HOME » NEWS » State » GANESHA FESTIVAL 2020 GANESHA FESTIVAL BOARD WORRIED ON GOVERNMENT GUIDELINES OF GANESHA FESTIVAL LG

ಗಣಪತಿ ಹಬ್ಬ ಆಚರಣೆಗೆ ಸರಕಾರದ ಮಾರ್ಗಸೂಚಿ; ಕಂಗಾಲಾದ ಕಾರವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು

ಕಾರವಾರದಲ್ಲಿ ಗಣಪತಿ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದ್ರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಇಲ್ಲಿನ ಸಮಿತಿಯವರು ಸರಳವಾಗಿ ಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದರು. ಆದ್ರೆ ಈ ನಡುವೆ ಸರಕಾರ ಸಾರ್ವಜನಿಕ ಜಾಗದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ನಿಷೇಧ ಹೇರಿದ್ರಿಂದ ದಿಕ್ಕೇ ತೋಚದಂತಾಗಿದೆ.

news18-kannada
Updated:August 15, 2020, 3:44 PM IST
ಗಣಪತಿ ಹಬ್ಬ ಆಚರಣೆಗೆ ಸರಕಾರದ ಮಾರ್ಗಸೂಚಿ; ಕಂಗಾಲಾದ ಕಾರವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು
ಸಿದ್ದವಾಗಿರುವ ಗಣೇಶ ಮೂರ್ತಿಗಳು
  • Share this:
ಕಾರವಾರ(ಆ.15): ಗಣಪತಿ ಹಬ್ಬ ಆಚರಣೆಗೆ ಸರಕಾರದಿಂದ ಕೊನೆಗೂ ಮಾರ್ಗಸೂಚಿ ಹೊರಬಿದ್ದಿದೆ. ಕೇವಲ ಒಂದು ವಾರ ಇದ್ದಾಗ ಸರಕಾರ ಹಬ್ಬ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿ ಸಾರ್ವಜನಿಕ ಗಣಪತಿ ಉತ್ಸವ ಆಚರಣೆ ಮಾಡುವವರನ್ನು ಪೇಚಿಗೆ ಸಿಲುಕಿಸಿದೆ.  ಎರಡು ದಿನಕ್ಕೋಸ್ಕರವಾದ್ರೂ ಗಣಪತಿ ಇಡಲು ಇಚ್ಚಿಸಿ ಗಣಪತಿ ಸಿದ್ದಪಡಿಸಲು ಸೂಚಿಸಿದ ಕಾರವಾರ  ಸಾರ್ವಜನಿಕ ಗಣೇಶೋತ್ಸವ ಸಮಿತಿಯುಂದ ಈಗ ವಿರೋಧದ ಕೂಗು ಕೇಳಿ ಬರುತ್ತಿದೆ.

ಸರಕಾರ ಕೊನೆಗೂ ಸಾರ್ವಜನಿಕ ಗಣೇಶೋತ್ಸವ ಸಮೀತಿಯವರ ಕೆಂಗೆಣ್ಣಿಗೆ ಗುರಿ ಆಗಿದೆ ಅಂದ್ರೆ ತಪ್ಪಾಗಲ್ಲ. ಸರಕಾರದ ಮಾರ್ಗಸೂಚಿ ಬಂದಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ವಿವಿಧ ಕಡೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಂಗಾಲಾಗಿದ್ದಾರೆ. ಸಾರ್ವಜನಿಕವಾಗಿ ಗಣಪತಿ ಕೂರಿಸುವದನ್ನ ನಿಷೇಧಿಸಿದ್ದು ಈಗಾಗಲೆ ಗಣಪತಿ ವಿಗ್ರಹ ಸಿದ್ದಪಡಿಸಲು ನೀಡಿದವರು ಮುಂದೇನು ಎನ್ನುವಂತಾಗಿದೆ.

ಗಣಪತಿಯನ್ನ ತರುವಂತೆಯೂ ಇಲ್ಲ, ಇತ್ತ ಕಲಾಕಾರರ ಮನೆಯಲ್ಲಿ ಸಿದ್ದವಾದ ಗಣಪತಿಯನ್ನು  ಮನೆಯಲ್ಲಿ ಇಡುವ ಹಾಗೆಯೂ ಇಲ್ಲ. ಇಂತ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದಿನ ಸ್ಥಳೀಯ ಜಿಲ್ಲಾಡಳಿತ ಸಾರ್ವಜನಿಕವಾಗಿ ಎರಡು ದಿನ ಹಬ್ಬ ಆಚರಿಸಬಹುದು ಎಂದು ಗೊಂದಲದಲ್ಲೆ ಹೇಳಿತ್ತು.

Coronavirus India: ಸ್ವಾತಂತ್ರ್ಯ ದಿನಾಚರಣೆ ದಿನ 25 ಲಕ್ಷ ದಾಟಿದ ಭಾರತದ ಕೊರೋನಾ ಸೋಂಕಿತರ ಸಂಖ್ಯೆ

ಇದನ್ನ ನಂಬಿದ್ದ ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಒಂದು ಅಥವಾ ಎರಡು ದಿನ ಹಬ್ಬ ಆಚರಣೆ ಮಾಡುವ ನಿಟ್ಟಿನಲ್ಲಿ ಗಣೇಶನ ವಿಗ್ರಹ ಸಿದ್ದಪಡಿಸಲು ಕಲಾಕಾರರಿಗೆ ಹೇಳಿದ್ದರು. ಈಗ ವಿಗ್ರಹ ಸಿದ್ದವಾಗಿದೆ, ಆದ್ರೆ ಪ್ರತಿಷ್ಠಾಪಿಸಲು ಅವಕಾಶ ಇಲ್ಲದಂತಾಗಿದೆ. ಅದೇನೆ ಇರಲಿ ಸರಕಾರದ ಈ ಗೊಂದಲಮಯ ಮಾರ್ಗಸೂಚಿಯನ್ನ ತಾವು ಪಾಲನೆ ಮಾಡುವುದು ಕಷ್ಟ. ಹೀಗಾಗಿ ಒಂದು ದಿನವಾದ್ರೂ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತೇವೆ ಅಂತಿದ್ದಾರೆ.

ಇನ್ನೂ ಸರಕಾರವಂತೂ ಖಡಕ್ ಆಗಿ ಯ್ಯಾವುದೆ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ಗಣೇಶನ ವಿಗ್ರಹ ತಂದು ಪ್ರತಿಷ್ಠಾಪಿಸಿ ಪೂಜಿಸುವಂತಿಲ್ಲ ಎಂದು ಹೇಳಿದೆ. ಆದ್ರೆ ಇದೇ ಮಾರ್ಗಸೂಚಿ ಹದಿನೈದು ದಿನದ ಮುಂಚಿತವಾಗಿ ನೀಡಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಾರವಾರದಲ್ಲಿ ಗಣಪತಿ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದ್ರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಇಲ್ಲಿನ ಸಮಿತಿಯವರು ಸರಳವಾಗಿ ಹಬ್ಬ ಆಚರಣೆ ಮಾಡಲು ನಿರ್ಧರಿಸಿದ್ದರು. ಆದ್ರೆ ಈ ನಡುವೆ ಸರಕಾರ ಸಾರ್ವಜನಿಕ ಜಾಗದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ನಿಷೇಧ ಹೇರಿದ್ರಿಂದ ದಿಕ್ಕೇ ತೋಚದಂತಾಗಿದೆ.

ಒಂದೆಡೆ ಕಲಾಕಾರರ ಮನೆಯಲ್ಲಿ ಸಿದ್ದವಾಗಿರುವ ಗಣೇಶನ ವಿಗ್ರಹ, ಇನ್ನೊಂದೆಡೆ ಎಲ್ಲಿ ಇಟ್ಟು ಪೂಜೆ ಮಾಡೋದು ಎಂಬ ದೊಡ್ಡ ತಲೆನೋವಿನ ಜೊತೆ ಧಾರ್ಮಿಕ ಭಾವನೆಯ ಪ್ರಶ್ನೆಯಾಗಿದೆ .ಇವೆಲ್ಲ ವಿಚಾರ ಕಣ್ಣಮುಂದೆ ಕಾಣುತ್ತಿದ್ದರೂ ಸರಕಾರ ಇಂತ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರನ್ನು ಪೇಚಿಗೆ ಸಿಲುಕುವಂತೆ ಮಾಡಿದೆ.

ಒಟ್ಟಾರೆ ವಿಘ್ನ ನಿವಾರಕನ ಹಬ್ಬಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1200 ಸಮಿತಿಯವರು ಸರಕಾರದ ಮಾರ್ಗಸೂಚಿಗೆ ಕಂಗಾಲಾಗಿದ್ದಾರೆ.  ಸಾರ್ವಜನಿಕ ಸ್ಥಳದಲ್ಲಿ ಪೂಜೆ ಮಾಡಲು ಒಂದು ದಿನವಾದರೂ ಅವಕಾಶ ಮಾಡಿಕೊಡಿ ಎನ್ನುವುದು ಅವರ ಆಗ್ರಹವಾಗಿದೆ. ಜತೆಗೆಪೂಜೆ ನಿರ್ಭಂದಿಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ಕೂಡಾ ಕೇಳಿ ಬರುತ್ತಿದೆ.
Published by: Latha CG
First published: August 15, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories