Ganesh Chaturthi 2022: ನೀರಿನ ಬಾಟಲಿಯಿಂದ ತಯಾರಾದ 20 ಅಡಿ ಗಣಪ!

ಬಾಗಲಕೋಟೆಯಲ್ಲಿ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ: ನೀರಿನ ಬಾಟಲ್ ನಿಂದ 20 ಅಡಿ ಗಣೇಶ..! 

ನೀರಿನ ಬಾಟಲಿಯಿಂದ ತಯಾರಾದ ಗಣಪತಿ

ನೀರಿನ ಬಾಟಲಿಯಿಂದ ತಯಾರಾದ ಗಣಪತಿ

 • Share this:
  ಬಾಗಲಕೋಟೆ: ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾ (Corona) ಭೀತಿ ಹಿನ್ನೆಲೆಯಲ್ಲಿ ಮಂಕಾಗಿದ್ದ ಗಣೇಶೋತ್ಸವವನ್ನ (Ganeshotsava) ಈ ಬಾರಿ ಭರ್ಜರಿಯಾಗಿ ಆಚರಣೆ ಮಾಡಲು ಮುಳುಗಡೆ ನಗರಿ ಬಾಗಲಕೋಟೆ (Bagalkote) ಜನತೆ ಸಜ್ಜಾಗಿದ್ದಾರೆ. ಪ್ರತಿಬಾರಿ ಗಣೇಶ ಮೂರ್ತಿ (Ganesh Idol) ತಯಾರಿಸುತ್ತಿದ್ದ ಸಾಂಪ್ರದಾಯಿಕ ಕಲಾವಿದರ ಕುಟುಂಬಗಳಿಗೆ ಈ ಬಾರಿ ಪಿಓಪಿ ಗಣೇಶನ (POP Ganesh) ಬ್ಯಾನ್​ (Ban) ಮಾಡಿದ್ದರಿಂದ ಆದಾಯ ತರುವಂತಾಗಿದೆ. ಈ ಮಧ್ಯೆ ಬಾಗಲಕೋಟೆಯಲ್ಲಿ ಗಣೇಶೋತ್ಸವಕ್ಕೆ ಸಿದ್ದತೆ ಆರಂಭವಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾ ಭೀತಿಯಿಂದ ಗಣೇಶೋತ್ಸವ ಅಷ್ಟೊಂದು ಅದ್ಧೂರಿಯಾಗಿ ನಡೆದಿರಲಿಲ್ಲ. ಆದ್ರೆ ಈ ಬಾರಿ ಗಣೇಶೋತ್ಸವವನ್ನ ಅದ್ಧೂರಿಯಾಗಿ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

  ಪಿಓಪಿ ಗಣೇಶ ಬ್ಯಾನ್, ಸಾಂಪ್ರಾದಾಯಿಕ ಮೂರ್ತಿ ತಯಾರಿಕೆಗೆ ಹುರುಪು

  ಈ ಮಧ್ಯೆಕಳೆದ 30 ರಿಂದ 40 ವರ್ಷಗಳವರೆಗೆ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿದ್ದ ಕುಟುಂಬಗಳಲ್ಲಿ ಈ ಬಾರಿ ಕೊಂಚ ನಿಟ್ಟುಸಿರುಬಿಡುವಂತಾಗಿದೆ. ಯಾಕಂದ್ರೆ ಜಿಲ್ಲಾಡಳಿತ ಪಿಓಪಿ ಗಣೇಶನ ಮೂರ್ತಿಗಳನ್ನ ಬ್ಯಾನ್​ ಮಾಡಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಮಣ್ಣಿನ ಗಣೇಶನ ಮೂರ್ತಿಗೆ ಬೇಡಿಕೆ ಬಂದಿದ್ದು, ಒಳಿತಾಗಿದೆ ಅಂತಾರೆ ಗಣೇಶನ ಮಣ್ಣಿನ ಮೂರ್ತಿ ತಯಾರಿಸುವ ಕುಟುಂಬಸ್ಥರು.

  ಗಣೇಶನಿಗೆ ಅಂತಿಮ ರೂಪ


  ವಾಟರ್ ಬಾಟಲಿಯಿಂದ ರೆಡಿಯಾಯ್ತು 20 ಅಡಿ ಎತ್ತರದ ಗಣಪ

  ಇನ್ನು ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ 20 ಅಡಿ ಎತ್ತರದ ವಾಟರ್‌ ಬಾಟಲ್‌ ಗಣೇಶನನ್ನ ತಯಾರಿಸಲಾಗಿದೆ. ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕಳೆದ 30 ವರ್ಷಗಳಿಂದ ವಿಶೇಷ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದಾರೆ.  ಪ್ರತಿ ವರ್ಷವೂ ನಿರುಪಯುಕ್ತ ವಸ್ತುಗಳಿಂದ ಗಣೇಶ ಮೂರ್ತಿ ತಯಾರಿಸಲಾಗುತ್ತೆ. ಕಳೆದ ವರ್ಷ ಕೊರೋನ ವ್ಯಾಕ್ಸಿನ್ ಖಾಲಿ ಡಬ್ಬಿಯಿಂದ ಗಣೇಶನನ್ನ ತಯಾರಿಸಿದ್ದರು. ಈ ಬಾರಿ ವಾಟರ್‌ ಬಾಟಲ್‌ ನಲ್ಲಿ ಬೃಹದಾಕಾರದ ಸುಮಾರು 20 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಿದ್ದಾರೆ.

  ಸಾಂಪ್ರದಾಯಿಕ ಗಣಪ


  ಇದನ್ನೂ ಓದಿ: Ganesh Chaturthi 2022: ಮುತ್ತಮ್ಮನ ಕೈಯಲ್ಲಿ ಜೀವತಳೆಯುವ ಸಾಂಪ್ರದಾಯಿಕ ಗಣಪ! ಮನೆಮಂದಿಯಿಂದಲೂ ಮೂರ್ತಿ ತಯಾರಿಕೆ

  ಹೋಟೆಲ್, ಡಾಬಾಗಳಿಂದ ಬಾಟಲಿ ಸಂಗ್ರಹ

  ಇದಕ್ಕಾಗಿ ಡಾಬಾಗಳು, ಹೊಟೆಲುಗಳಿಂದ ಖಾಲಿ ಬಾಟಲ್ ವಿದ್ಯಾರ್ಥಿಗಳು  ಸಂಗ್ರಹಿಸಿದ್ದಾರೆ. ಈ ಹಿಂದೆ ಗ್ಯಾರೇಜ್‌ ಗಣಪ, ಬಳಚೂರು ಗಣಪ, ನ್ಯೂಸ್‌ ಪೇಪರ್‌ ಗಣಪ, ಸ್ವದೇಶಿ  ಕಡ್ಡಿಪಟ್ಟಣ ಗಣಪ, ವಾಕ್ಸಿನ್‌ , ಸಂತ್ರಸ್ಥರ ರಕ್ಷಣ ಗಣೇಶ  ಸೇರಿದಂತೆ ಸಮಾಜಕ್ಕೆ ಸಂದೇಶ ನೀಡುವ ಹಲವು ಕಲಾಕೃತಿ ಮೂಲಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದರು.

  ಗಣೇಶ ಮೂರ್ತಿಗಳ ಖರೀದಿ ಭರಾಟೆ


  ಸಾಂಪ್ರದಾಯಿಕ ಮೂರ್ತಿಗಳಿಗೆ ಡಿಮ್ಯಾಂಡ್

  ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳನ್ನ ಪ್ರತಿಷ್ಠಾಪಿಸಲು ಸಿದ್ದತೆಗಳು ಆರಂಭವಾಗಿದ್ದು, ಇತ್ತ ಗಣೇಶನ ಮೂರ್ತಿ ತಯಾರಿಸುವ ಕುಟುಂಬಗಳು ಗಣೇಶನ ಮೂರ್ತಿಗಳಿಗೆ ಅಂತಿಮ ಸ್ವರೂಪ ನೀಡಲು ಮುಂದಾಗಿದ್ದಾರೆ. ಇತ್ತ ಪಿಓಪಿ ಗಣೇಶನ ಮೂರ್ತಿಬ್ಯಾನ್​ ಮಾಡಿದ್ದರಿಂದ ಈ ಬಾರಿ ಮಣ್ಣಿನ ಗಣೇಶ ಮೂರ್ತಿ ತಯಾರಕರಿಗೂ ಅನುಕೂಲವಾಗಿದೆ.

  ಪಿಓಪಿ ಮೂರ್ತಿ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಿ

  ಈ ಮಧ್ಯೆ ಹಿಂದೂ ಸಂಸ್ಕೃತಿ ಪ್ರಕಾರ ಮಣ್ಣಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಶ್ರೇಷ್ಠವಾಗಿದೆ. ಆದ್ರೆ ಇವುಗಳ ಮಧ್ಯೆ ಕೆಲವರು ಪಿಓಪಿ ಮಾರಾಟಕ್ಕೆ ಮುಂದಾಗಿದ್ದು ಅಂತವರ ವಿರುದ್ದ ಕ್ರಮವಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  ಇದನ್ನೂ ಓದಿ: Ganesh Chaturthi 2022: ಎಲ್ಲೆಲ್ಲೂ ನೀನಿರುವೆ ಮಹಾಗಣೇಶ! ಪತ್ತೆಯಾಯ್ತು 13ನೇ ಶತಮಾನದ ಪುಟ್ಟ ಗಣಪನ ಮೂರ್ತಿ!

  ಬಾಗಲಕೋಟೆಯಲ್ಲಿ ಸಂಭ್ರಮದ ಗಣೇಶೋತ್ಸವ

  ಒಟ್ಟಿನಲ್ಲಿ ಕೊರೋನಾ ದೂರವಾದ ಬಳಿಕ ಇದೀಗ ಬಾಗಲಕೋಟೆಯಲ್ಲಿ ಭರ್ಜರಿ ಗಣೇಶೋತ್ಸವಕ್ಕೆ ಜನರು ಮುಂದಾಗಿದ್ದು, ಯಾವುದೇ ವಿಘ್ನಗಳಿಲ್ಲದೆ ಈ ಬಾರಿ ಗಣೇಶೋತ್ಸವ ಯಶಸ್ವಿಯಾಗಲಿ ಅನ್ನೋದೆ ನಮ್ಮಯ ಆಶಯ.

  (ವರದಿ: ಮಂಜುನಾಥ್ ತಳವಾರ, ಬಾಗಲಕೋಟೆ)
  Published by:Annappa Achari
  First published: