Ganesha Festival: ಗೌರಿ ಹಬ್ಬಕ್ಕೆ ಮತ್ತೆ ಕೊರೋನಾ ಕಂಟಕ; ಗಣೇಶ ಮೂರ್ತಿ ತಯಾರಕರ ಗೋಳು ಕೇಳೋರಿಲ್ಲ..!

ಬಾಗಲಕೋಟೆ ನಗರದ ಕಿಲ್ಲಾಗಲ್ಲಿಯಲ್ಲಿ ಕಳೆದ 50 ವರ್ಷದಿಂದ ಕರಿಗಾರ ಕುಟುಂಬ ಗಣೇಶನ ಮಣ್ಣಿನ ಮೂರ್ತಿಗಳನ್ನ ತಯಾರು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಆದ್ರೆ ಕಳೆದ ಎರಡು ವರ್ಷದಿಂದ ಕೋವಿಡ್ ಎಫೆಕ್ಟ್​​ನಿಂದಾಗಿ ಕಲಾವಿದರ ಕುಟುಂಬ ಅತಂತ್ರವಾಗಿದೆ.

ಗಣೇಶನ ಮೂರ್ತಿ ತಯಾರಿಕೆ

ಗಣೇಶನ ಮೂರ್ತಿ ತಯಾರಿಕೆ

  • Share this:
    ಬಾಗಲಕೋಟೆ(ಆ.19): ಪ್ರತಿವರ್ಷ ಗಣೇಶನ ಹಬ್ಬ ಬಂದ್ರೆ ಸಾಕು ಜನ್ರು ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬವನ್ನ ಜೋರಾಗಿ ಮಾಡುತ್ತಿದ್ರು. ಆದ್ರೆ ಕೊರೋನಾ ಬಂದದ್ದೇ ಬಂದಿದ್ದು, ಗಣೇಶನ ಹಬ್ಬ ಮಾತ್ರ ಆಗ್ತಿಲ್ಲ. ಸಾಲದ್ದಕ್ಕೆ ಗಣೇಶನ ಹಬ್ಬಕ್ಕೂ 6 ತಿಂಗಳ ಮುನ್ನವೇ ಗಣೇಶನ ಮೂರ್ತಿ ತಯಾರಿಸೋ ಕಲಾವಿದರ ಕುಟುಂಬಗಳು ಸಹ ಅತಂತ್ರವಾಗಿವೆ.

    ಹೌದು, ಕಲಾವಿದರ ಮನೆಯಲ್ಲಿ ಮಣ್ಣಿನಲ್ಲಿ ಕಲರ್ ಕಲರ್ ಆಗಿ  ಗಣೇಶನ ಮೂರ್ತಿಗಳು ಅರಳಿ ನಿಂತಿವೆ. ಕಳೆದ 50 ವರ್ಷದಿಂದ ನಿರಂತರ ಗಣೇಶನ ಮೂರ್ತಿ ತಯಾರಿಕೆಯಲ್ಲಿರೋ ಕುಟುಂಬಗಳು  ಕೋವಿಡ್ ಎಫೆಕ್ಟ್​​ನಿಂದಾಗಿ ಗೋಳಿಡುತ್ತಿವೆ.  ಹೌದು, ಪ್ರತಿವರ್ಷ ಗಣೇಶ ಹಬ್ಬ ಬಂದ್ರೆ ಸಾಕು ನಾಡಿನ ತುಂಬ ಸಂಭ್ರಮವೋ ಸಂಭ್ರಮ. ಆದ್ರೆ ಹಬ್ಬಕ್ಕೂ 6 ತಿಂಗಳು ಮುನ್ನವೇ ಮಣ್ಣಿನ ಗಣೇಶನ ಮೂರ್ತಿಗಳು ಕಲಾವಿದರ ಮನೆಯಲ್ಲಿ ತಯಾರಾಗ್ತವೆ. ಅದ್ರಲ್ಲೂ ಸಾರ್ವಜನಿಕ ವಿಗ್ರಹಗಳು ಸೇರಿದಂತೆ ಮನೆ ಮನೆಯಲ್ಲೂ ಪ್ರತಿಷ್ಠಾಪನೆಯಾಗೋ ಗಣೇಶನ ಮೂರ್ತಿಗಳನ್ನ ಇಲ್ಲಿ ನಿರ್ಮಿಸಲಾಗುತ್ತದೆ.

    ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

    ಬಾಗಲಕೋಟೆ ನಗರದ ಕಿಲ್ಲಾಗಲ್ಲಿಯಲ್ಲಿ ಕಳೆದ 50 ವರ್ಷದಿಂದ ಕರಿಗಾರ ಕುಟುಂಬ ಗಣೇಶನ ಮಣ್ಣಿನ ಮೂರ್ತಿಗಳನ್ನ ತಯಾರು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಆದ್ರೆ ಕಳೆದ ಎರಡು ವರ್ಷದಿಂದ ಕೋವಿಡ್ ಎಫೆಕ್ಟ್​​ನಿಂದಾಗಿ ಕಲಾವಿದರ ಕುಟುಂಬ ಅತಂತ್ರವಾಗಿದ್ದು, ಈ ಬಾರಿ ಸರ್ಕಾರ ನಮ್ಮತ್ತ ಕಣ್ತೆರೆದು ಪರಿಹಾರ ನೀಡಲಿ ಅಂತಾರೆ ಗಣೇಶನ ಮೂರ್ತಿ ತಯಾರಿಸೋ ಮಹಿಳೆಯರು.

    ಇನ್ನು ಮತ್ತೆ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ  ಈ ಬಾರಿಯೂ ಗಣೇಶನ ಹಬ್ಬಕ್ಕೆ ಕೊರೋನಾದ ಎಫೆಕ್ಟ್ ಬೀಳುತ್ತಿದೆ. ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಕೊಂಚ ಹಿನ್ನಡೆಯೂ ಆಗಬಹುದಾದ ಸಂದರ್ಭ ಎದುರಾಗಿದೆ. ಹೀಗಾಗಿ ಇಂದಿನ ಪ್ಲಾಸ್ಟರ್ ಆಪ್ ಪ್ಯಾರಿಸ್ ನಂತ ವಿಗ್ರಹಗಳ ಮುಂದೆ ಮಣ್ಣಿನ ಮೂರ್ತಿಗಳನ್ನ ತಯಾರಿಸಿ ತಮ್ಮದೇಯಾದ ಕಲಾವಂತಿಕೆಯ ಹಿರಿಮೆಯನ್ನ ಇಂದಿಗೂ ಉಳಿಸಿಕೊಂಡು ಬಂದಿರೋ ಕುಟುಂಬಗಳಿಗೆ ಮಾತ್ರ ತೀವ್ರ ತೊಂದರೆಯಾಗುತ್ತಿದೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರೋ ಕುಟುಂಬಗಳು ಕಣ್ಣೀರಿಡುವಂತಹ ಪರಿಸ್ಥಿತಿ ಎದುರಾಗಿದೆ.

    ಇದನ್ನೂ ಓದಿ:Second PUC Exams- ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; 18414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

    ಕೋವಿಡ್ ನಂತಹ ನಿಯಮಗಳನ್ನ ಮನೆ ಬಾಗಿಲಿಗೆ ಬಂದು ಅಂಟಿಸಿ ಹೋಗುವ ಸರ್ಕಾರದ ಅಧಿಕಾರಿಗಳು ನಮ್ಮ ಗೋಳು ನೋಡಿ ಒಂದಿಷ್ಟು ಸರ್ಕಾರದಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ ಅಂತಾರೆ ಗಣೇಶನ ಮೂರ್ತಿ ತಯಾರಕ ಶಿವಪ್ಪ ಕರಿಗಾರ.

    ಒಟ್ಟಿನಲ್ಲಿ ಈ ಬಾರಿಯ ಗಣೇಶನ ಹಬ್ಬಕ್ಕೂ ಕೊರೋನಾ ಎಫೆಕ್ಟ್ ತಟ್ಟಿದ್ದು, ಕಳೆದ ಹಲವು ವರ್ಷಗಳಿಂದ ಗಣೇಶನ ಮೂರ್ತಿ ತಯಾರಿಸುವ ಮೂಲಕ ದಯನೀಯ ಪರಿಸ್ಥಿತಿ ತಲುಪಿದ್ದಾರೆ. ಈ  ಕಲಾವಿದ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ ಅವರ ನೆಮ್ಮದಿಗೆ ಕಾರಣವಾಗುವಂತಾಗಲಿ ಅನ್ನೋದೆ ನಮ್ಮಯ ಆಶಯ.

    (ವರದಿ: ಮಂಜುನಾಥ್ ತಳವಾರ)
    Published by:Latha CG
    First published: