• Home
  • »
  • News
  • »
  • state
  • »
  • Ganesha Festival: ಮನೆಯಲ್ಲಿ ಕತ್ತಿ ಸುಳಿಬಾರದು, ಕೊಲೆ ಆಗಬಾರದು ಅಂದ್ರೆ ಹಿಂದೂಗಳ ಬಳಿ ವ್ಯವಹರಿಸಿ; ಮುತಾಲಿಕ್ ಕರೆ

Ganesha Festival: ಮನೆಯಲ್ಲಿ ಕತ್ತಿ ಸುಳಿಬಾರದು, ಕೊಲೆ ಆಗಬಾರದು ಅಂದ್ರೆ ಹಿಂದೂಗಳ ಬಳಿ ವ್ಯವಹರಿಸಿ; ಮುತಾಲಿಕ್ ಕರೆ

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ದೇಶಭಕ್ತಿಯ ಹಿನ್ನೆಲೆಯಲ್ಲಿ ಇನ್ನೊಂದು ಅನಾಹುತಕ್ಕೆ ಅವಕಾಶ ಮಾಡಬೇಡಿ. ಬೇಕಾಬಿಟ್ಟಿ ಏನ್ ಬೇಕಾದ್ದು ಮಾಡಬಹುದು ಅನ್ನೋದು ಧ್ವಜಕ್ಕೆ ಅವಮಾನ ‌ಮಾಡಿದಂತೆ.

  • Share this:

ಧಾರವಾಡ: ಸಾರ್ವಜನಿಕ ಗಣೇಶೋತ್ಸವಕ್ಕೆ (Ganeshotsava) ಸರ್ಕಾರ (Government) ಹಲವು ನಿರ್ಬಂಧ ಹಾಕುತ್ತಿದೆ. ಇದರಿಂದ ಎಷ್ಟೊಂದು‌ ಕಿರಿಕಿರಿ ಆಗುತ್ತಿದೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೆನೆ. ಇದು ಬಿಜೆಪಿ ಸರ್ಕಾರದಲ್ಲೇ (BJP Government) ಹೀಗಾಗುತ್ತಿದೆ ಎಂದರೆ ಹೇಗೆ ಎಂದು  ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅವರು ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರ್ಷಕ್ಕೊಮ್ಮೆ ಗಣೇಶೋತ್ಸವ ಹಬ್ಬ (Ganesha Festival 2022) ಬರುತ್ತದೆ. ಎಲ್ಲರೂ ಏಕತೆ ಮೂಡಿಸುವ ಹಬ್ಬ ಇದಾಗಿದೆ. ಅದರಲ್ಲೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿದರಿಂದ ಎಲ್ಲರಲ್ಲೂ ಒಗ್ಗಟ್ಟು ಮೂಡುತ್ತದೆ. ಆದ್ರೆ ಸರ್ಕಾರದ ನಿಬಂಧನೆಗಳಿಂದ ತೊಂದರೆ ಆಗುತ್ತಿದೆ  ಎಂದು ಆಕ್ರೋಶ ಹೊರ ಹಾಕಿದರು.


ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿದ್ಯುತ್, ಪೆಂಡಾಲ್, ಸ್ಪೀಕರ್, ಪೋಲಿಸ್ ಸ್ಟೇಷನ್, ಕಾರ್ಪೊರೇಷನ್ ಹಾಗೂ ಅಗ್ನಿಶಾಮಕ ದಳ ಪರವಾನಿಗೆ ಸಹ ಪಡೆಯಬೇಕಿದೆ. ಇದು ಎಷ್ಟೊಂದು‌ ಕಿರಿಕಿರಿ ಆಗುತ್ತಿದೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೇನೆ ಎಂದು ಕಿಡಿಕಾರಿದರು.


ಒಂದೇ ಕಡೆ ಅನುಮತಿ ನೀಡಿ


ಕರ್ನಾಟಕ ಒನ್ ಅಂತಾ ಸರ್ಕಾರ ಮಾಡಿದೆ. ಎಲ್ಲ ಬಿಲ್‌ಗಳನ್ನು ಒಂದೇ ಕಡೆ ತುಂಬುವ ಪ್ರಕ್ರಿಯೆ ಇದರಲ್ಲಿದೆ. ಅದೇ ಮಾದರಿಯಲ್ಲಿ ಗಣೇಶೋತ್ಸವಕ್ಕೆ ಒಂದೇ ಕಡೆ ಅನುಮತಿ ಕೊಡಬೇಕು. ಒಂದೇ ಕಡೆಗೆ ಅನುಮತಿ ವ್ಯವಸ್ಥೆ ಮಾಡಬೇಕು, ಸುಮ್ಮನೆ ಓಡಾಡಿಸುವುದು, ಸುತ್ತಾಡಿಸುವುದು ಬಿಡಬೇಕು ಎಂದರು.


ಇದನ್ನೂ ಓದಿ:  Belagavi Politics: ಸಿದ್ದರಾಮೋತ್ಸವ  ಬೆನ್ನಲ್ಲೇ ಲಿಂಗಾಯತ ನಾಯಕನ ಬರ್ತ್ ಡೇಗೆ ಬಿಜೆಪಿ ಪ್ಲಾನ್; ರಾಜ್ಯಪಾಲ ಆಗ್ತಾರಾ ಆ ಮುಖಂಡ?


ಮಸೀದಿಯವರು ಮೈಕ್ ಅನುಮತಿ ತೋರಿಸಲಿ


ಗಣೇಶೋತ್ಸವಕ್ಕೆ ಡಿಜೆ ಹಚ್ಚುವ ವಿಚಾರವಾಗಿ ಮಾತನಾಡಿ, ಡಿಜೆ ಹಚ್ಚದಂತೆ ನಾವೂ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಹೇಳಿದ್ದೇವೆ. ಡಿಜೆ ಹಚ್ಚಬಾರದು ಎಂಬುದಕ್ಕೆ ನಮ್ಮದೂ ಸಹಮತ ಇದೆ. ಆದರೆ ಮೈಕ್‌ಗೆ ಅನುಮತಿ ನಾವು ಪಡೆಯುವುದಿಲ್ಲ. ಮೊದಲು ಮುಸ್ಲಿಂ ಮಸೀದಿಗಳ ಮೈಕ್ ಅನುಮತಿ ತೋರಿಸಲಿ. ಎಷ್ಟು ಅನುಮತಿ ಪಡೆದಿದ್ದಾರೆ ತೋರಿಸಲಿ. ಆ ಬಳಿಕ ಬೇಕಾದರೆ ನಾವು ಗಣೇಶೋತ್ಸವವ ಮೈಕ್‌ಗೆ ಅನುಮತಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.


Ganesha Festival 2022 Pramod muthalik calls for purchasing in only hindu shops myd mrq
ಗಣೇಶ ವಿಗ್ರಹ


ಹಿಂದೂಗಳ ಬಳಿಯೇ ವ್ಯಾಪಾರ ಮಾಡಿ


ಸುಪ್ರಿಂಕೋರ್ಟ್ ಆದೇಶ ಅವರಿಗೆ ಇಲ್ಲವಾ? ನಮ್ಮ ಧಾರ್ಮಿಕ ಆಚರಣೆಗೆ ಯಾಕೆ ಅಡ್ಡಿ ಮಾಡುತ್ತೀರಿ? ಒಂದೇ ಕಡೆ ಅನುಮತಿ ಕೊಡಬೇಕು. ಇಲ್ಲದೇ ಹೋದಲ್ಲಿ ಬಹುದೊಡ್ಡ ಆಂದೋಲನ ಮಾಡಬೇಕಾಗುತ್ತದೆ. ಅಲ್ಲದೇ ರಾಜ್ಯದಲ್ಲಿ ಆಗುತ್ತಿರೊ ಸರಣಿ ಹತ್ಯೆಯನ್ನು ನೆನಪು ಮಾಡಿಕೊಳ್ಳಬೇಕಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅವರು ನೆನಪು ಮಾಡಿಕೋಳ್ಳಿ. ಈ ಕತ್ತಿ, ಕೊಲೆ ನಿಮ್ಮ ಮನೆಗೂ ಒಳಗಡೆ ಸೇರಿಕೊಳ್ಳಬಾರದು ಅಂತಿದ್ರೆ ಹಿಂದೂಗಳ ಕಡೆ ಮಾತ್ರ ವ್ಯಾಪಾರ, ವ್ಯವಹಾರ ಮಾಡಿ ಎಂದು ಮನವಿ ಮಾಡಿದರು.


ಪಾಲಿಸ್ಟರ್ ಧ್ವಜದ ಬಳಕೆ ಬೇಡ


ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆ ವಿಚಾರವಾಗಿ ಮಾತನಾಡಿದ ಮುತಾಲಿಕ್ ಅವರು, 75 ನೇ ವರ್ಷದ ಸ್ವಾತಂತ್ರ್ಯೋತ್ಸವ ಅಂಗವಾಗಿ ಮನೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂಬ ಉದ್ದೇಶದಿಂದ ಬಿಜೆಪಿ ಅವರು ಕೋಟಿಗಟ್ಟಲೇ ಧ್ವಜವನ್ನು ಹಾರಿಸಬೇಕು ಅನ್ನೋದು ಸ್ವಾಗತಾರ್ಹ. ಆದರೆ ಇಂದು ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆ ಮಾಡಲಾಗುತ್ತಿದೆ ಇದನ್ನು ನಿಲ್ಲಿಸಿಬೇಕಿದೆ ಎಂದು ಆಗ್ರಹಿಸಿದರು.


ದೇಶಭಕ್ತಿಯ ಹಿನ್ನೆಲೆಯಲ್ಲಿ ಇನ್ನೊಂದು ಅನಾಹುತಕ್ಕೆ ಅವಕಾಶ ಮಾಡಬೇಡಿ. ಬೇಕಾಬಿಟ್ಟಿ ಏನ್ ಬೇಕಾದ್ದು ಮಾಡಬಹುದು ಅನ್ನೋದು ಧ್ವಜಕ್ಕೆ ಅವಮಾನ ‌ಮಾಡಿದಂತೆ. ಖಾದಿ ಬಟ್ಟೆಯಲ್ಲಿ ಧ್ವಜ ತಯಾರಿಕೆಗೆ ಅವಕಾಶ ಇತ್ತು. ಅದನ್ನು ಬಿಟ್ಟು ಕೋಟಿಗಟ್ಟಲೇ ಧ್ವಜ ಬೇಕಿರೊ ಹಿನ್ನೆಲೆ ಪಾಲಿಸ್ಟರ್ ಬಟ್ಟೆ ಧ್ವಜಗಳನ್ನು ತಯಾರಿಕೆ ಮಾಡಲಾಗುತ್ತಿದೆ ಎಂದರು.


ರಾಷ್ಟ್ರಧ್ವಜಕ್ಕೆ ಕಿಮ್ಮತ್ತು ಇಲ್ಲವಾ?


ಈ ಪಾಲಿಸ್ಟರ್ ಧ್ವಜವನ್ನು ನೋಡಿದ್ರೆ ಗೊತ್ತಾಗುತ್ತದೆ, ಧ್ವಜಗಳ ಫಿನಿಶಿಂಗ್‌ ಇಲ್ಲ, ಬಟ್ಟೆ ಹರದಿದೆ. ರಾಷ್ಟ್ರಧ್ವಜಕ್ಕೆ‌ ಕಿಮ್ಮತ್ತು ಇಲ್ವಾ ಎಂದು ಪ್ರಶ್ನಿಸಿದ ಮುತಾಲಿಕ್, ದೇಶದ ಗೌರವವನ್ನು ಹಾಳು ಮಾಡುತ್ತಿದ್ದಿರಿ. ಧ್ವಜಕ್ಕೆ ಒಂದು ಅಳತೆ ಇದೆ, ಆದರೆ ಪಾಲಿಸ್ಟರ್ ಧ್ವಜಗಳಿಗೆ ಅಳತೆ ಇಲ್ಲ.


Ganesha Festival 2022 Pramod muthalik calls for purchasing in only hindu shops myd mrq
ಪಾಲಿಸ್ಟರ್ ಧ್ವಜ ತೋರಿಸುತ್ತಿರುವ ಪ್ರಮೋದ್ ಮುತಾಲಿಕ್


ಇದನ್ನೂ ಓದಿ:  Landslides: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ; ಕರಿಕೆ ರಸ್ತೆ, ಸಂಪಾಜೆಯ ಕಲ್ಲಾಳದಲ್ಲಿ ಭೂಕುಸಿತ


ಬೇಕಾಬಿಟ್ಟಿ ಮಾಡಿ ದೇಶಭಕ್ತಿ ತೋರಿಸುವ ಅವಶ್ಯಕತೆ ಇಲ್ಲ. ನಾವು ಕೂಡ ಒಂದು ಸಾವಿರ ಕಾರ್ಯಕರ್ತ‌ ಮನೆಯ ಮೇಲೆ ಧ್ವಜ ಹಾರಿಸಲಿದ್ದೇವೆ. ಎಲ್ಲವೂ ಖಾದಿ ಧ್ವಜಗಳನ್ನು ಬಳಕೆ ‌ಮಾಡುತ್ತಿದ್ದೆವೆ. ಪಾಲಿಸ್ಟರ್ ಧ್ವಜದಲ್ಲಿನ ತಪ್ಪುಗಳನ್ನು ತೋರಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು

Published by:Mahmadrafik K
First published: