ಗಣೇಶ ವಿಸರ್ಜನೆಗಾಗಿ 22 ಕೆರೆಗಳ ವ್ಯವಸ್ಥೆ; ಪಾಲಿಕೆಯಿಂದ ಅಗತ್ಯ ಕ್ರಮ

news18
Updated:September 11, 2018, 10:55 PM IST
ಗಣೇಶ ವಿಸರ್ಜನೆಗಾಗಿ 22 ಕೆರೆಗಳ ವ್ಯವಸ್ಥೆ; ಪಾಲಿಕೆಯಿಂದ ಅಗತ್ಯ ಕ್ರಮ
news18
Updated: September 11, 2018, 10:55 PM IST
ಶ್ಯಾಮ್​ ಎಸ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.11): ಗೌರಿ-ಗಣೇಶ ಹಬ್ಬ ಬಂತೆಂದರೆ ಸಾಕು ಅದರ ವಿಸರ್ಜನೆಗೆ ಬಿಬಿಎಂಪಿ ಸಜ್ಜಾಗಿದೆ. ಗಣೇಶ ವಿಸರ್ಜನೆಗೆ ಅಗತ್ಯ ಕ್ರಮಗಳನ್ನು ಈಗಾಗಲೇ ರೂಪಿಸಿರುವ ಬಿಬಿಎಂಪಿ ಇದಕ್ಕಾಗಿ ಮುನ್ನೆಚ್ಚರಿಕೆಯನ್ನು ವಹಿಸಿದ್ದು, ರಾತ್ರಿ 11 ಗಂಟೆಯ ಬಳಿಕ ಯಾವುದೇ ಮೂರ್ತಿ ವಿಸರ್ಜನೆಗೆ ಅವಕಾಶವಿರುವುದಿಲ್ಲ ಎಂದು ಪಾಲಿಕೆ ಸೂಚನೆ ನೀಡಿದೆ.

ನಗರದಲ್ಲಿ ಈ ಬಾರಿ ಗಣೇಶನ ವಿಸರ್ಜನೆಗೆ ಸ್ಯಾಂಕಿ, ಹಲಸೂರು, ಯಡಿಯೂರು ಕೆರೆ ಸೇರಿದಂತೆ 22 ಕೆರೆಗಳ ವ್ಯವಸ್ಥೆ ಮಾಡಿದ್ದು ಸಾರ್ವಜನಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕ ಗಣಪತಿಗಳ ವಿಸರ್ಜನೆಗೆ ಪ್ರತಿವಲಯಗಳ ಪ್ರಮುಖ ಜಂಕ್ಷನ್​ ಮತ್ತು ಅವಶ್ಯವಿರುವ ಕಡೆ ಬಿಬಿಎಂಪಿ 282 ಕೃತಕ ಕೆರೆಗಳನ್ನು ನಿರ್ಮಿಸಲಾಗಿದೆ,.

ಕೆರೆ ಸುತ್ತಮುತ್ತ ಸೇರಿದಂತೆ ಕಲ್ಯಾಣಿ ಆವರಣದಲ್ಲಿಯೂ ತಡೆಗೋಡೆ ಮಅಡುವ ಮೂಲಕ ಪ್ರವೇಶದ್ವಾರದ ಬಗ್ಗೆ ಸೂಕ್ತ ಮಾಹಿತಿಯ ಬ್ಯಾನರ್​ ಹಾಕಲಾಗಿದೆ. ವಿಸರ್ಜನಾ ಕೇಂದ್ರದಲ್ಲಿ ನಡೆಯುವ ಅವಘಡ ತಪ್ಪಿಸಲು ಹತ್ತು ಮಂದು ನುರಿತ ಈಜುಗಾರರು, ಅಗತ್ಯ ಸಿಬ್ಬಂದಿಗಳನ್ನು ಮಾರ್ಗದರ್ಶನ ಮಾಡಲು ನೇಮಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಗಣೇಶನ ಮೇಲಿನ ಹೂ, ಪೂಜಾ ಸಾಮಾಗ್ರಿ ಸೇರಿದಂತೆ ತ್ಯಾಜ್ಯಗಳನ್ನು ಸಂಗ್ರಹಿಸಿ ಸೂಕ್ತರೀತಿಯಲ್ಲಿ ವಿಲೇವಾರಿ  ಮಾಡಲು ಪೌರ ಕಾರ್ಮಿಕ ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...