ್ತಾರೆ. ಆದರೆ, ಹಣ ಕೊಡಲು ಇವರು ಒಪ್ಪುವುದಿಲ್ಲ. ಆಗ ಆರೋಪಿಗಳು ಇವರನ್ನು ಬಿಟ್ಟು ನಾಪತ್ತೆಯಾಗುತ್ತಾರೆ. ತಲಾಶ್ ಅಸೋಸಿಯೇಶನ್ ಎಂಬ ಎನ್​ಜಿಒ ಸಂಸ್ಥೆಯ ಮೂಲಕ ಸಂತ್ರಸ್ತರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
First published:January 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading