Ckikkamagaluru: ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ, ಚಿಕ್ಕಮಗಳೂರಿನಲ್ಲೊಂದು ಸಾಮರಸ್ಯ ಸಂದೇಶ!

ಮುಸ್ಲಿಂ ಸಮುದಾಯದಲ್ಲಿ ಮಹಿಳೆ ಮನೆಯಿಂದ ಹೊರಬಂದು ದುಡಿಯೋದಕ್ಕೆ ನಿರ್ಬಂಧವಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳೋದು ನಿಷಿದ್ಧ. ಆದರೆ ಇಲ್ಲಿನ ಗಣೇಶ ಮಂಡಳಿಗೆ ಈ ಮುಸ್ಲಿಂ ಮಹಿಳೆಯೇ ಅಧ್ಯಕ್ಷೆ. 13 ವರ್ಷದಿಂದ ಇವರು ವಿಘ್ನ ವಿನಾಶಕನ ಪೂಜೆ ಮಾಡ್ತಿದ್ದಾರೆ.

ಜುಬೇದಾರಿಂದ ಗಣೇಶ ಹಬ್ಬ ಆಚರಣೆ

ಜುಬೇದಾರಿಂದ ಗಣೇಶ ಹಬ್ಬ ಆಚರಣೆ

  • Share this:
ವಾದ-ವಿವಾದ, ಪ್ರತಿರೋಧಗಳ ಮಧ್ಯೆ ರಾಜ್ಯಾದ್ಯಂತ ಗೌರಿ-ಗಣೇಶ (Gowri Ganesha Festival) ಹಬ್ಬದ ಸಂಭ್ರಮ ಜೋರಾಗಿತ್ತು. ಈದ್ಗಾ ಮೈದಾನದಲ್ಲಿ (Idgah Maidan) ಗಣೇಶೋತ್ಸವ, ಸಾವರ್ಕರ್ (Veer Savarkar) ಗಣೇಶೋತ್ಸವ, ಅಪ್ಪು ಗಣೇಶೋತ್ಸವ ಹೀಗೆ ಈ ವರ್ಷ ನಾನಾ ರೂಪದಲ್ಲಿ ವಿಘ್ನ ವಿನಾಯಕನ ಹಬ್ಬ ನಡೆಯುತ್ತಿದೆ. ಆದರೆ ಕಾಫಿನಾಡ (Ckikkamagaluru) ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯೆಕ್ಷೆಯಾಗಿ ಗಣಪತಿ ಕೂರಿಸಿ ಪೂಜೆ (Prayer) ಮಾಡಿದ್ದಾರೆ. ಈ ಮೂಲಕ ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬ ಸಂದೇಶ ಸಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಾಮಾಜಿಕ ಸಾಮರಸ್ಯದ ಗಣೇಶೋತ್ಸವ ನಡೆದಿದೆ. ಪ್ರಸ್ತುತ ಕಾಲಘಟ್ಟಕ್ಕೆ ಪ್ರೇರಣದಾಯಕವಾದ ಈ ಕಥೆಯ ನಾಯಕಿಯೇ ಜುಬೇದಾ. ಮುಸ್ಲಿಂ ಮಹಿಳೆಯಾದ ಇವರು ಗಣಪತಿ ಪೂಜೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನವರಾದ ಜುಬೇದಾ, ಪ್ರಸ್ತುತ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯೂ ಹೌದು. ಅಂದಹಾಗೇ ಎನ್.ಆರ್.ಪುರ ತಾಲೂಕಿನ ರಾಜೀವ್ ನಗರದ ಗಣಪತಿ ಸೇವಾ ಸಮಿತಿಯಲ್ಲಿ ಕಳೆದ 13 ವರ್ಷಗಳಿಂದ ಇವರೇ ಅಧ್ಯಕ್ಷರು. ಇವರ ಅಧ್ಯಕ್ಷತೆಯಲ್ಲಿ ಈ ವರ್ಷವೂ ಕೂಡ ಗಣಪತಿಯನ್ನ ಪ್ರತಿಷ್ಠಾಪಿಸಿದ್ದಾರೆ.

Ganesha seva samiti muslim woman president at chikkamagaluru
ಗಣಪತಿ ಪೂಜೆಯಲ್ಲಿ ಜುಬೇದಾ


ಜುಬೇದಾರಿಂದ ಗಣಪತಿ ಪೂಜೆ
ಗಣೇಶ ಹಬ್ಬದ ವೇಳೆ ಜುಬೇದಾರವರೇ ಪೂಜೆ ಕೂಡ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಮಹಿಳೆ ಮನೆಯಿಂದ ಹೊರಬಂದು ದುಡಿಯೋದಕ್ಕೆ ನಿರ್ಬಂಧವಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳೋದು ನಿಷಿದ್ಧ. ಆದರೆ, ಇವರು ಸಮುದಾಯದ ಕಟ್ಟುಪಾಡುಗಳನ್ನ ವಿರೋಧಿಸಿ ಕಳೆದ ಎರಡು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು ಬಂದಿದ್ದಾರೆ.

Ganesha seva samiti muslim woman president at chikkamagaluru
ಸ್ಥಳೀಯರೊಂದಿಗೆ ಜುಬೇದಾ ಪೂಜೆ


13 ವರ್ಷಗಳಿಂದ ಗ್ರಾಮಸ್ಥರ ಜೊತೆಗೂಡಿ ಗಣೇಶ ಹಬ್ಬ ಆಚರಣೆ
ಕಳೆದ 13 ವರ್ಷಗಳಿಂದ ಗ್ರಾಮದ ಯುವಕರ ಜೊತೆಗೂಡಿ ಜುಬೇದಾರವರು ಗಣಪತಿ ಕೂರಿಸುತ್ತಿದ್ದಾರೆ. ಈ ಮೂಲಕ ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬ ಸಾಮಾಜಿಕ ಸಾಮರಸ್ಯದ ಸಂದೇಶವನ್ನ ಸಾರುತ್ತಿದ್ದಾರೆ. ನಮ್ಮ ಮನೆಯವರು ನಮಗೆ ಧರ್ಮದ ಕಟ್ಟುಪಾಡುಗಳನ್ನ ತುಂಬಿಲ್ಲ ಅಂತಾರೆ.

Ganesha seva samiti muslim woman president at chikkamagaluru
ಜುಬೇದಾ


ಇದನ್ನೂ ಓದಿ: ತುಳುನಾಡಲ್ಲಿ ಮೂಲತಃ ಗಣಪನ ಮೂರ್ತಿ ಪೂಜೆ ಇಲ್ಲವೇಕೆ?

ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ- ಜುಬೇದಾ
ನಾವು ಯುವಪೀಳಿಗೆಗೆ ಆ ಧರ್ಮದ ಕಟ್ಟುಪಾಡುಗಳನ್ನ ತುಂಬೋದು ಬೇಡ, ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ-ಸಾಮರಸ್ಯಕ್ಕೆ ಜಾತಿ-ಧರ್ಮಗಳ ಕಟ್ಟುಪಾಡುಗಳು ಅಡ್ಡಿಯಾಗಬಾರದು ಎಂದು ಯುವಜನತೆಗೆ ಮನವಿ ಮಾಡಿದ್ದಾರೆ.

ಎಲ್ಲಾ ಧರ್ಮದ ಹಬ್ಬಗಳ ಆಚರಣೆ
ಜುಬೇದಾ ಅವರ ಉತ್ತೇಜನದಿಂದ ರಾಜೀವ್ ನಗರದ ಎಲ್ಲಾ ಧರ್ಮದ ಯುವಕರು ಕೂಡ ಒಂದಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಭೇದ-ಭಾವವಿಲ್ಲ. ಇವರು ಕೇವಲ ಗಣಪತಿ ಹಬ್ಬವನ್ನಷ್ಟೆ ಅಲ್ಲದೆ ಎಲ್ಲಾ ಧರ್ಮದ ಎಲ್ಲಾ ಹಬ್ಬಗಳನ್ನ ಇದೇ ರೀತಿ ನಗರದ ಎಲ್ಲಾ ಹುಡುಗರ ಜೊತೆ ಸೇರಿ ಆಚರಿಸುತ್ತಾರೆ.

ಗಣೇಶನ ಜೊತೆ ಅಪ್ಪು ಫೋಟೋಗೂ ಪೂಜೆ
ಈ ವರ್ಷ ಗಣಪತಿ ಜೊತೆ ನಮ್ಮನ್ನೆಲ್ಲಾ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಫೋಟೋವನ್ನೂ ಗಣಪತಿ ಪಕ್ಕದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ. ಗಣಪತಿಯನ್ನ ಪ್ರತಿಷ್ಠಾಪಿಸಿ ಪೂಜೆ ಮಾಡಿ ಪ್ರಸಾದ ನೀಡುತ್ತಿದ್ದಾರೆ. ಮುಸ್ಲಿಂ ಮಹಿಳೆಯಾದರೂ ಇವರ ಈ ಕೆಲಸಕ್ಕೆ ಸ್ಥಳೀಯರು ಕೂಡ ಇವರಿಗೆ ಸಾಥ್ ನೀಡಿದ್ದಾರೆ.

ಹತ್ತಾರು ಅನಾಥಶವಗಳಿಗೆ ಅಂತ್ಯಸಂಸ್ಕಾರ
ಮುಸ್ಲಿಂ ಸಮುದಾಯಲ್ಲಿ ಮಹಿಳೆಯರು ಸ್ಮಶಾನಕ್ಕೆ ಹೋಗುವುದಿಲ್ಲ. ಆದರೆ, ಇವರು ಹತ್ತಾರು ಅನಾಥಶವಗಳಿಗೆ ತಾನೇ ಮುಂದೆ ನಿಂತು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಜಾತಿ-ಧರ್ಮಗಳ ಧರ್ಮಯುದ್ಧದಲ್ಲಿ ಈ ದೇಶಕ್ಕೆ ಬೇಕಾಗಿರುವುದು ಇಂಹತಾ ಮನಸ್ಥಿತಿ ಅನ್ನೋದು ಸ್ಥಳೀಯರ ಮಾತಾಗಿದೆ.

ಒಟ್ಟಾರೆ, ಚುನಾವಣೆ ವರ್ಷ ಎಂದೋ ಅಥವಾ ಜನಗಳ ಮನಸ್ಥಿತಿಯೇ ಬದಲಾಗ್ತಿದ್ಯೋ ಗೊತ್ತಿಲ್ಲ. ಆದರೆ, ದಿನದಿಂದ ದಿನಕ್ಕೆ ಸಮಾಜ ಆತಂಕದಲ್ಲೇ ಬದುಕುತ್ತಿರುವ ಸ್ಥಿತಿಯಂತು ನಿರ್ಮಾಣವಾಗಿದೆ. ನಾವು-ನಮ್ಮದು ಎನ್ನಬೇಕಾದ ಮನಸ್ಥಿತಿ ಕ್ರಮೇಣ ನಾನು-ನನ್ನದು ಎಂಬಂತಾಗಿದೆ.

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶನ ಜೊತೆ ರಾರಾಜಿಸಿದ ಸಾವರ್ಕರ್ ; ಆದೇಶ ಉಲ್ಲಂಘಿಸಿದ್ರೂ ಸಂಘಟಕರ ಸಮರ್ಥನೆ

ಸಮಾಜಕ್ಕೆ ಮಾದರಿ ಜುಬೇದಾ
ಸಮಾಜದ ಇಂದಿನ ಸ್ಥಿತಿಗೆ ಆ ಅಹಂ ಕೂಡ ಕಾರಣವಾಗಿದೆ. ಹಾಗಾಗಿ, ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬಂತಹಾ ವಿವಿಧತೆಯಲ್ಲಿ ಏಕತೆ ಇರಬೇಕಾದ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಅದರಲ್ಲೂ ಈ ವಿಚಾರದಲ್ಲಿ ಜುಬೇದಾರವರು ವಿಶೇಷ ಎನ್ನಿಸುತ್ತಾರೆ.
Published by:Thara Kemmara
First published: