Ganesh Chaturthi 2020 : ಗೌರಿ ಗಣೇಶ ಹಬ್ಬಕ್ಕೆ ಹೂ, ಹಣ್ಣು ಬಲು ದುಬಾರಿ, ವಾರ್ಡಿಗೊಂದು ಸಾರ್ವಜನಿಕ ಗಣೇಶ ; ಮಾರುಕಟ್ಟೆಯಲ್ಲಿ ಕಾಣದ ಜನರು

ವಾರ್ಡಿಗೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಪ್ರತಿಷ್ಠಾಪನೆ ಸ್ಥಳ, ವಿಸರ್ಜನೆ, ಪರವಾನಿಗೆ ಕುರಿತು ಬೆಂಗಳೂರಿನ ಆಯಾ ವಲಯದ ಜಂಟಿ ಆಯುಕ್ತರು, ಡಿಸಿಪಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಆಗಸ್ಟ್​. 20): ನಾಳೆಯಿಂದ ಗೌರಿ ಗಣೇಶ ಹಬ್ಬ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಕಾಣುತ್ತಿದೆ. ವಾರ್ಡಿಗೆ ಒಂದೇ ದೊಡ್ಡ ಗಣಪ ಅವಕಾಶ ಹಿನ್ನೆಲೆ ಮಾರುಕಟ್ಟೆಯಲ್ಲಿ ಪುಟ್ಟ ಪುಟ್ಟ ಪರಿಸರ ಸ್ನೇಹಿ ಗಣಪ ಮೂರ್ತಿಗಳು ಹೆಚ್ಚಾಗಿ ಕಂಗೊಳಿಸುತ್ತಿವೆ. ಆದರೆ ಹೂಹಣ್ಣು ದರ ಬಲು ದುಬಾರಿಯಾಗಿದೆ. ಕೊರೋನಾ ಸಂಕಷ್ಟದಲ್ಲಿ ಈ ಬಾರಿ ಸರ್ಕಾರ ನೀಡಿದ ಷರತ್ತುಬದ್ಧ ಮಾರ್ಗಸೂಚಿಯಂತೆ ಗಣೇಶ ಹಬ್ಬ ಮಾಡಬೇಕಿದೆ.

ಈ ಬಾರಿ ಕೊರೋನಾ‌ ಸಂಕಷ್ಟದಲ್ಲಿ ಅತಿ ದೊಡ್ಡ ಹಬ್ಬ ಗೌರಿ ಗಣೇಶ ಆಗಮನವಾಗಿದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬದ ಕಳೆ ಕಾಣುತ್ತಿದೆ. ಬೆಳಗ್ಗೆ ಯಶವಂತಪುರ, ಕೆ ಆರ್ ಮಾರ್ಕೆಟ್, ಬನಶಂಕರಿ, ಬಸವನಗುಡಿ ಗಾಂಧಿಬಜಾರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಾಣಸಿಗಲಿಲ್ಲ. ಹೆಚ್ಚಿನ ಗ್ರಾಹಕರಿಲ್ಲದೆ ವ್ಯಾಪಾರ ವಹಿವಾಟು ಡಲ್ ಇತ್ತು. ಮಾರುಕಟ್ಟೆಯಲ್ಲಿ ಮಣ್ಣಿನ ಗಣೇಶ ಮೂರ್ತಿ, ಹೂ ಹಣ್ಣು, ತರಕಾರಿ, ಬಾಳೆ ಎಲೆ ಇರಿಸಿ ಮಾರಾಟ ಮಾಡಲು ರೆಡಿಯಿದ್ದರೂ ನಿರೀಕ್ಷೆಯಷ್ಟು ಗ್ರಾಹಕರ ಕಾಣಸಿಗುತ್ತಿದ್ದಿಲ್ಲ. ಸಂಜೆಯಷ್ಟೊತ್ತಿಗೆ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಯ್ತು. ಹೂಹಣ್ಣು ಬೆಲೆಯೂ ಮಾಮೂಲಿ ದಿನಕ್ಕಿಂತ ದುಪ್ಪಟ್ಟಾಗಿತ್ತು.

ಕಳೆದ ವರುಷಕ್ಕೆ ಹೋಲಿಸಿದಲ್ಲಿ ಈ ವರ್ಷ ವ್ಯಾಪಾರ ಫುಲ್ ಡಲ್ ಇದ್ದು, ಇದುವರೆಗೂ ಶೇ.20ರಷ್ಟು ವ್ಯಾಪಾರವಾಗಿಲ್ಲ ಎಂದು ವ್ಯಾಪಾರಿ ರಮೇಶ್ ಅಲವತ್ತುಕೊಳ್ಳುತ್ತಿದ್ದರು.

ಕೊರೋನಾ‌ ಇದ್ದರೂ ಹಬ್ಬ ಮಾಡುವುದು ತಪ್ಪಿಸುವುದಕ್ಕೆ ಆಗಲ್ಲವಲ್ಲ! ಈ ಬಾರಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದಕ್ಕೆ ಇನ್ನಷ್ಟು ಖುಷಿಯಲ್ಲಿಯೇ ಹಬ್ಬ ಮಾಡುತ್ತೇವೆ ಎಂದು ಗೃಹಿಣಿ ಸೌಮ್ಯ ತಿಳಿಸುತ್ತಾರೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಹೂ.ಗಳ ದರ

ಮಲ್ಲಿಗೆ ಮೊಗ್ಗು - 120 ರೂ. ಒಂದು ಮೊಳಬಿಡಿ ಹೂ - 100 ಗ್ರಾಂ 60 ರೂ.ಸೇವಂತಿಗೆ - 220 ರೂ. ಮಾರು, ಒಂದು ಮೊಳ 60 ರೂ, ಒಂದು ಡೇರಿ ಹೂ - 30 ರೂಪಾಯಿ, ಸಂಪಿಗೆ ಹೂ ಡಜನ್ - 30 ರೂ, ತಾವರೆ ಹೂ ಜೋಡಿ ನೂರು ರೂಪಾಯಿ, ಒಂದು ಎಕ್ಕೆ ಹಾರ 100 ರೂ.

ಹಣ್ಣುಗಳ ದರ

ಸೇಬು ಹಣ್ಣು -  180-200 ರೂ. ಒಂದು ಕೆ.ಜಿ, ಮೋಸಂಬಿ -  60 ರೂ. ಒಂದು ಕೆ ಜಿ, ದಾಳಿಂಬೆ - 80 ರೂ. ಒಂದು ಕೆ ಜಿ, ದ್ರಾಕ್ಷಿ - 160 ರೂ, ಬಾಳೆಹಣ್ದು - 50 ರೂ. ಕೆ.ಜಿ,

ಕಳೆದೊಂದು ತಿಂಗಳಿನಿಂದ ಗಣೇಶ ಹಬ್ಬ ಆಚರಣೆಯ ಬಗ್ಗೆ ಸರ್ಕಾರ ಸಾಕಷ್ಟು ಚಿಂತನೆ‌ ನಡೆಸಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದಿಲ್ಲ. ಆದರೆ ಈಗ ಸರ್ಕಾರ ಷರತ್ತುಬದ್ದ ಮಾರ್ಗಸೂಚಿ ನೀಡಿದೆ. ಅದರಂತೆ ವಾರ್ಡಿಗೆ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ. ಪ್ರತಿಷ್ಠಾಪನೆ ಸ್ಥಳ, ವಿಸರ್ಜನೆ, ಪರವಾನಿಗೆ ಕುರಿತು ಬೆಂಗಳೂರಿನ ಆಯಾ ವಲಯದ ಜಂಟಿ ಆಯುಕ್ತರು, ಡಿಸಿಪಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ‌. 20 ಜನಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಸಾರ್ವಜನಿಕ ಗಣೇಶ ಮೂರು ದಿನದಲ್ಲಿ ವಿಸರ್ಜನೆ ಮಾಡಬೇಕು. ವಿಸರ್ಜನೆ ಕುರಿತು ಬಿಬಿಎಂಪಿ‌ ಸೂಚನೆ ನೀಡಲಿದೆ.

ಇದನ್ನೂ ಓದಿ : ಸಂಪೂರ್ಣ ಭರ್ತಿಯಾದ ಕೆಆರ್​ಎಸ್ ಜಲಾಶಯ; ನಾಳೆ ಸಿಎಂ ಯಡಿಯೂರಪ್ಪ ಬಾಗೀನ ಅರ್ಪಣೆ

ಮನೆಯಲ್ಲಿ ಎರಡು ಅಡಿವರೆಗೆ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆ ಮನೆಯಲ್ಲಿಯೇ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.

ಗಣೇಶ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಮಾರುಕಟ್ಟೆಗೆ ಈಗಾಗಲೇ ತರಹೇವಾರಿ ಗಣಪ ಮೂರ್ತಿಗಳು ಬಂದಿವೆ. ಕೊರೋನಾ‌ ಎಫೆಕ್ಟ್ ಈ ವರ್ಷ ಗಣೇಶ ಹಬ್ಬದ ಭರಾಟೆ ಕಡಿಮೆಯಾಗಿದೆ. ಕಳೆದ ವರುಷಕ್ಕೆ ಹೋಲಿಸಿದರೆ ಈ ವರುಷ ವ್ಯಾಪಾರ ಫುಲ್ ಡೌನ್ ಆಗಿದೆ. ಸಾರ್ವಜನಿಕ ಪ್ರತಿಷ್ಠಾಪನೆ ಸಂಪೂರ್ಣ ಅವಕಾಶ ನೀಡದೇ ಇದ್ದುದರಿಂದ ವ್ಯಾಪಾರಿಗಳಿಗೆ ಇದು ಸಾಕಷ್ಟು ತೊಂದರೆಯಾಗಿದೆ.
Published by:G Hareeshkumar
First published: