ಗಣೇಶ ಕೂರಿಸಲು ಬಿಬಿಎಂಪಿ ಜೊತೆಗೆ ಅಗ್ನಿಶಾಮಕ ದಳಕ್ಕೂ ತೆರಬೇಕು ಶುಲ್ಕ

news18
Updated:September 11, 2018, 5:01 PM IST
ಗಣೇಶ ಕೂರಿಸಲು ಬಿಬಿಎಂಪಿ ಜೊತೆಗೆ ಅಗ್ನಿಶಾಮಕ ದಳಕ್ಕೂ ತೆರಬೇಕು ಶುಲ್ಕ
news18
Updated: September 11, 2018, 5:01 PM IST
ಶ್ಯಾಮ್​ ಎಸ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.11): ನಗರಗಳಲ್ಲಿ ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿ ತೆರಿಗೆ ವಸೂಲಿ ಹಿನ್ನಲೆ ಈಗ ಅಗ್ನಿ ಶಾಮಕ ದಳ ಕೂಡ ದುಬಾರಿ ಶುಲ್ಕ ವಿಧಿಸಲು ಮುಂದಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೇ  ಅಡಿ, ದಿನದ ಲೆಕ್ಕದಲ್ಲಿ ತೆರಿಗೆ ನೀಡಬೇಕು ಎಂದು ಈ ಹಿಂದೆ ಬಿಬಿಎಂಪಿ ನಿಯಮ ಜಾರಿಗೆ ತಂದಿತ್ತು. ಬಿಬಿಎಂಪಿಗೆ ತೆರಿಗೆ ಕಟ್ಟುವ ಜೊತೆಗೆ ಈಗ ಅಗ್ನಿಶಾಮಕ ಇಲಾಖೆಯಲ್ಲಿಯೂ ಜನರು ಹಣ ತೆರಬೇಕಾದ ಅನಿವಾರ್ಯತೆ ಎದುರಾಗಿದೆ,

ಗಣೇಶ ಪ್ರತಿಷ್ಟಾಪನೆಗೆ ಸುರಕ್ಷತೆ ದೃಷ್ಟಿಯಿಂದ ಅಗ್ನಿಶಾಮಕ, ಪೊಲೀಸ್​ರಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯ. ಈ ಪತ್ರ ಪಡೆಯಲು ಈಗ ಅಗ್ನಿ ಶಾಮಕ ದಳದವರು ಹಣ ವಸೂಲಿ ಮಾಡುತ್ತಿದ್ದಾರೆ

ಅಗ್ನಿಶಾಮಕ ಇಲಾಖೆ ಎನ್​ಒಸಿ ನೀಡಲು 5 ಸಾವಿರ ರೂ. ನಿಗದಿ ಮಾಡಿದ್ದು, ಪಾಲಿಕೆಯ 63 ಏಕಗವಾಕ್ಷಿ ವಿಭಾಗದಲ್ಲಿ ಪರವಾನಗಿ ವಿತರಣೆ ಮಾಡುತ್ತಿದೆ. ಸಣ್ಣ ಸಣ್ಣ ಗಣೇಶಮೂರ್ತಿ ಕೂರಿಸುವರೆಗೂ ದುಬಾರಿ ಶುಲ್ಕ ವಿಧಿಸುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ,

ಈ ಹಿಂದೆ ಗಣೇಶ ಕೂರಿಸುವಾಗ ಅಗ್ನಿಶಾಮಕ ದಳ ನಿರಪೇಕ್ಷಣಾ ಪತ್ರಕ್ಕೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಇದಕ್ಕೆ ವಿನಾಯುತಿ ಇತ್ತು. ಆದರೆ ಈಗ ಬಿಬಿಎಂಪಿ ತೆರಿಗೆ ವಿಧಿಸಿರುವ ಹಿನ್ನಲೆ ಅಗ್ನಿಶಾಮಕ ಇಲಾಖೆ ಕೂಡ ಸುಲಿಗೆಗೆ ಮುಂದಾಗಿದೆ ಎಂದು ಗಣೇಶೋತ್ಸವ ಸಮಿತಿಗಳು ಅಸಮಾಧಾನ ವ್ಯಕ್ತಪಡಿಸಿದೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...