• Home
  • »
  • News
  • »
  • state
  • »
  • Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಅಂಗಡಿ ತೆರೆಯಲು ಚಿಂತನೆ

Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಅಂಗಡಿ ತೆರೆಯಲು ಚಿಂತನೆ

ಈದ್ಗಾ ಮೈದಾನ

ಈದ್ಗಾ ಮೈದಾನ

ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿಯುತ್ತಿದೆ. ಈ ಕಾರಣದಿಂದ ಅಹೋರಾತ್ರಿ ಬಂದ್ ಆಚರಿಸಲು ತೀರ್ಮಾನಿಸಲಾಗ್ತಿದೆ ಎಂದು ವಿಶ್ವ ಸನಾತ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಹೇಳುತ್ತಾರೆ.

  • Share this:

ಚಾಮರಾಜಪೇಟೆ ಬಂದ್ ಗೆ (Chamarajpet Bandh) ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ವಿಶ್ವ ಸನಾತನ ಪರಿಷತ್ ಮುಂದಾಗಿವೆ. ಬಂದ್ ಮತ್ತು ಹೋರಾಟದ ಮುಂದುವರಿದ ಭಾಗವಾಗಿ ಈದ್ಗಾ ಮೈದಾನದಲ್ಲಿ (Idgah Maidana) 30 ಗಣೇಶ ವಿಗ್ರಹ ಮಾರಾಟ ಅಂಗಡಿಗಳನ್ನು (Ganesha Idol Shops) ತೆರೆಯಲು ಸಂಘಟನೆಗಳು ಯೋಚಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಎರಡು ದಿನಗಳ ಹಿಂದೆ ಸ್ಥಳೀಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Congress MLA Zameer Ahmed Khan), ‘ಶಾಂತಿ ಮತ್ತು ಎಲ್ಲರೂ ಒಳಗೊಳ್ಳುವಿಕೆ’ ಸಭೆ ಮಾಡಿದ್ದರು.


ಚಾಮರಾಜಪೇಟೆ ಬಂದ್ ನಲ್ಲಿ ಎಲ್ಲಾ ಹಿಂದೂ ಕಾರ್ಯಕರ್ತರು ಮತ್ತು ಸುತ್ತಮುತ್ತಲಿನ ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬಂದ್ ಸ್ವಯಂಪ್ರೇರಿತವಾಗಿದ್ದು, ಯಾವ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿಲ್ಲ. ಆದರೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿಯುತ್ತಿದೆ. ಈ ಕಾರಣದಿಂದ ಅಹೋರಾತ್ರಿ ಬಂದ್ ಆಚರಿಸಲು ತೀರ್ಮಾನಿಸಲಾಗ್ತಿದೆ ಎಂದು ವಿಶ್ವ ಸನಾತ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಹೇಳುತ್ತಾರೆ.


ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಿಬಾರದು ಯಾಕೆ?


ದಾಖಲೆಗಳ ಪ್ರಕಾರ ಜಮೀನು ಪಾಲಿಕೆಗೆ ಸೇರುತ್ತದೆ. ಈ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡಬೇಕಿದೆ. ಸಾರ್ವಜನಿಕರಿಗೆ ಭೂಮಿಯನ್ನು ಇತರ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡೋವರೆಗೂ ಮುಂದುವರಿಯಲಿದೆ. ಈ ಮೈದಾನದಲ್ಲಿ ಬಕ್ರಿದ್ ಅಂಗವಾಗಿ ಕುರಿ, ಮೇಕೆಗಳನ್ನು ಮಾರಾಟ ಮಾಡಲು ಅವಕಾಶ ಇರೋವಾಗ, ನಾವ್ಯಾಕೆ ಗಣೇಶ ಮೂರ್ತಿಗಳ ಮಳಿಗೆ ಆರಂಭಿಸಬಾರದು ಎಂದು ಭಾಸ್ಕರನ್ ಪ್ರಶ್ನೆ ಮಾಡುತ್ತಾರೆ.


ಇದನ್ನೂ ಓದಿ:  Chamarajpet Bandh: ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ; 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ


ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ಸೂಚನೆ


ಈ ಹಿಂದೆ ಚಾಮರಾಜಪೇಟೆಯಲ್ಲಿರುವ 2.5 ಎಕರೆ ಜಮೀನಿಗೆ ಯಾವುದೇ ಮಾಲೀಕರಿಲ್ಲ, 1974ರ ಕಂದಾಯ ದಾಖಲೆಗಳ ಪ್ರಕಾರ ಪಾಲಿಕೆಗೆ ಸೇರಿದೆ ಎಂದು ಬಿಬಿಎಂಪಿ ಹೇಳಿತ್ತು. ವಕ್ಫ್ ಬೋರ್ಡ್ ಅಡಿಯಲ್ಲಿನ ಕೇಂದ್ರ ಮುಸ್ಲಿಂ ಅಸೋಸಿಯೇಷನ್ ಜಮೀನು ಮಂಡಳಿಗೆ ಸೇರಿದ್ದು ಅಂತ ​​ಗೆಜೆಟ್ ನೋಟಿಫಿಕೇಶನ್ ನೀಡಿತ್ತು. ಹಾಗಾಗಿ ದಾಖಲೆಗಳ ಸಲ್ಲಿಸುವಂತೆ ಒಂದು ವಾರದ ಸಮಯಾವಕಾಶ ನೀಡಲಾಗಿದೆ. ಎರಡು ದಿನಗಳ ನಂತರ ನಾವು ಮತ್ತೊಮ್ಮೆ ಜ್ಞಾಪನೆ ಕಳುಹಿಸುತ್ತೇವೆ ಎಂದು ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಎಸ್‌ಎಂ ಶ್ರೀನಿವಾಸ್ ಹೇಳಿದ್ದಾರೆ.


ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಪ್ರಮುಖ ಬೇಡಿಕೆ ಏನು?


ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು. ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು. ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ನಾಮಕರಣ ಮಾಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್ ಗೆ ವಹಿಸಬಾರದು. ಜೊತೆಗೆ ಮೈದಾನ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ಸಮಿತಿ ರಚನೆಯಾಗಬೇಕು,


ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು ಎಂದು ಬೇಡಿಕೆ ಇಟ್ಟಿವೆ.


ಬಂದ್ ಯಶಸ್ವಿ, ಶಾಸಕರಿಗೆ ಇರಿಸು ಮುರಿಸು


ಬಂದ್ ಗೆ ಯಾರ ಬೆಂಬಲವಿಲ್ಲವೆಂದಿದ್ದ ಸ್ಥಳೀಯ ಶಾಸಕ‌ ಜಮೀರ್ ಗೆ ಬಂದ್ ಯಶಸ್ವಿಯಾಗಿರುವುದು ಇರಿಸುಮುರಿಸಿಗೆ ಕಾರಣವಾಗಿದೆ. ಬಂದ್ ಬಳಿಕ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದೆ ಇದ್ರೆ ಮುಂದಿನ ಹೋರಾಟದ ರೂಪುರೇಷೆ ಸಿದ್ದಗೊಳಿಸಲು ಒಕ್ಕೂಟ ಮುಂದಾಗಿದೆ.


ಇದನ್ನೂ ಓದಿ:  Chitradurga: ದಲಿತ, ಹಿಂದುಳಿದ ಮಠಾಧೀಶರ ಜೊತೆ RSS ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ!


ಚಾಮರಾಜಪೇಟೆ ಬಂದ್ ಹಿನ್ನೆಲೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬೆಳಗ್ಗೆ 8 ಗಂಟೆ ನಂತರ ಬಂದ್ ಆರಂಭವಾಗಿತ್ತು.

Published by:Mahmadrafik K
First published: