ಗಣೇಶ ಚತುರ್ಥಿ: ವಿಘ್ನವಿನಾಶಕನ ಪೂಜಾ ವಿಧಾನ ಹೇಗೆ?: ಇಲ್ಲಿದೆ ಸಂಪೂರ್ಣ ಡೀಟೆಲ್ಸ್​​

news18
Updated:September 13, 2018, 8:45 PM IST
ಗಣೇಶ ಚತುರ್ಥಿ: ವಿಘ್ನವಿನಾಶಕನ ಪೂಜಾ ವಿಧಾನ ಹೇಗೆ?: ಇಲ್ಲಿದೆ ಸಂಪೂರ್ಣ ಡೀಟೆಲ್ಸ್​​
  • Advertorial
  • Last Updated: September 13, 2018, 8:45 PM IST
  • Share this:
- ಜಿ. ಹರೀಶಕುಮಾರ್,  ನ್ಯೂಸ್ 18 ಕನ್ನಡ

ಈ ದಿನ 10 ದಿನಗಳ ಗಣಪತಿ ಹಬ್ಬದ ಮೊದಲ ದಿನ. ಗಣೇಶ ಚತುರ್ಥಿಯು ಈ ಆಚರಣೆಯ ನಾಲ್ಕನೇ ದಿನ ಆಗಮಿಸುತ್ತದೆ ಮತ್ತು ಈ ಇಡೀ ಆಚರಣೆಯ ಪ್ರಮುಖ ದಿನವಾಗಿರುತ್ತದೆ. ಈ ಹಬ್ಬವು ಭಾರತದಾದ್ಯಂತ ಹಲವೆಡೆಗಳಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲ್ಪಡುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಈ ಹಬ್ಬವನ್ನು ಅತ್ಯಂತ ಭಕ್ತಿ-ಭಾವಗಳಿಂದ ಆಚರಿಸುತ್ತಾರೆ. ಬಹುತೇಕ ಮನೆಗಳಲ್ಲಿ ಚತುರ್ಥಿಯಂದು ಗಣಪತಿಯ ವಿಗ್ರಹವನ್ನು ಮನೆಗೆ ತಂದು ಪೂಜೆ ಮಾಡುತ್ತಾರೆ.

ಆದರೆ ಹಬ್ಬವು ಸಾಮಾನ್ಯವಾಗಿ ಭಾದ್ರಪದ ಮಾಸದ ಮೊದಲ ದಿನ ಅಂದರೆ ಪ್ರಥಮದಂದು ಆರಂಭವಾಗುತ್ತದೆ. ಈ ದಿನ ಗಣಪತಿ ವಿಗ್ರಹವನ್ನು ಮನೆಗೆ ತಂದು ಮುಂದಿನ 9 ದಿನಗಳ ಕಾಲ ಸೂಕ್ತವಾದ ಜಾಗದಲ್ಲಿ ಕೂರಿಸಬೇಕು. ಈ ಗಣಪತಿಯನ್ನು ಕೂರಿಸುವ ಪ್ರಕ್ರಿಯೆಯನ್ನು ಸ್ಥಾಪನೆ ಅಥವಾ ಪ್ರತಿಷ್ಟಾಪನೆ ಎಂದು ಕರೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕೆಲವು ವಿಧಿ- ವಿಧಾನಗಳು ಇವೆ.

ಗಣಪತಿ ದೇವರ ಪೂಜೆ ಹೇಗೆ ಮಾಡಬೇಕು?

ಈ ಪೂಜೆಯು ಹತ್ತನೆ ದಿನದಂದು ಬರುವ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಗಣಪತಿಯನ್ನು ಪ್ರತಿಷ್ಠಾಪಿಸುವ ವಿಧಿ-ವಿಧಾನಗಳು ಅಷ್ಟೇನು ಕಷ್ಟವಲ್ಲ. ಕೇವಲ ಕೆಲವು ವಸ್ತುಗಳನ್ನು ತಯಾರಿ ಮಾಡಿಕೊಳ್ಳುವ ಮೂಲಕ ನೀವು ಗಣಪತಿಯನ್ನು ಪ್ರತಿಷ್ಠಾಪಿಸಬಹುದು. ಗಣಪತಿಯನ್ನು ಪ್ರತಿಷ್ಠಾಪಿಸುವ ವಿಧಿಯು 16 ಹಂತಗಳನ್ನು ಹೊಂದಿದೆ. ನೀವು ಮೊದಲನೆ ದಿನದಂದು ಅಥವಾ ಚತುರ್ಥಿಯಂದು ಪೂಜೆಯನ್ನು ಮಾಡುವುದಾದರೆ ಈ ವಿಧಿಗಳನ್ನು ತಪ್ಪದೆ ಪಾಲಿಸಿ.

ಮೂಷಿಕ ವಾಹನ ಗಣೇಶನ ಹಿಂದಿರುವ ರಹಸ್ಯವೇನು?

ಮೂರ್ತಿಯನ್ನು ಸ್ಥಾಪಿಸುವುದುಗಣಪತಿಯು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಜನಿಸಿದನು ಎಂದು ಪ್ರತೀತಿ. ಆದ್ದರಿಂದ ಮೂರ್ತಿಯನ್ನು ಮಧ್ಯಾಹ್ನ 12:30 ರಿಂದ 1 ಗಂಟೆಯೊಳಗೆ ಸ್ಥಾಪಿಸಬೇಕು. ಈ ಮೂರ್ತಿಯು ನಿಮ್ಮ ಕಣ್ಣಿಗೆ ಸದಾ ಬೀಳುವಂತಹ ಸ್ಥಳದಲ್ಲಿರಬೇಕು. ಪ್ರತಿಷ್ಟಾಪಿಸುವ ಸ್ಥಳವನ್ನು ಶುದ್ಧಗೊಳಿಸಬೇಕು ಮತ್ತು ಒಂದು ಬಟ್ಟೆಯನ್ನು ಹಾಸಬೇಕು (ಕೆಂಪು ಬಟ್ಟೆಯಾದರೆ ಒಳ್ಳೆಯದು). ಆ ಬಟ್ಟೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹರಡಿ ಅದರ ಮೇಲೆ ಗಣಪತಿಯನ್ನು ಸ್ಥಾಪಿಸಿ.

ದೀಪ ಪ್ರಜ್ವಲನ ಮತ್ತು ಸಂಕಲ್ಪ
ದೀಪವನ್ನು ಉರಿಸುವುದು ಅಥವಾ ದೀಪ ಪ್ರಜ್ವಲನ ಮತ್ತು ಸಂಕಲ್ಪವನ್ನು ಮೂರ್ತಿಯನ್ನು ಪ್ರತಿಷ್ಟಾಪಿಸಿದ ತಕ್ಷಣ ಮಾಡಬೇಕು. ಇದಕ್ಕಾಗಿ ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ನಿಮ್ಮ ಸಂಕಲ್ಪವನ್ನು ದೇವರ ಮುಂದೆ ಭಕ್ತಿ- ಭಾವಗಳಿಂದ ಇಡಿ.

ಆವಾಹನೆ
ದೇವರನ್ನು ಪ್ರಾರ್ಥನೆಯ ಮೂಲಕ ನಿಮ್ಮ ಮನೆಗೆ ಆಹ್ವಾಹಿಸುವ ಪ್ರಕ್ರಿಯೆಯನ್ನು ಆವಾಹನೆ ಎಂದು ಕರೆಯುತ್ತಾರೆ. ನಿಮ್ಮ ಮನೆಗೆ ಹೊಸದಾಗಿ ಗಣಪತಿ ಮೂರ್ತಿಯನ್ನು ತಂದಾಗ ಮಾತ್ರ ಈ ಪ್ರಕ್ರಿಯೆಯನ್ನು ಮಾಡಿ. ಈಗಾಗಲೇ ಇರುವ ಮೂರ್ತಿಯನ್ನು ನೀವು ಪೂಜಿಸುವಾಗ ಈ ಕ್ರಿಯೆಯನ್ನು ಮಾಡಬೇಕಾದ ಅವಶ್ಯಕತೆಯಿಲ್ಲ.

ಪ್ರತಿಷ್ಠಾಪನೆ
ಪ್ರತಿಷ್ಠಾಪನೆ ಎಂದರೆ ದೇವರ ಮೂರ್ತಿಯನ್ನು ಸ್ಥಾಪಿಸಿ, ಅದಕ್ಕೆ ದೇವರನ್ನು ಆಕರ್ಷಿಸುವ ಪ್ರಕ್ರಿಯೆ ಎಂದರ್ಥ. ಇದನ್ನು ಹೊಸದಾಗಿ ತಂದ ಮೂರ್ತಿಗಳಿಗೆ ಮಾತ್ರ ಮಾಡಲಾಗುತ್ತದೆ. ಪ್ರತಿಷ್ಠಾಪನೆಯನ್ನು ಮಾಡುವಾಗ ಈ ಮಂತ್ರವನ್ನು ಪಠಿಸಿ" ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ".

ಆಸನ ಸಮರ್ಪಣೆ
ಗಣಪತಿಯು ನಿಮ್ಮ ಮನೆಯಲ್ಲಿ ಕೂರಲು ಅಗತ್ಯವಿರುವ ಆಸನವನ್ನು ಸಮರ್ಪಿಸುವ ಕ್ರಿಯೆ.

ಆರ್ಧ್ಯ ಸಮರ್ಪಣೆ
ಸುಗಂಧ ಭರಿತವಾದ ಮತ್ತು ಶುದ್ಧವಾದ ನೀರನ್ನು ಗಣಪತಿಗೆ ಅರ್ಪಿಸುವುದು.

ಮಂತ್ರಗಳ ಉಚ್ಛಾರ
ಪೂಜೆಯನ್ನು ಮಾಡುವ ಮೊದಲು ಇದನ್ನು ಮಾಡಬೇಕು. ಒಂದು ಸ್ವಲ್ಪ ನೀರನ್ನು ತೆಗೆದುಕೊಂಡು ನಿಮ್ಮ ಬಾಯಿಯನ್ನು ತೊಳೆದುಕೊಳ್ಳಬೇಕು. ಮಂತ್ರಗಳ ಉಚ್ಛಾರ ಮಾಡುವ ಮೊದಲು ಬಾಯಿಯನ್ನು ಶುದ್ಧಿಗೊಳಿಸುವ ಪ್ರಕ್ರಿಯೆ ಇದು.

ಸ್ನಾನ
ಇದಾದ ನಂತರ ಮೂರ್ತಿಯನ್ನು ಈ ಕೆಳಕಂಡ ವಸ್ತುಗಳಿಂದ ಅಭಿಷೇಕ ಮಾಡಬೇಕು: ಪಂಚಾಮೃತ, ಹಾಲು, ತುಪ್ಪ, ಮೊಸರು, ಜೇನು ತುಪ್ಪ, ಬೆಲ್ಲ, ಸುಗಂಧ ದ್ರವ್ಯ ಮತ್ತು ಕಡೆಯದಾಗಿ ನೀರು.

ವಸ್ತ್ರ ಸಮರ್ಪಣೆ
ನಂತರ ದೇವರಿಗೆ ವಸ್ತ್ರಗಳನ್ನು ಅರ್ಪಿಸುವ ಕ್ರಿಯೆಯನ್ನು ಮಾಡಬೇಕು.

ಯಜ್ಞೋಪವಿತ ಸಮರ್ಪಣೆ
ಈ ಹಂತದಲ್ಲಿ ನೀವು ಮಾಡಿರುವ ಕರ್ಮಗಳನ್ನೆಲ್ಲ ಕಳಚುವಂತೆ ಬೇಡಿಕೊಳ್ಳುತ್ತ, ನಿಮ್ಮನ್ನು ನೀವು ದೇವರಿಗೆ ಶರಣಾಗತಿ ಮಾಡಿಕೊಂಡು, ದೇವರಿಗೆ ಯಜ್ಞೋಪವಿತವನ್ನು ಸಮರ್ಪಣೆ ಮಾಡಬೇಕು.

ಗಂಧ
ಗಣಪತಿಗೆ ಸುಗಂಧ ಭರಿತವಾದ ಗಂಧವನ್ನು ಸಮರ್ಪಿಸುವುದು ಎಂದರ್ಥ.

ಅಕ್ಷತೆ
ಅರಿಶಿಣವನ್ನು ಮಿಶ್ರಣ ಮಾಡಿದ ಅಕ್ಕಿ ಕಾಳನ್ನು ಗಣಪತಿಗೆ ಅರ್ಪಿಸುವುದು. ಈ ಮನೆಯಲ್ಲಿ ಧಾನ್ಯಗಳು ಸದಾ ಕಾಲ ಸಿಗಲಿ, ಸಂಪತ್ತು ಅಭಿವೃದ್ಧಿಯಾಗಲಿ ಎಂದು ಬೇಡುತ್ತ ಇದನ್ನು ಅರ್ಪಿಸಬೇಕು.

First published:September 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ