Bengaluru: ಗಣೇಶನ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ; ಬೆಂಗಳೂರಿನಲ್ಲಿ ಮದ್ಯ ಮಾರಾಟ ಬಂದ್

ಎರಡು ದಿನಗಳ ಕಾಲ ಗಣೇಶನ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ವಿಸರ್ಜನಾ ಮೆರವಣಿಗೆ ನಡೆಯುವ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾದ ಸ್ಥಳಗಳಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಪಾಲಿಸುವ ನಿಟ್ಟಿನಲ್ಲಿ ಮದ್ಯಮಾರಾಟಕ್ಕೆ ನಿರ್ಬಂಧಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರಿನಲ್ಲಿ (Bengaluru) ಶನಿವಾರ ಹಾಗೂ ಭಾನುವಾರ ಗಣೇಶ ಮೂರ್ತಿಯ (Ganesha idol) ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ನಗರದ ಪೊಲೀಸರು ಮದ್ಯಮಾರಾಟಕ್ಕೆ ನಿರ್ಬಂಧ ಹೇರಿದ್ದಾರೆ. ನಗರದ ಪೊಲೀಸ್ ಕಮೀಷನರ್ ಸಿ ಹೆಚ್ ಪ್ರತಾಪ್ ರೆಡ್ಡಿ ಅವರು ಪೊಲೀಸ್ ಆಯುಕ್ತರ ದಂಡಾಧಿಕಾರಿ ಅಧಿಕಾರವನ್ನು ಬಳಸಿಕೊಂಡು ಆದೇಶ ಹೊರಡಿಸಿದ್ದಾರೆ.  ಎರಡು ದಿನಗಳ ಕಾಲ ಗಣೇಶನ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ವಿಸರ್ಜನಾ ಮೆರವಣಿಗೆ (procession) ನಡೆಯುವ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾದ ಸ್ಥಳಗಳಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಪಾಲಿಸುವ ನಿಟ್ಟಿನಲ್ಲಿ ಈ ನಿರ್ಬಂಧಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರತಾಪ್ ರೆಡ್ಡಿ (Pratap Reddy) ತಿಳಿಸಿದ್ದಾರೆ.

ಮದ್ಯದಂಗಡಿಗಳು ಮತ್ತು ಬಾರ್‌ಗಳಿರುವ ಪ್ರದೇಶಗಳು, ಸಮಯದ ವಿವರಗಳು ಈ ಕೆಳಗಿನಂತಿವೆ.


ಪೂರ್ವ ವಿಭಾಗ
ಕೆ ಜಿ ಹಳ್ಳಿ, ಡಿ ಜೆ ಹಳ್ಳಿ, ಗೋವಿಂದಪುರ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತಿನಗರ, ಪುಲಕೇಶಿನಗರ ಮತ್ತು ಹಲಸೂರು.
ಸಮಯ: ಬಾರ್‌ಗಳು ಮತ್ತು ಮದ್ಯದಂಗಡಿಗಳು ಸೆಪ್ಟೆಂಬರ್ 4 ರಂದು ಸಂಜೆ 6 ರಿಂದ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 6 ರವರೆಗೆ ಮುಚ್ಚಿರಬೇಕು.

ಇದನ್ನೂ ಓದಿ:  Dakshina Kannada: ಭೂಮಿಯಿಂದ ಚಿಮ್ಮುತ್ತೆ ಬಿಸಿನೀರಿನ ತೀರ್ಥ, ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯ!

ಈಶಾನ್ಯ ವಿಭಾಗ
ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ನ್ಯೂ ಟೌನ್ ಮತ್ತು ಕೊಡಿಗೇಹಳ್ಳಿ.
ಸಮಯ:  ಸೆಪ್ಟೆಂಬರ್ 3 ರಂದು ಸಂಜೆ 6 ರಿಂದ ಸೆಪ್ಟೆಂಬರ್ 5 ರ ಬೆಳಿಗ್ಗೆ 6 ರವರೆಗೆ ಮದ್ಯದಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ.

ಉತ್ತರ ವಿಭಾಗ
ಜೆ ಸಿ ನಗರ, ಹೆಬ್ಬಾಳ, ಆರ್‌ಟಿ ನಗರ ಮತ್ತು ಸಂಜಯನಗರ.
ಸಮಯ: ಬಾರ್‌ಗಳು ಮತ್ತು ಮದ್ಯದಂಗಡಿಗಳು ಸೆಪ್ಟೆಂಬರ್ 3 ರಂದು ಸಂಜೆ 6 ರಿಂದ ಸೆಪ್ಟೆಂಬರ್ 4 ರಂದು ಬೆಳಿಗ್ಗೆ 6 ರವರೆಗೆ ಮುಚ್ಚಿರಬೇಕು.

ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ಹೇಗೆ ಕ್ರಮ ಕೈಗೊಂಡಿದೆ?


ಈ ಬಾರಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ಗಣೇಶ ವಿಗ್ರಹಗಳ ವಿಸರ್ಜನೆಗೂ ವ್ಯವಸ್ಥೆ ಕಲ್ಪಿಸುವ ಜವಬ್ದಾರಿಯನ್ನು ನಗರದ ನಾಗರಿಕ ಸಂಸ್ಥೆ ಹೊತ್ತಿದೆ.

ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದ ನಿಮಿತ್ತ ಪ್ರತಿ ವಾರ್ಡ್‌ಗೆ ಒಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಿತ್ತು. ಸ್ಯಾಂಕಿ, ಹಲಸೂರು ಕೆರೆ ಸೇರಿದಂತೆ ನಗರದ 35 ಕೆರೆಗಳಲ್ಲಿ ಕೃತಕ ಟ್ಯಾಂಕ್‌ಗಳನ್ನು ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.

ಕಳೆದ ಎರಡು ವರ್ಷಗಳಲ್ಲಿ ವಿಸರ್ಜನೆಗಳು ಕಡಿಮೆ ಇದ್ದುದರಿಂದ ಸರೋವರಗಳು ಕೂಡ ಶುದ್ಧವಾಗಿದ್ದವು. ಆದರೆ ಬಿಬಿಎಂಪಿ ಅಂದಾಜಿಸಿರುವಂತೆ ಪೂರ್ವ ಕೋವಿಡ್‌ ಸ್ಥಿತಿಗೆ ನೀರಿನ ಮೂಲಗಳು ಮರಳಲಿವೆ ಎಂದಾಗಿದೆ. ಅಂದಾಜಿನ ಪ್ರಕಾರ ಪ್ರತೀ ವರ್ಷ 1.2 ಲಕ್ಷಕ್ಕಿಂತ ಅಧಿಕ ಗಣೇಶ ವಿಗ್ರಹಗಳ ವಿಸರ್ಜನೆಗೆ ಬಿಬಿಎಂಪಿ ಸಾಕ್ಷಿಯಾಗಿದೆ.

ಕೃತಕ ಟ್ಯಾಂಕ್‌ಗಳ ಜೊತೆಗೆ 150 ಮೊಬೈಲ್ ಟ್ಯಾಂಕ್‌ಗಳಿಗೂ ಬಿಬಿಎಂಪಿ ಟೆಂಡರ್ ಕರೆದಿದ್ದು ವಾರ್ಡ್ ಮಟ್ಟದಲ್ಲಿ ಸಣ್ಣ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುತ್ತದೆ ಅಂತೆಯೇ ನಗರದ ಪ್ರತಿ ವಾರ್ಡ್‌ಗಳಲ್ಲಿ ತಾತ್ಕಾಲಿಕ ಮೊಬೈಲ್ ವಿಸರ್ಜನಾ ಟ್ಯಾಂಕ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಇನ್ನು ವಿಸರ್ಜನಾ ಕೇಂದ್ರಗಳಲ್ಲಿ ಸಹಾಯ ವೇದಿಕೆಗಳು ಕೂಡ ಲಭ್ಯವಿದ್ದು ವಿಸರ್ಜನಾ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕೂಡ ಉಪಸ್ಥಿತರಿರುತ್ತಾರೆ ಎಂಬುದಾಗಿ ಬಿಬಿಎಂಪಿ ತಿಳಿಸಿದೆ. ದೊಡ್ಡ ವಿಗ್ರಹಗಳ ವಿಸರ್ಜೆನೆಗೆ ಕೆರೆಗಳು ಮತ್ತು ವಿಸರ್ಜನಾ ಕೇಂದ್ರಗಳ ಬಳಿ ಭಕ್ತರಿಗೆ ಕ್ರೇನ್‌ಗಳನ್ನು ಒದಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಆತಂಕ ಇದ್ದೇ ಇದೆ:

ಸಾರ್ವಜನಿಕ ಆಚರಣೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿರುವುದು ಆರೋಗ್ಯ ತಜ್ಞರಲ್ಲಿ ಕಳವಳಕ್ಕೆ ಕಾರಣವಾಗಿದೆ. COVID-19 ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆಯನ್ನು ವರದಿ ಮಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ ಎಂದು ಕೇಂದ್ರವು ಗುರುತಿಸಿದೆ.
Published by:Ashwini Prabhu
First published: