Ganesh Chaturthi 2022: ಗಣೇಶ ಬಂದ, ಕಾಯಿ-ಕಡುಬು ತಿಂದ! ರಾಜ್ಯಾದ್ಯಂತ ಗಣಪತಿ ಹಬ್ಬದ ಸಂಭ್ರಮ

ಕೊರೋನಾದ (Corona) ಕಾರ್ಮೋಡ ಕಳೆದು ಈ ವರ್ಷ ಗಣೇಶನ ಹಬ್ಬ (Genesh Festival) ಬಂದಿದೆ. ಮತ್ತೊಂದೆಡೆ ರಾಜ್ಯದ ಹಲವೆಡೆ ಮಳೆಯ (Rain) ಅಬ್ಬರವೂ ಮುಂದುವರೆದಿದೆ. ಆದರೆ ಜನರು ಅದನ್ನೂ ಲೆಕ್ಕಿಸದೇ ಗಣೇಶನ ಹಬ್ಬವನ್ನು ಆಚರಿಸುತ್ತಿದ್ದಾರೆ. ಜನರು ತಮ್ಮ ಮನೆ, ಸಾರ್ವಜನಿಕ ಗಣೇಶೋತ್ಸವ (Ganeshotsav) ಹಾಗೂ ದೇಗುಲಗಳಲ್ಲಿ (Temple) ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.

ಗಣೇಶ ಚತುರ್ಥಿ ಸಂಗ್ರಹ ಚಿತ್ರ

ಗಣೇಶ ಚತುರ್ಥಿ ಸಂಗ್ರಹ ಚಿತ್ರ

  • Share this:
ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಗಣೇಶ ಚತುರ್ಥಿ (Ganesh Chaturthi) ಸಂಭ್ರಮ ಕಳೆಗಟ್ಟಿದೆ. ಕೊರೋನಾದ (Corona) ಕಾರ್ಮೋಡ ಕಳೆದು ಈ ವರ್ಷ ಗಣೇಶನ ಹಬ್ಬ (Genesh Festival) ಬಂದಿದೆ. ಮತ್ತೊಂದೆಡೆ ರಾಜ್ಯದ ಹಲವೆಡೆ ಮಳೆಯ (Rain) ಅಬ್ಬರವೂ ಮುಂದುವರೆದಿದೆ. ಆದರೆ ಜನರು ಅದನ್ನೂ ಲೆಕ್ಕಿಸದೇ ಗಣೇಶನ ಹಬ್ಬವನ್ನು ಆಚರಿಸುತ್ತಿದ್ದಾರೆ. ಜನರು ತಮ್ಮ ಮನೆ, ಸಾರ್ವಜನಿಕ ಗಣೇಶೋತ್ಸವ (Ganeshotsav) ಹಾಗೂ ದೇಗುಲಗಳಲ್ಲಿ (Temple) ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಮನೆಯಲ್ಲಿ ಗಣೇಶನ ಪೂಜೆ ನೆರವೇರಿಸಿದ್ರೆ, ಮಂಡ್ಯದಲ್ಲಿ (Mandya) ಹಿಂದೂ-ಮುಸ್ಲಿಮರು (Hindu-Muslim) ಒಟ್ಟಾಗಿ ಗಣೇಶನನ್ನು ಪೂಜಿಸಿದ್ದಾರೆ. ಇನ್ನು ರಾಜ್ಯದ ಪ್ರಸಿದ್ಧ ಗಣಪತಿ ದೇಗುಲಗಳಾದ ಇಡಗುಂಜಿ (Idagunji), ಸೌತಡ್ಕ (Southadka), ಆನೆಗುಡ್ಡ (Anegudda), ದೊಡ್ಡಗಣಪತಿ ದೇಗುಲ (Doddaganapathi Temple) ಸೇರಿದಂತೆ ಹಲವು ದೇಗುಲಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯ ನಡೆಯುತ್ತಿದೆ.

ಹಿಂದೂ ಮುಸ್ಲಿಮರಿಂದ ಗಣೇಶನಿಗೆ ಪೂಜೆ

ಒಂದೆಡೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವದ ಸಲುವಾಗಿ ಘರ್ಷಣೆ ನಡೆಯುತ್ತಿದ್ದರೆ, ಮಂಡ್ಯದ ಬೀಡಿ ಕಾಲೋನಿಯಲ್ಲಿ ಭಾವೈಕ್ಯದ ಸಂಕೇತವಾಗಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿನ ಹಿಂದೂ, ಮುಸ್ಲಿಮರು ಸೇರಿ ಗಣೇಶ ಚತುರ್ಥಿ ಆಚರಿಸಿದ್ದಾರೆ.



ಇಡಗುಂಜಿಯಲ್ಲಿ ಮುಂಜಾನೆಯಿಂದಲೇ ಪೂಜೆ-ಪುನಸ್ಕಾರ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಕ್ಷೇತ್ರದಲ್ಲಿ ಜನಸಾಗರವೇ ಹರಿದು ಬರುತ್ತಿದೆ. ಸುಮಾರು 3 ಕಿ.ಮೀ. ದೂರದವರೆಗೂ ಭಕ್ತರ ಕ್ಯೂ ಇದೆ. ಮುಂಜಾನೆ 4ರಿಂದಲೇ ಆಗಮಿಸುತ್ತಿರುವ ಜನರು, ದೇಗುಲದ ಆವರಣದಲ್ಲಿ ಸಾಲಾಗಿ ಬಂದು ಗಣೇಶನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಸಾವಿರಾರು ಭಕ್ತಾಧಿಗಳ ಆಗಮನದ ಹಿನ್ನೆಲೆ ಕ್ವಿಂಟಾಲ್‌ಗಟ್ಟಲೇ ಪಂಚಕಜ್ಜಾಯ ಮಾಡಲಾಗಿದೆ.



ಜೊತೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ಇಡಗುಂಜಿ ಕ್ಷೇತ್ರದಲ್ಲಿ 200 ಗಣಹೋಮು ನಡೆಯಲಿದ್ದು, ಸುಮಾರು 40,000 ತೆಂಗಿನಕಾಯಿ ವಿನಾಯಕನಿಗೆ ಅರ್ಪಣೆಯಾಗಲಿದೆ.

ಇದನ್ನೂ ಓದಿ: Southadka: ಘಂಟೆಗೆ ಒಲಿಯುತ್ತಾನೆ ಈ ಗಣೇಶ! ಸೌತಡ್ಕದ ಬಯಲಲ್ಲಿ ಗಣಪ ನಿಂತ ಕಥೆಯೇ ರೋಚಕ

ಬಸವನಗುಡಿಯಲ್ಲಿ ವಿಶೇಷ ಪೂಜೆ

ರಾಜಧಾನಿ ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇಗುಲದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಅಪಾರ ಸಂಖ್ಯೆಯ ಭಕ್ತರು ಬಂದು, ದೊಡ್ಡ ಗಣಪತಿ ದರ್ಶನ ಪಡೆಯುತ್ತಿದ್ದಾರೆ. ಹಬ್ಬದ ನಿಮಿತ್ತ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ.



ಕುಮಾರಸ್ವಾಮಿ ಮನೆಯಲ್ಲಿ ಗಣೇಶನಿಗೆ ಪೂಜೆ

ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿರವರು ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಿದರು.  ಬಿಡದಿಯ ಕೇತಗಾನಹಳ್ಳಿಯ  ತಮ್ಮ ತೋಟದಲ್ಲಿ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿದರು.



ರೇಣುಕಾಚಾರ್ಯ ಮನೆಯಲ್ಲಿ ಸಂಭ್ರಮ

ಶಾಸಕ ಎಂಪಿ ರೇಣುಕಾಚಾರ್ಯ ಅವರು ಕುಟುಂಬಸ್ಥರೊಂದಿಗೆ ಗಣೇಶನಿಗೆ ಪೂಜೆ ಸಲ್ಲಿಸಿದರು. ದಾವಣಗೆರೆಯ ಹೊನ್ನಾಳಿಯಲ್ಲಿರುವ ತಮ್ಮ ಹಿರೇಕಲ್ಮಠ ನಿವಾಸದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಕುಟುಂಬಸ್ಥರೊಂದಿಗೆ ಪೂಜೆ ಸಲ್ಲಿಸಿದ್ದಾರೆ.

ಮೈಸೂರಿನಲ್ಲಿ ಆನೆಗಳಿಗೆ ವಿಶೇಷ ಪೂಜೆ

ಮೈಸೂರು ಅರಮನೆಯಲ್ಲಿ ಗಣೇಶ ಚತುರ್ಥಿಯ ಸಡಗರ ಮನೆಮಾಡಿದೆ. ಅರಣ್ಯ ಇಲಾಖೆಯಿಂದ ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ಆನೆಗಳಿಗೆ ಹೂವುಗಳಿಂದ ಅಲಂಕರಿಸಿ ಫಲತಾಂಬೂಲ ನೀಡಿ ಸತ್ಕರಿಸಲಾಯ್ತುಯ ಗಣೇಶ ಪ್ರತಿಮೆಗೆ ಬದಲಾಗಿ ಗಣಪನ ಪ್ರತಿರೂಪ ಆನೆಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಆನೆಗಳಿಗೆ ಚಕ್ಕುಲಿ, ಕಜ್ಜಾಯ, ನಿಪ್ಪಟ್ಟು, ಕೋಡುಬಳೆ, ಆನೆಗೆ ಪ್ರಿಯವಾದ ಬೆಲ್ಲ, ಕಬ್ಬು, ಜೋಳ ಇತರೆ ಹಣ್ಣುಗಳ ಇಟ್ಟು ಪೂಜೆ ಮಾಡಲಾಯ್ತು.

ಇದನ್ನೂ ಓದಿ: Ganesh Chaturthi 2022: ಮುತ್ತಮ್ಮನ ಕೈಯಲ್ಲಿ ಜೀವತಳೆಯುವ ಸಾಂಪ್ರದಾಯಿಕ ಗಣಪ! ಮನೆಮಂದಿಯಿಂದಲೂ ಮೂರ್ತಿ ತಯಾರಿಕೆ

ಶಿವಮೊಗ್ಗದಲ್ಲಿ ಕಳೆಗಟ್ಟಿದ ಸಂಭ್ರಮ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ನಗರದೆಲ್ಲೆಡೆ ಗಣಪತಿ ಬಪ್ಪ ಮೋರೆಯಾ ಘೋಷಣೆ ತುಂಬಿದೆ. ನಗದಲ್ಲಿ ಸುಮಾರು 2500 ಸಾವಿರಕ್ಕೂ ಸಾರ್ವಾಜನಿಕ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಈವರಿಗೆ 4 ಸಾವಿರಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಮಾರಾಟವಾಗಿವೆ.
Published by:Annappa Achari
First published: